ಮುರ್ಷಿದಾಬಾದ್‌ನಿಂದ (ಬಂಗಾಲ) ೬ ನಾಡಬಾಂಬ್ ವಶಕ್ಕೆ

ಆರೋಪಿ ಅನಾರುಲ್ ಶೇಖ್ ಬಂಧನ

ಬಂಗಾಲ ಎಂದರೆ ಬಾಂಬ್ ತಯಾರಿಸುವ ಕಾರ್ಖಾನೆಯೇ ಆಗಿದೆ !

ಕೋಲಕಾತಾ (ಬಂಗಾಲ) – ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಕಾಂದಿ ಪ್ರದೇಶದಲ್ಲಿ ೬ ಜೀವಂತ ನಾಡ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಅನಾರುಲ್ ಶೇಖ್ ನನ್ನು ಬಂಧಿಸಲಾಗಿದೆ. ಈ ಬಗ್ಗೆ ಆತನ ವಿಚಾರಣೆ ನಡೆಸಲಾಗುತ್ತಿದೆ.

ಕಳೆದ ವಾರ ಮುರ್ಷಿದಾಬಾದ್ ಜಿಲ್ಲೆಯ ಬೆಲಡಾಂಗಾ ಪ್ರದೇಶದಲ್ಲಿ ಬಾಂಬ್ ತಯಾರಿಸುವಾಗ ಸಂಭವಿಸಿದ ಸ್ಫೋಟದಲ್ಲಿ ಯಾಸುದ್ದೀನ್ ಶೇಖ್ ಅಲಿಯಾಸ ಚಾಂದಿ ಶೇಖ್ ಸಾವನ್ನಪ್ಪಿದ್ದನು ಮತ್ತು ೫ ಜನರು ಗಾಯಗೊಂಡಿದ್ದರು. ಮುರ್ಷಿದಾಬಾದ್ ಇದು ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬಂಗಾಲದ ಜಿಲ್ಲೆಯಾಗಿದ್ದು, ಅಲ್ಲಿ ಬಾಂಬ್‌ಗಳು ಪತ್ತೆಯಾಗುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಕಳೆದ ವರ್ಷ ನಡೆದ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರೀಯ ತನಿಖಾ ದಳ ಇದೇ ಜಿಲ್ಲೆಯಿಂದ ೬ ಅಲ್ ಖೈದಾ ಭಯೋತ್ಪಾದಕರನ್ನು ಬಂಧಿಸಿತ್ತು. ಅದರ ನಂತರವೂ ಕೆಲವು ಉಗ್ರರನ್ನು ಬಂಧಿಸಲಾಯಿತು.