ಭಾರತದಲ್ಲಿ ಅಸಹಿಷ್ಣುತೆಯು ಹೆಚ್ಚುತ್ತಿರುವ ಬಗ್ಗೆ ಹೇಳುವ ಅಮೇರಿಕಾವು ಅಲ್ಲಿನ ಸಮಾಜದಲ್ಲಿ ಗಾಂಧಿ ವಿರೋಧವು ಏಕೆ ಹೆಚ್ಚುತ್ತಿದೆ, ಎಂಬುದರ ಮಾಹಿತಿಯನ್ನು ಜಗತ್ತಿಗೆ ಮೊಟ್ಟಮೊದಲು ನೀಡಬೇಕು !- ಸಂಪಾದಕರು
ನ್ಯೂಯಾರ್ಕ್ (ಅಮೇರಿಕಾ) – ಇಲ್ಲಿನ ಮೆನಹೇಟನ್ ಭಾಗದಲ್ಲಿ ಅಜ್ಞಾತರು ಮೋಹನದಾಸ ಗಾಂಧಿಯವರ ಕಂಚಿನ ಪುತ್ಥಳಿಯನ್ನು ಒಡೆದು ಹಾಕಿದ್ದಾರೆ. ಈ ಘಟನೆಯ ಬಗ್ಗೆ ಭಾರತೀಯ ವಾಣಿಜ್ಯ ದೂತಾವಾಸವು ಬೇಸರ ವ್ಯಕ್ತಪಡಿಸಿದೆ. ಅಮೇರಿಕಾದಲ್ಲಿ ವಾಸಿಸುವ ಭಾರತೀಯರೂ ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತೀಯ ದೂತಾವಾಸವು ‘ಸಂಬಂಧಿತ ಪ್ರಕರಣದ ಬಗ್ಗೆ ಅಮೇರಿಕಾದ ವಿದೇಶಿ ವಿಭಾಗದ ಬಳಿ ದೂರು ನೋಂದಾಯಿಸಲಾಗಿದೆ. ಇಂತಹ ದ್ವೇಷಪೂರಿತ ಕೃತಿಗೆ ಜವಾಬ್ದಾರರಾಗಿರುವವರ ಮೇಲೆ ಕಾರ್ಯಾಚರಣೆ ಮಾಡುವ ಆದೇಶವನ್ನು ಅಧಿಕಾರಿಗಳಿಗೆ ನೀಡಲಾಗಿದೆ’ ಎಂಬ ಮಾಹಿತಿಯನ್ನು ನೀಡಿದೆ. ಅಕ್ಟೋಬರ್ 2, 1983 ರಂದು ಅಂದರೆ ಗಾಂಧಿ ಜಯಂತಿಯಂದು ಈ ಪುತ್ಥಳಿಯನ್ನು ಅನಾವರಣಗೊಳಿಸಲಾಗಿತ್ತು. ಕಳೆದ ವರ್ಷವೂ ಕೆಲವು ಅಜ್ಞಾತರು ಅಮೇರಿಕಾದಲ್ಲಿನ ಕ್ಯಾಲಿಫೋರ್ನಿಯದಲ್ಲಿ ಇದೇ ರೀತಿಯಲ್ಲಿ ಗಾಂಧಿಯವರ ಪುತ್ಥಳಿಯ ವಿಡಂಬನೆ ಮಾಡಿದ್ದರು.
ಅಮೆರಿಕದಲ್ಲಿ ಮತ್ತೊಂದು ಹೇಯ ಕೃತ್ಯ: ನ್ಯೂಯಾರ್ಕ್ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ
#unitedstates https://t.co/xFWFUiAp0I— vijaykarnataka (@Vijaykarnataka) February 6, 2022