ಪ್ರಯಾಗರಾಜ (ಉತ್ತರ ಪ್ರದೇಶ) ಇಲ್ಲಿಯ ಸಂತ ಸಮ್ಮೇಳನದಲ್ಲಿ ನೂರಾರು ಸಂತರಿಂದ ಪ್ರಸ್ತಾಪನೆಗೆ ಅನುಮೋದನೆ !
ವಾಸ್ತವದಲ್ಲಿ 1947 ರಲ್ಲಿಯೇ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಅಪೇಕ್ಷಿತವಿತ್ತು. ಇದೀಗ ಪುನಃ ಈ ಬೇಡಿಕೆ ಗರಿಗೆದರಿದ್ದು, ಈ ಜನರ ಭಾವನೆಗೆ ಸಂತರು ಕೈಜೋಡಿಸಿ ಹಿಂದೂ ರಾಷ್ಟ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ಭಾಜಪವು ಹಿಂದುತ್ವನಿಷ್ಠ ಪಕ್ಷವಾಗಿರುವುದರಿಂದ ಸಾರ್ವಜನಿಕ ಅದು ಜನರ ಭಾವನೆಯನ್ನು ಗೌರವಿಸಿ ಈ ನಿಟ್ಟಿನಲ್ಲಿ ಮುನ್ನಡೆಯಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !- ಸಂಪಾದಕರು
ಪ್ರಯಾಗರಾಜ (ಉತ್ತರ ಪ್ರದೇಶ) – ಇಲ್ಲಿನ ಬ್ರಹ್ಮರ್ಷಿ ಆಶ್ರಮದಲ್ಲಿ ಮಾಘ ಮೇಳದ ನಿಮಿತ್ತ ಆಯೋಜಿಸಿದ್ದ ಸಂತ ಸಮ್ಮೇಳನದಲ್ಲಿ ನೂರಾರು ಸಾಧು-ಸಂತರು ಪಾಲ್ಗೊಂಡಿದ್ದರು. ಅವರಲ್ಲಿ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿಯವರೂ ಸೇರಿದ್ದರು. ಈ ವೇಳೆ ಸಂತರು `ಸಂವಿಧಾನದಲ್ಲಿ ಬದಲಾವಣೆ ಮಾಡಿ ಭಾರತವನ್ನು `ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು, ಎಂಬ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರು. ಸಂತರು, ಸಂತ ಸಮ್ಮೇಳನದ ಗುರಿ ಭಾರತವನ್ನು `ಹಿಂದೂ ರಾಷ್ಟ್ರ’ವನ್ನಾಗಿ ಮಾಡುವುದು ಮತ್ತು ಇಸ್ಲಾಮಿಕ್ ಜಿಹಾದ್ ದೂರ ಮಾಡುವುದಾಗಿದೆ. ದೇಶದ 125 ಕೋಟಿ ಜನರು ಈಗ ತಾವೇ `ಭಾರತ ಹಿಂದೂ ರಾಷ್ಟ್ರವಾಗಿದೆ’ ಎಂದು ಘೋಷಿಸಿಕೊಳ್ಳಬೇಕು. ಅವರು ಇಂದಿನಿಂದ ಹೀಗೆ ಬರೆಯಲು ಆರಂಭಿಸಬೇಕು, ಆಗ ಮಾತ್ರ ನಮ್ಮ ಬೇಡಿಕೆಯ ಆಂದೋಲನ ದೇಶಾದ್ಯಂತ ತಲುಪುವುದು ಹಾಗೂ ಅಂತಿಮವಾಗಿ ಸರಕಾರವು ಸಂತರ ಹಾಗೂ ಜನರ ಮುಂದೆ ಬಾಗುವುದು ಎಂದು ಹೇಳಿದರು.
India should be declared as Hindu nation: Seers at UP Dharma Sansad; watch video#DharmaSansad #Hindu #India #UttarPradesh https://t.co/m7IYxC3rkd
— Free Press Journal (@fpjindia) January 30, 2022
ಸಮ್ಮೇಳನದಲ್ಲಿ, ಸಂತರು ಭಾರತದಲ್ಲಿ ಮುಸ್ಲಿಮರಿಗೆ ಇರುವ `ಅಲ್ಪಸಂಖ್ಯಾತ’ ಸ್ಥಾನವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಅದೇ ರೀತಿ `ಮಠ, ಮಂದಿರಗಳ ಸರಕಾರಿಕರಣವನ್ನು ರದ್ದು ಪಡಿಸಬೇಕು ಹಾಗೂ ದೇಶದಲ್ಲಿ ಮತಾಂತರ ನಿಷೇಧ ಕಾನೂನನ್ನು ಜಾರಿಗೊಳಿಸಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆಗೆ ಗುರಿಪಡಿಸಬೇಕು’, ಎಂದು ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು. ಬಂಧಿತ ಯತಿ ನರಸಿಂಹಾನಂದ ಗಿರಿ ಮಹಾರಾಜ ಮತ್ತು ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ (ಪೂರ್ವಾಶ್ರಮದ ವಾಸಿಂ ರಿಜ್ವಿ) ಅವರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು, ಎಂದು ಈ ಸಮಯದಲ್ಲಿ ಒತ್ತಾಯಿಸಲಾಯಿತು.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ಸಂತರ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಇಂತಹ ಪ್ರಯತ್ನಗಳು ಹಿಂದೂಗಳಿಗೆ ಅಪೇಕ್ಷಿತವಿಲ್ಲ !ಸಂತರು ಸಮ್ಮೇಳನದಲ್ಲಿ ಭಾಗವಹಿಸಬಾರದೆಂದು ಜಿಲ್ಲಾಡಳಿತದ ಪ್ರಯತ್ನ ! ಈ ವೇಳೆ ಕೆಲವು ಸಾಧು-ಸಂತರು, ಜಿಲ್ಲಾಡಳಿತವು ದೂರವಾಣಿ ಕರೆ ಮಾಡಿ ‘ಸಮ್ಮೇಳನಕ್ಕೆ ಹೋಗಬಾರದು’, ಎಂದು ಹೇಳಿದೆ. ಅಲ್ಲದೆ ಆಡಳಿತವು ಕೆಲವು ಅಡೆತಡೆಗಳನ್ನು ನಿರ್ಮಿಸಿತು ಎಂದು ಆರೋಪಿಸಿದರು. `ಧರ್ಮ ಸಂಸದ್’ ಹೆಸರಿಗೆ ಆಡಳಿತ ಅನುಮತಿ ನಿರಾಕರಿಸಿದ್ದರಿಂದ `ಸಂತ ಸಮ್ಮೇಳನ’ ಎಂದು ಹೆಸರಿಡಲಾಯಿತು !ಹಿಂದೂ ಬಹುಸಂಖ್ಯಾತ ಭಾರತದಲ್ಲಿ, ಹಿಂದೂ ಸಂತರು ಈ ರೀತಿಯ ಕಾರ್ಯಕ್ರಮದ ಹೆಸರನ್ನು ಬದಲಾಯಿಸಬೇಕಾದ ಪ್ರಮೇಯ ಬರುವುದು ನಾಚಿಕೆಗೇಡಿನ ಸಂಗತಿ ! ಇದಕ್ಕೆ ಹಿಂದೂ ರಾಷ್ಟ್ರ ಸ್ಥಾಪನೆಯೊಂದೇ ಪರಿಹಾರ, ಇದನ್ನು ತಿಳಿಯಿರಿ !- ಸಂಪಾದಕರು ಈ ಸಮ್ಮೇಳನಕ್ಕೆ `ಧರ್ಮಸಂಸದ್’ ಎಂದು ಹೆಸರಿಸಲಾಗಿತ್ತು; ಆದರೆ, ಆಡಳಿತವು ಈ ಹೆಸರಿಗೆ ಆಕ್ಷೇಪ ವ್ಯಕ್ತಪಡಿಸಿ ಅನುಮತಿ ನೀಡಲು ನಿರಾಕರಿಸಿದ್ದರಿಂದ ಅದನ್ನು `ಸಂತ ಸಮ್ಮೇಳನ’ ಎಂದು ಹೆಸರು ಬದಲಿಸಲಾಯಿತು, ಎಂದು ಸಂತರು ತಿಳಿಸಿದ್ದಾರೆ. |