ಪಾಕಿಸ್ತಾನದ ವಿರುದ್ಧ ಇನ್ನೂ ಎಷ್ಟು ಸಾಕ್ಷಿಗಳು ಸಿಕ್ಕಿದ ನಂತರ ಭಾರತ ಪಾಕಿಸ್ತಾನದ ಮೇಲೆ ಕಠಿಣ ಕ್ರಮ ಜರುಗಿಸುವುದು ?
ಸ್ವಾತಂತ್ರ್ಯದ ೭೪ ವರ್ಷಗಳ ನಂತರವೂ ದೇಶದ ಚುನಾವಣೆ ಭಯೋತ್ಪಾದಕರ ಕರಿನೆರಳಿನಲ್ಲಿ ನಡೆಯುತ್ತವೆ, ಇದು ಭಾರತದಲ್ಲಿರುವ ಸರ್ವಪಕ್ಷಗಳ ಆಡಳಿಗಾರರಿಗೆ ಲಜ್ಜಾಸ್ಪದ !
ನವದೆಹಲಿ – ಪಂಜಾಬಿನಲ್ಲಿ ಜರುಗುವ ವಿಧಾನಸಭೆಯ ಚುನಾವಣೆಯ ಕಾಲದಲ್ಲಿ ರಕ್ತಪಾತ ನಡೆಸುವಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐ.ಎಸ್.ಐ. ಸಂಚು ರೂಪಿಸಿದೆ. ‘ಪಂಜಾಬಿನ ವಿಧಾನಸಭೆ ಚುನಾವಣೆಯ ಕಾಲಾವಧಿಯಲ್ಲಿ ಖಲಿಸ್ತಾನ ಭಯೋತ್ಪಾದನೆ ಹರಡಲು ಉತ್ತಮ ಅವಕಾಶವಿದೆ’, ಎಂದು ಐ.ಎಸ್.ಐ.ಗೆ ಅನಿಸುತ್ತಿದೆ. (ಖಲಿಸ್ತಾನ ಭಯೋತ್ಪಾದನೆಯನ್ನು ಹರಡುವಿಕೆಯ ಹಿಂದೆ ಪಾಕಿಸ್ತಾನದ ಕೈವಾಡವಿದೆ, ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದಾಗ ಈ ಖಲಿಸ್ತಾನಿ ಸಂಘಟನೆಯು ಸರಿದಾರಿಗೆ ಬರುತ್ತದೆ !- ಸಂಪಾದಕರು)
೧. ಪಂಜಾಬನೊಂದಿಗೆ ಉತ್ತರಪ್ರದೇಶ ಮತ್ತು ಉತ್ತರಾಖಂಡಗಳಲ್ಲಿಯೂ ಚುನಾವಣೆಯ ಕಾಲಾವಧಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಜರುಗಿಸುವ ಸಂಚನ್ನು ಐ.ಎಸ್.ಐ. ರೂಪಿಸಿದೆ. ಈ ರಾಜ್ಯಗಳಲ್ಲಿ ಸಿಖ್ಕ ಸಮುದಾಯದ ಬೆಂಬಲ ಪಡೆದುಕೊಳ್ಳುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಸಂಚು ಆಗಿದೆ.
೨. ಪಂಜಾಬಿನಲ್ಲಿ ವಿವಿಧ ರಾಜಕೀಯ ಪಕ್ಷಗಳು ನಡೆಸುವ ಪಾದಯಾತ್ರೆ ಅಥವಾ ಮೆರವಣಿಗೆಯನ್ನು ಗುರಿ ಮಾಡುವ ಐ.ಎಸ್.ಐ.ನ ಸಂಚಾಗಿದೆ.
೩. ‘ಸಿಖ್ಕ ಯೂತ್ ಫೆಡರೇಶನ’, ‘ಬಬ್ಬರ ಖಾಲ್ಸಾ ಇಂಟರನ್ಯಾಶನಲ್’, ‘ಖಲಿಸ್ತಾನ ಕಮಾಂಡೊ ಫೋರ್ಸ’ ಮತ್ತು ‘ಸಿಖ್ ಫಾರ ಜಸ್ಟೀಸ’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಚಲನವಲನಗಳ ಮೇಲೆ ಭಾರತೀಯ ಭದ್ರತಾ ದಳ ಸೂಕ್ಷ್ಮ ನಿಗಾ ವಹಿಸಿದೆ.
೪. ಪಂಜಾಬಿನಲ್ಲಿ ಕಾರ್ಯನಿರತವಾಗಿರುವ ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ಮದ್ದುಗುಂಡುಗಳನ್ನು ಪೂರೈಸಲು ಐ.ಎಸ್.ಐ.ಯು ಈ ಮೇಲೆ ಉಲ್ಲೇಖಿಸಿರುವ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸೇರಿಕೊಂಡಿದೆ.