ಇಂದಿರಾಗಾಂಧಿಯ ಹಂತಕರನ್ನು ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿಯು `ಹುತಾತ್ಮ’ವೆಂದು ಹೇಳುತ್ತಾ ಶ್ರದ್ಧಾಂಜಲಿ ನೀಡಿದರು !

ಪ್ರಧಾನಿ ನರೇಂದ್ರ ಮೋದಿ ಇವರ ಪಂಜಾಬ ಪ್ರವಾಸದ ಸಮಯದಲ್ಲಿ ನಡೆದಿರುವ ಭದ್ರತಾ ಲೋಪದ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾ ಮೌನವಾಗಿದ್ದಾರೆ, ಹಾಗೂ ಅವರು ಇಂದಿರಾಗಾಂಧಿ ಇವರ ಹಂತಕರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುವಾಗಲೂ ಮೌನವಾಗಿದ್ದಾರೆ; ಕಾರಣ ಅವರಿಗೆ ಪಂಜಾಬಿನಲ್ಲಿ ವಿಧಾನಸಭೆ ಚುನಾವಣೆ ಗೆಲ್ಲುವುದಿದೆ, ಇದು ಸ್ಪಷ್ಟವಾಗಿದೆ, ಎಂಬುದನ್ನು ತಿಳಿದುಕೊಳ್ಳಿರಿ ! ಇಂತಹ ಕಾಂಗ್ರೆಸ್ ಕಾನೂನಿನ ರಾಜ್ಯ ನೀಡುತ್ತಾರಂತೆ ?- ಸಂಪಾದಕರು

ಅಮೃತಸರ (ಪಂಜಾಬ) – ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿಯು (`ಎಸ.ಜಿ.ಪಿ.ಸಿ.’ಯು) ಇಲ್ಲಿ ಜನವರಿ 6 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹಂತಕರಾದ ಸತವಂತ ಸಿಂಹ ಮತ್ತು ಕೆಹರ್ ಸಿಂಹ ಇವರಿಗೆ ಶ್ರದ್ಧಾಂಜಲಿ ನೀಡಿದರು. ಕಮಿಟಿಯು ಇಬ್ಬರಿಗೂ `ಹುತಾತ್ಮರೆಂದು ಪರಿಗಣಿಸಿದ್ದಾರೆ. ಇವರಿಬ್ಬರನ್ನು ಜನವರಿ 6, 1989 ರಲ್ಲಿ ತಿಹಾರ ಸೆರೆಮನೆಯಲ್ಲಿ ಗಲ್ಲು ಶಿಕ್ಷೆ ನೀಡಲಾಗಿತ್ತು. `ಎಸ್.ಜಿ.ಪಿ.ಸಿ.’ ಇಂದು ಐತಿಹಾಸಿಕ ದಿನವಾಗಿದೆ’ ಎಂದು ಟ್ವೀಟ್ ಮಾಡಿದೆ.