* ಚರ್ಚ್ ಅಥವಾ ಕ್ರೈಸ್ತ ಸಂಸ್ಥೆಗಳಿಂದ ನಡೆಸುವ ಶಾಲೆಗಳಲ್ಲಿ ಅನಾಚಾರ ನಡೆಯುತ್ತದೆ, ಇದನ್ನು ತಿಳಿಯಿರಿ ! – ಸಂಪಾದಕರು * ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿ ಕಾಮುಕ ಮುಖ್ಯೋಪಾಧ್ಯಾಯ ಮಕ್ಕಳಿಗೆ ಏನು ಮಾರ್ಗ ದರ್ಶನ ನೀಡುವರು ? ಇಂಥವರೀಗೆ ಕಠಿಣ ಶಿಕ್ಷೆ ಆಗುವುದು ಅಗತ್ಯವಾಗಿದೆ !- ಸಂಪಾದಕರು |
ತಿರುನೆಲವೆಲಿ (ತಮಿಳುನಾಡು) – ಇಲ್ಲಿಯ ಸರಕಾರದ ಅನುದಾನ ಮತ್ತು ಕ್ರೈಸ್ತರಿಂದ ನಡೆಸಲಾಗುತ್ತಿರುವ ಸಾಮಾರಿಯಾ ಯೋವಾನ ಉಚ್ಚ ಮಾಧ್ಯಮಿಕ ಕ್ರೈಸ್ತ ಶಾಲೆಯ ಮುಖ್ಯೋಪಾಧ್ಯಾಯ ಕ್ರಿಸ್ತೋಫರ್ ಜೇಬಾಕುಮಾರನು 12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸಂಚಾರ ವಾಣಿಯ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಸಂಬಂಧಿಪಟ್ಟ ವಿದ್ಯಾರ್ಥಿನಿಯ ಪೋಷಕರ ದೂರು ನೀಡಿದ ನಂತರ ಜೆಬಾಕುಮಾರ ಪರಾರಿಯಾಗಿದ್ದಾನೆ.
ಜೆಬಾಕುಮಾರನು ‘ಆನ್‍ಲೈನ್’ ತರಗತಿಯ ನಿಮಿತ್ತ ವಿದ್ಯಾರ್ಥಿನಿಯರ ಸಂಚಾರವಾಣಿಯ ಸಂಖ್ಯೆ ಪಡೆದು ಅವರಿಗೆ ಅಶ್ಲೀಲ ಪೋಸ್ಟ್ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ. ಓರ್ವ ವಿದ್ಯಾರ್ಥಿನಿಯು ಈ ರೀತಿಯ ಆಘಾತಕಾರಿಯ ಕೃತ್ಯವನ್ನು ತನ್ನ ಸ್ನೇಹಿತೆಗೆ ತೋರಿಸಿದಳು. ಅನೇಕ ವಿದ್ಯಾರ್ಥಿನಿಯರಿಗೆ ಸಂಬಂಧಿತ ಮುಖ್ಯೋಪಾಧ್ಯಾಯ ಅಶ್ಲೀಲ ಪೋಸ್ಟ್ ಮತ್ತು ಸಂದೇಶ ಕಳಿಸುವುದು ಬೆಳಕಿಗೆ ಬಂದಿತು. ವಿದ್ಯಾರ್ಥಿನಿಯ ಪೋಷಕರು ಪೊಲೀಸರಲ್ಲಿ `ಪಾಕ್ಸೋ’ (ಪ್ರೋಟೆಕ್ಷನ್ ಅಫ್ ಚಿಲ್ಡ್ ಫ್ರಮ್ ಸೆಕ್ಸುಯಲ್ ಆಫೆನ್ಸೆಸ) ಕಾನೂನಿನ ಅಡಿಯಲ್ಲಿ ದೂರನ್ನು ದಾಖಲಿಸಿದ್ದರಿಂದ ಬಂಧನದ ಭೀತಿಯಿಂದ ಮುಖ್ಯೋಪಾಧ್ಯಾಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.