ಭಾರತ ಹಾಗೂ ಭಾರತನಿಷ್ಠೆ ಇದು ಎಲ್ಲ ಪಕ್ಷಗಳಿಗೆ ಪವಿತ್ರವಾದ ಕೇಂದ್ರಬಿಂದುವಾಗಿರಬೇಕು. ಭಾರತಮಾತೆಯ ರಕ್ತದಿಂದ ಕೂಡಿದ ಕೈಗಳನ್ನು ಯಾವುದೇ ಪ್ರಲೋಭನೆಗಾಗಿ ಯಾರೂ ಕೈಯಲ್ಲಿ ಹಿಡಿಯಬಾರದಾಗಿತ್ತು. ಆದರೆ ಪ್ರತ್ಯಕ್ಷದಲ್ಲಿ ಬೇರೆಯೇ ನಡೆಯಿತು. ದೇಶಹಿತಕ್ಕಿಂತ ಪುನಃ ಪಕ್ಷಹಿತವನ್ನು ಮಹತ್ವದ್ದೆಂದು ಪರಿಗಣಿಸಲಾಯಿತು. ಅಧಿಕಾರದ ಲಾಲಸೆಯಿಂದ ಮತ್ತೊಮ್ಮೆ ತತ್ತ್ವಗಳನ್ನು ಬಲಿ ನೀಡಲಾಯಿತು. ಮುಸಲ್ಮಾನರ ಹಳೆ ಓಲೈಕೆಯು ಪುನಃ ಹೊಸ ಭಯಾನಕರೂಪ ತಾಳುತ್ತಿದೆ. ಅನೇಕ ಪಕ್ಷೋಪಕ್ಷಗಳಲ್ಲಿ ವಿಭಾಗಿಸಲ್ಪಟ್ಟ ಬಹುಸಂಖ್ಯಾತರು ಸಂಘಟಿತರಾಗಿರುವ ಅಲ್ಪಸಂಖ್ಯಾತರನ್ನು ಪೂಜಿಸಲಾರಂಭಿಸಿದರು. ಅಧಿಕಾರದ ತಕ್ಕಡಿಯನ್ನು ಅವರು ತೂಗಲಾರಂಭಿಸಿದರು. ಜಯಾಪಜಯದ ಭಾರವನ್ನು ಅವರು ತಿರುಗಿಸಲಾರಂಭಿಸಿದರು. (ಸಾಪ್ತಾಹಿಕ ರಾಷ್ಟ್ರಪರ್ವ, ೫.೪.೨೦೧೦ – ಸಂದರ್ಭ : ವಾಘನಖೆ – ಪು.ಭಾ. ಭಾವೆ ಜನ್ಮಶತಾಬ್ದೀ ವರ್ಷ ೨೦೦೯-೨೦೧೦)
ಭಾರತೀಯರಿಗೆ ಸ್ವಪರಾಕ್ರಮದ ಬಗ್ಗೆ ಯಾವಾಗ ಗೌರವವೆನಿಸುವುದು ?ಅಮೇರಿಕವು ವರ್ಷ ೧೯೭೭ ರಲ್ಲಿ ೨೦೦ ವರ್ಷದ ಜೀವನವನ್ನು ಪೂರ್ತಿಗೊಳಿಸಿತು ಇದನ್ನು ಜಗತ್ತಿಗೆ ಗೌರವದಿಂದ ಹೇಳಿತು. ೧೯೭೫ ರಲ್ಲಿ ಹಾಲೆಂಡ್‌ನ ಅಮಸ್ಟರಡ್ಯಾಮ ನಗರವು ಅದರ ೭೦೦ ನೇ ಹುಟ್ಟುಹಬ್ಬವನ್ನು ಆಚರಿಸಿತು ೭ ಶತಮಾನಗಳ ಹಿಂದೆ ೪ ಗುಡಿಸಲುಗಳನ್ನು ಕಟ್ಟಿ ಅಮಸ್ಟರಡಮನ ನಿರ್ಮಿತಿ ಮಾಡಲಾಯಿತು, ಇದರ ಬಗ್ಗೆ ವರ್ತಮಾನದಲ್ಲಿ ಡಚ್ ನಾಗರಿಕರಿಗೆ ಅಭಿಮಾನವೆನಿಸುತ್ತದೆ. – ಡಾ. ಅಶೋಕ ಮೊಡಕ (ಕೃಪೆ : ಮಾಸಿಕ ಧರ್ಮಭಾಸ್ಕರ ದೀಪಾವಳಿ ವಿಶೇಷಾಂಕ, ನವೆಂಬರ್-ಡಿಸೆಂಬರ್ ೨೦೧೧) |