|
ಕೋಟೆಗಳ ಇಸ್ಲಾಮೀಕರಣ ತಡೆಯಿರಿ ! ಕೋಟೆಗಳ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ಮತ್ತು ಅದು ನಿರ್ಮಿಸಲು ಬಿಡುವವರನ್ನು ಸರಕಾರ ಕಾರಾಗೃಹದಲ್ಲಿ ಅಟ್ಟಬೇಕೆಂದು ಹಿಂದೂಗಳಿಗೆ ಅನಿಸುತ್ತದೆ !
ಮುಂಬಯಿ, ಜನವರಿ ೧೩ (ವಾರ್ತೆ.) – ಬ್ರಿಟಿಷರು ಭಾರತಕ್ಕೆ ಬರುವ ಮೊದಲೇ ೧೫೦೦ ಶತಕದಲ್ಲಿ ಅಸ್ತಿತ್ವದಲ್ಲಿರುವ ಮುಂಬಯಿಯ ಶಿವಡಿ ಕೋಟೆಯ ಪ್ರವೇಶದ್ವಾರದಲ್ಲಿ ಸೈಯದ್ ಜಲಾಲ್ ಶಾಹ ದರ್ಗಾದ ಕುತಂತ್ರ ಹೆಚ್ಚುತ್ತಿದೆ. ದರ್ಗಾ ಶರೀಫ್ ಹಜರತ್ ಸೈಯದ್ ಜಲಾಲ ಶಾಹ ಈ ಹೆಸರಿನಿಂದ ಕೋಟೆಯ ಪ್ರವೇಶದ್ವಾರದಲ್ಲಿ ಸುಮಾರು ೧ ಎಕರೆ ಭೂಮಿಯಲ್ಲಿ ಈ ದರ್ಗಾ ಮತ್ತು ಅದಕ್ಕೆ ಸಂಬಂಧಿತ ವಾಸ್ತು ಕಟ್ಟಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ; ಆದರೆ ಈ ಬಗ್ಗೆ ಪುರಾತತ್ವ ಇಲಾಖೆ ದುರ್ಲಕ್ಷ ಮಾಡುತ್ತಿದೆ.
ಶಿವಡಿ ಕೋಟೆ ಮಹಾರಾಷ್ಟ್ರ ಸರಕಾರದ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ೧೫೦೦ ಶತಕದಲ್ಲಿ ಈ ಕೋಟೆ ಬಹದ್ದೂರಶಾಹ ಇವರ ವಶದಲ್ಲಿ ಇತ್ತು ಎಂದು ಕೋಟೆಯ ಇತಿಹಾಸದಲ್ಲಿ ಉಲ್ಲೇಖವಿದೆ. ಈ ಕಾಲಖಂಡದಲ್ಲಿ ಬಹದ್ದೂರ್ ಶಾಹ ಇವರು ಕೋಟೆಯ ಪ್ರವೇಶ ದ್ವಾರದಲ್ಲಿ ದರ್ಗಾ ಕಟ್ಟಿಸಿರುವುದು ಹೇಳಲಾಗುತ್ತಿದೆ; ಆದರೆ ಈ ದರ್ಗಾದ ಸ್ಥಳವು ನವನಾಥರಲ್ಲಿ ಒಬ್ಬ ನಾಥರ ಸ್ಥಾನ ಇರುವುದು ಇಲ್ಲಿಯ ತಿಳಿದಿರುವ ವೃದ್ಧರು ಹೇಳುತ್ತಾರೆ. ಆದ್ದರಿಂದ ಕೆಲವು ಹಿಂದೂ ಭಕ್ತರು ಇಲ್ಲಿ ಬರುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ ಈ ದರ್ಗಾದ ವ್ಯಾಪ್ತಿ ಅಕ್ರಮವಾಗಿ ಹೆಚ್ಚಿಸಲಾಗಿದೆ. ದರ್ಗಾದ ದೊಡ್ಡ ವಾಸ್ತು ಕಟ್ಟಲಾಗಿದ್ದು ಅದರ ಉಸ್ತುವಾರಿಯನ್ನು ನೋಡಿಕೊಳ್ಳಲು ಮುಸಲ್ಮಾನ ಕುಟುಂಬಕ್ಕೆ ಅಲ್ಲೇ ನಿವಾಸ ನೀಡಲಾಗಿದೆ. ಈ ಕುಟುಂಬದ ಹೊಟ್ಟೆ ಪಾಡಿಗಾಗಿ ಮೇಕೆಗಳನ್ನು ಸಾಕಲಾಗುತ್ತಿದೆ.
ಕೋಟೆಯ ಬದಲು ದರ್ಗಾದ ವೈಭವೀಕರಣ !
ಕೋಟೆಯ ಹೊರಗೆ ‘ಗಡ ರಾಜ್ಯ ಪುರಾತತ್ವ ಇಲಾಖೆ ಹತ್ತಿರ ಇದೆ’, ಎಂಬ ಮಾಹಿತಿ ನೀಡುವ ಕೇವಲ ಒಂದು ಅಡಿ ಎತ್ತರ ಮತ್ತು ಅಗಲದ ಫಲಕ ಹಾಕಲಾಗಿದೆ. ಕೋಟೆಯ ಪ್ರವೇಶದ್ವಾರದ ಹೊರಗೆ ಅನೇಕ ಹಸಿರು ಧ್ವಜಗಳು ಹಾರಿಸಲಾಗಿದೆ. ಆದ್ದರಿಂದ ಅಲ್ಲಿ ಕೋಟೆಯ ಬದಲು ‘ಇಸ್ಲಾಮನ ಧಾರ್ಮಿಕ ಕೇಂದ್ರ’ವೆಂದು ಅದರ ವೈಭವಿಕರಣ ಮಾಡಲಾಗುತ್ತಿರುವ ಚಿತ್ರಣಗಳು ಕಂಡು ಬರುತ್ತದೆ.
ಹಿಂದೂಗಳ ಅನಾಸಕ್ತಿಯಿಂದ ದರ್ಗಾದ ಹೆಸರಿನಲ್ಲಿ ದೊಡ್ಡ ಕಮಾನು, ಆದರೆ ಕೋಟೆಯ ಹೆಸರಿನ ಫಲಕ ಇಲ್ಲ !
ಇಲ್ಲೇ ಶಿವಡಿ ಕೋಟೆ ಇದೆ, ಅದರ ಮಾಹಿತಿ ನೀಡುವ ಕೋಟೆಯ ಹೊರಗೆ ಯಾವುದೇ ಪಲಕ ಪುರಾತತ್ವ ಇಲಾಖೆಯಿಂದ ಹಾಕಲಾಗಿಲ್ಲ. ತದ್ವಿರುದ್ಧ ಕೋಟೆಗೆ ಹೋಗುವ ಮಾರ್ಗದ ಸ್ವಲ್ಪ ಅಂತರದಲ್ಲಿ ದರ್ಗಾಕ್ಕೆ ಹೋಗುವ ಸ್ವತಂತ್ರ ಗಟ್ಟಿಮುಟ್ಟಾದ ರಸ್ತೆ ನಿರ್ಮಿಸಲಾಗಿದ್ದು ಅದರ ಪ್ರವೇಶದ್ವಾರದ ಬಳಿ ದರ್ಗಾದ ದೊಡ್ಡ ಹೊಸ ಕಮಾನನ್ನು ಕಟ್ಟಲಾಗಿದೆ. ಒಟ್ಟಾರೆ ಶಿವಡಿ ಕೋಟೆಗೆ ಪ್ರವೇಶದ್ವಾರದಲ್ಲಿ ಕೋಟೆಯ ಸಮಾಂತರ ದರ್ಗಾದ ಅಕ್ರಮ ಕಟ್ಟಡ ಕಟ್ಟಿ ಅದರ ಸ್ವತಂತ್ರ ಅಸ್ತಿತ್ವ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಕಟ್ಟಡ ಕೋಟೆಯ ಜಾಗದಲ್ಲಿ ಅಕ್ರಮವಾಗಿದ್ದು ಇದರ ಬಗ್ಗೆ ಪುರಾತತ್ವ ಇಲಾಖೆ ಮಾತ್ರ ನಿರ್ಲಕ್ಷ ವಹಿಸುತ್ತಿದೆ.