ಎಂ.ಐ.ಎಂ.ನ ನಾಯಕ ವಾರಿಸ್ ಪಠಾಣಗೆ ಇಂದೂರನಲ್ಲಿ ಮುಸಲ್ಮಾನ ಯುವಕನು ಮಸಿ ಬಳಿದ

ವಾರಿಸ್ ಪಠಾಣ ದೇಶ ಮತ್ತು ಧರ್ಮದ ಬಗ್ಗೆ ಆಕ್ಷೆಪಾರ್ಹ ಹೇಳಿಕೆ ನೀಡಿ ಬಿರುಕು ಮೂಡಿಸುತ್ತಿರುವುದರಿಂದ ಮಸಿ ಬಳದಿರುವುದು ಯುವಕನ ಒಪ್ಪಿಗೆ !

ವಾರಿಸ್ ಪಠಾಣ ದೇಶದ ವಿಷಯವಾಗಿ ಮತ್ತು ಧರ್ಮದ ವಿಷಯವಾಗಿ ಬಿರುಕು ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ, ಇದರಿಂದ ಸ್ಪಷ್ಟವಾಗುತ್ತದೆ ! ಇಂತಹ ಮತಾಂದ ನಾಯಕನ ವಿರುದ್ಧ ಪಠಾಣ ಇವರ ಧರ್ಮದ ಯುವಕರೇ ವಿರೋಧಿಸುತ್ತಿದ್ದಾರೆ, ಇದನ್ನು ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತರು ಗಮನದಲ್ಲಿಟ್ಟುಕೊಳ್ಳುವರೆ ?- ಸಂಪಾದಕರು 

ಇಂದೋರ್ (ಮಧ್ಯ ಪ್ರದೇಶ) – ಇಲ್ಲಿಯ ಖರಜಾನಾ ಪ್ರದೇಶದ ಕಾಲಾ ಖರಜಾನಾ ದರ್ಗಾದಲ್ಲಿ ಎಂ.ಐ.ಎಂ ನ ನಾಯಕ ಮತ್ತು ಮುಂಬಯಿಯ ಮಾಜಿ ಸಂಸದ ವಾರಿಸ್ ಪಠಾಣ ಬಂದಿದ್ದರು. ಆ ಸಮಯದಲ್ಲಿ ಒಬ್ಬ ಯುವಕನು ಅವರ ಮುಖಕ್ಕೆ ಮಸಿ ಬಳಿದು ಪರಾರಿಯಾದನು. ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. ಸದ್ದಾಮ್ ಪಟೇಲ್ ಎಂಬ ಯುವಕನ ಹೆಸರಾಗಿದೆ. ಬಂಧನದ ನಂತರ ಸದ್ದಾಮ್ ಜಾಮೀನಿನ ಮೇಲೆ ಬಿಡುಗಡೆ ಯಾದನು. ಮಸಿ ಬಳದಿರುವ ಘಟನೆಯ ವಿಡಿಯೋ ಪ್ರಸಾರವಾಗಿದೆ.

ಸದ್ದಾಮ್ ಪಟೇಲ್ ಇವನು ಮಸಿ ಬಳೆದಿರುವ ವಿಷಯವಾಗಿ, ದೇಶದ ಬಗ್ಗೆ ಮತ್ತು ವಿವಿಧ ಧರ್ಮಗಳ ವಿಷಯವಾಗಿ ವಾರಿಸ್ ಪಠಾಣ್ ಇವರು ಸತತವಾಗಿ ಆಕ್ಷೆಪಾರ್ಹ ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಎರಡು ಧರ್ಮಗಳಲ್ಲಿ ಬಿರುಕು ಮೂಡುತ್ತಿತ್ತು, ಅವರ ಈ ಕೃತ್ಯವನ್ನು ನಿಷೇಧಿಸಲು ಮತ್ತು ಮನಸ್ಸಿನಲ್ಲಿನ ಕೋಪ ವ್ಯಕ್ತಪಡಿಸಲು ಈ ಕೃತ್ಯ ನಾನು ನಡೆಸಿದ್ದೇನೆ ಎಂದು ಹೇಳಿದ.

ಮಸಿ ಬಳಿಲಿಲ್ಲ ಎಂದು ಪಠಾಣ್ ಅವರ ಹೇಳಿಕೆ

ವಾರಿಸ್ ಪಠಾಣ್ ಅವರು ಈ ರೀತಿಯ ಯಾವುದೇ ಘಟನೆ ನಡೆದಿಲ್ಲವೆಂದು ಹೇಳಿದ್ದಾರೆ. ‘ಒಬ್ಬ ಚಿಕ್ಕ ಹುಡುಗ ನನಗೆ ಕಪ್ಪು ಬಟ್ಟು ಹಚ್ಚಿದನು. ಅದನ್ನು ನಾನು ಒಂದು ಕಡೆ ನಿಂತು ಒರೆಸಿಕೊಂಡೆನು, ಆ ಸಮಯದಲ್ಲಿನ ಛಾಯಾಚಿತ್ರ ಪ್ರಸಾರ ಮಾಡಿಲಾಗಿದೆ, ಇದರ ಹಿಂದೆ ಕಾಂಗ್ರೆಸ್ಸಿನ ಕೈವಾಡವಿದೆ’, ಎಂದು ಪಠಾಣ್ ಇವರು ಆರೋಪಿಸಿದ್ದಾರೆ. (ಇದಕ್ಕೆ ಅನ್ನುವುದು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ! ಸಂಪಾದಕರು)

ಪಠಾಣ ಇವರು ಹಿಂದೆ ನೀಡಿರುವ ಆಕ್ಷೆಪಾರ್ಹ ಹೇಳಿಕೆ

`15 ಕೋಟಿ ಮುಸಲ್ಮಾನರು ನೂರು ಕೋಟಿ ಹಿಂದೂಗಳನ್ನು ಮಣಿಸಬಹುದು’, ಈ ರೀತಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ಹೇಳಿದ್ದರು. ಈ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾದನಂತರ ಆ ಹೇಳಿಕೆಯನ್ನು ಅವರು ಹಿಂಪಡೆದಿದ್ದರು.