‘ಬಿಕಿನಿ, ಘುಂಘಟ್, ಜೀನ್ಸ್ ಅಥವಾ ಹಿಜಾಬ್ ಇತ್ಯಾದಿಗಳನ್ನು ತೊಡುವುದು ಮಹಿಳೆಯರ ಹಕ್ಕು ! ’ – ಪ್ರಿಯಾಂಕಾ ವಾದ್ರಾ

ಪ್ರಿಯಾಂಕಾ ವಾದ್ರಾ ಹೇಳುವಂತಹ ಅಧಿಕಾರವನ್ನು ಯಾರೂ ನಿರಾಕರಿಸುವುದಿಲ್ಲ. ಇಲ್ಲಿ ಕೇವಲ ಮಹಾವಿದ್ಯಾಲಯಕ್ಕೆ ಸಮವಸ್ತ್ರ ಧರಿಸಿ ಬರುವ ಪ್ರಶ್ನೆಯಾಗಿದೆ. ಆದರೆ ಪ್ರಿಯಾಂಕಾ ವಾದ್ರಾರವರಿಗೆ ನಿಯಮವನ್ನು ಉಲ್ಲಂಘಿಸಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಧರಿಸಿ ಬರುವುದು ಯೋಗ್ಯವಾಗಿದೆ, ಎಂದು ಅನಿಸಿದರೆ ಅದನ್ನು ಅವರು ತಮ್ಮ ಪಕ್ಷದಿಂದ ಅಧಿಕೃತವಾಗಿ ಘೋಷಿಸಬೇಕು.

ಬಿಕಿನಿ, ಘುಂಘಟ, ಜೀನ್ಸ್ ನ್ನು ಎಲ್ಲಿ ಮತ್ತು ಯಾವಾಗ ಧರಿಸಬೇಕು, ಎಂಬುದರ ಅನೇಕ ನಿಯಮಗಳನ್ನು ಸಮಾಜವು ಪಾಲಿಸುತ್ತದೆ. ಹಾಗೆಯೇ ಅದನ್ನು ಎಲ್ಲಿ ಧರಿಸಬಾರದು ಎಂಬುದರ ನಿಯಮಗಳನ್ನು ಅನೇಕ ಸಂಸ್ಥೆಗಳು ಹಾಗೂ ಸರಕಾರವು ನಿರ್ಮಿಸಿದೆ. ಸರಕಾರಿ ಅಧಿಕಾರಿಗಳು ಜೀನ್ಸ್ ಧರಿಸಿ ಬರಲಾರರು, ಎಂಬುದು ಪ್ರಿಯಾಂಕಾ ವಾದ್ರಾರವರಿಗೆ ತಿಳಿದಿರಬಹುದು! ಆದುದರಿಂದಲೇ ಹಿಜಾಬನ್ನು ಮಹಾವಿದ್ಯಾಲಯದಲ್ಲಿ ಧರಿಸಬಾರದು ಎಂಬ ನಿಯಮವಿದ್ದರೆ ಅದನ್ನು ಪಾಲಿಸಲೇಬೇಕು !

ಶಾಲೆಯಲ್ಲಿನ ಹಿಜಾಬಿನ ಮೇಲೆ ನಿರ್ಬಂಧ ಹೇರುವುದು ಆಯೋಗ್ಯವಾಗಿದೆ ಎಂದು ಹೇಳಿಕೆಯನ್ನು ನೀಡಿರುವ ಪ್ರಿಯಾಂಕಾ ವಾದ್ರಾರವರು ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ಹುಡುಗಿಯರಿಗೆ ಕೈಯ ಮದರಂಗಿ, ಕಿವಿಯ ಓಲೆ ಇತ್ಯಾದಿಗಳ ಮೇಲಿರುವ ನಿರ್ಬಂಧದ ಬಗ್ಗೆ ಏಕೆ ಯಾವಾಗಲೂ ಮಾತನಾಡುವುದಿಲ್ಲ ? ಇದರಿಂದ ವಾದ್ರಾರವರ ಹಿಂದೂದ್ವೇಷದ ದ್ವಿಮುಖ ನೀತಿ ಸ್ಪಷ್ಟವಾಗಿ ಕಂಡುಬರುತ್ತದೆ !

ನವ ದೆಹಲಿ – ‘ಬಿಕಿನಿ’ (ಮಹಿಳೆಯರ ಒಳಉಡುಪು) ಇರಲಿ, ಘುಂಘಟ ಇರಲಿ, ಜೀನ್ಸ್ ಅಥವಾ ಹಿಜಾಬ್ ಇರಲಿ ತಾವು ಏನು ಧರಿಸಬೇಕು ಎಂಬುದನ್ನು ನಿರ್ಧರಿಸುವ ಅಧಿಕಾರವು ಮಹಿಳೆಯರಿಗಿದೆ. ಈ ಅಧಿಕಾರವನ್ನು ಸಂವಿಧಾನವು ನೀಡಿದೆ. ಮಹಿಳೆಯರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಎಂದು ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾರವರು ಕರ್ನಾಟಕದಲ್ಲಿನ ಹಿಜಾಬ್ ಪ್ರಕರಣದ ವಿಷಯದಲ್ಲಿ ಟ್ವೀಟ್ ಮಾಡಿದ್ದಾರೆ.