ಮದರ್‌ ತೆರೇಸಾ ಇವರ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ ಅಡಿ ನೋಂದಣಿಯನ್ನು ಕೇಂದ್ರ ಸರಕಾರದಿಂದ ನವೀಕರಣ

ನೋಂದಣಿ ರದ್ದಾಗಿದ್ದರಿಂದ ಓರಿಸ್ಸಾ ಸರಕಾರವು ಮದರ್ ತೆರೇಸಾ ಅವರ ಸಂಸ್ಥೆಗೆ ಮುಖ್ಯಮಂತ್ರಿ ಸಹಾಯ ನಿಧಿಯಿಂದ 78 ಲಕ್ಷ ರೂಪಾಯಿ ನೀಡಿದ್ದರು. ಈಗ ಈ ದುಡ್ಡು ಸರಕಾರ ಹಿಂಪಡೆಯುವುದೆ ?- ಸಂಪಾದಕರು 

ನವ ದೆಹಲಿ – ಮದರ್‌ ತೆರೇಸಾ ಅವರು ಸ್ಥಾಪಿಸಿರುವ ‘ಮಿಷನರೀಸ್ ಆಫ್ ಚಾರಿಟಿ’ ಈ ಸಂಸ್ಥೆಗೆ ವಿದೇಶಿ ದೇಣಿಗೆ ನಿಯಂತ್ರಣ ಕಾನೂನಿನ ಪ್ರಕಾರ (`ಎಫ್.ಸಿ.ಅರ್.ಎ.’ಯ) ನೋಂದಣಿ ಕೇಂದ್ರ ಸರಕಾರವು ಮತ್ತೆ ನವೀಕರಿಸಿದೆ. ವಿದೇಶಿ ದೇಣಿಗೆ ಸ್ವೀಕರಿಸುವ ವಿಷಯದಲ್ಲಿ ಸಂಸ್ಥೆಯ ಪ್ರಮಾಣಪತ್ರ ಈಗ 2026 ರವರೆಗೆ ಕಾನೂನು ರೀತಿ ಮಾನ್ಯವಿರುವುದು. ಈ ಸಂಸ್ಥೆಗೆ ವಿದೇಶಿ ದೇಣಿಗೆ ನೋಂದಣಿಯ ನವೀಕರಣ ಮಾಡಿಸಲು ಈ ಮೊದಲು ಕೇಂದ್ರೀಯ ಗೃಹ ಸಚಿವಾಲಯವು ನಿರಾಕರಿಸಿತ್ತು.