ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ

400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ವೈಷ್ಣವ ಸಂತ ರಾಮಾನುಜಾಚಾರ್ಯ ಸ್ವಾಮಿ ಇವರ ಮೂರ್ತಿಯನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ವಸಂತ ಪಂಚಮಿಯ ಮುಹೂರ್ತದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು.

ಭಾಗ್ಯನಗರ (ತೆಲಂಗಾಣಾ) – ಭಾರತದಲ್ಲಿ ಮೊಟ್ಟಮೊದಲು ಸಮಾನತೆಯ ಸಂದೇಶ ನೀಡುವ ವೈಷ್ಣವ ಸಂತ ರಾಮಾನುಜಾಚಾರ್ಯ ಸ್ವಾಮಿ ಇವರ `ಸ್ಟ್ಯಾಚು ಆಫ್ ಇಕ್ವಾಲಿಟಿ’ (ಸಮಾನತೆಯ ಪ್ರತಿಕ ಇರುವ ಪುತ್ತಳಿ) ಹೆಸರಿನ 216 ಅಡಿ ಎತ್ತರದ ಮೂರ್ತಿಯನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ವಸಂತ ಪಂಚಮಿಯ ಮುಹೂರ್ತದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಇದು ಅಷ್ಟ ಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ದೊಡ್ಡ ಮೂರ್ತಿಯಾಗಿದೆ. `ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್’ ನಲ್ಲಿ ಮೂರ್ತಿಯನ್ನು ಸೇರಿಸಲಾಗಿದೆ. ಸುಮಾರು 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಭವ್ಯ ರಾಮಾನುಜಾಚಾರ್ಯ ದೇವಸ್ಥಾನದ ಮೇಲೆ ಈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ರಾಮಾನುಜಾಚಾರ್ಯರ ಎರಡನೆಯ ಮೂರ್ತಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ, ಇದು 120 ಕೇಜಿ ಬಂಗಾರದ್ದಾಗಿದೆ. ಸಂತ ರಾಮಾನುಜಾಚಾರ್ಯ ಸ್ವಾಮಿ ಇವರ ಜನನಕ್ಕೆ 1001 ವರ್ಷಗಳು ಪೂರ್ಣವಾದವು.