ನವ ದೆಹಲಿ – ಪ್ರಸಿದ್ಧ ಕೇಶ ವಿನ್ಯಾಸಗಾರ ಜಾವೇದ್ ಹಬೀಬ್ ಇವನು ಒಂದು ಕಾರ್ಯಾಗಾರದಲ್ಲಿ ಮಹಿಳೆಯ ಕೂದಲಿನ ಮೇಲೆ ಉಗಳಿದ ಪ್ರಕರಣದಲ್ಲಿ ಅವನ ಮೇಲೆ ಮುಜಫ್ಫರನಗರ (ಉತ್ತರಪ್ರದೇಶ)ದಲ್ಲಿ ದೂರು ದಾಖಲಿಸಲಾಗಿದೆ. ಸಂಕ್ರಮಣ ಕಾನೂನಿನ ಸಂಬಂಧಿತ ಕಲಂನ ಅಡಿಯಲ್ಲಿ ಈ ದೂರು ದಾಖಲಿಸಲಾಗಿದೆ. ರಾಷ್ಟ್ರೀಯ ಮಹಿಳಾ ಆಯೋಗವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿದ್ದೂ ಅವರು ಉತ್ತರಪ್ರದೇಶ ಪೊಲೀಸರಿಗೆ ಈ ವಿಡಿಯೋವಿನ ಸತ್ಯಾಂಶದ ಪರಿಶೀಲನೆ ನಡೆಸಲು ಹೇಳಿದೆ. ಈ ಘಟನೆಯ ಬಗ್ಗೆ ಜಾವೇದ್ ಹಬೀಬನು ಒಂದು ವಿಡಿಯೋ ಪ್ರಸಾರ ಮಾಡಿ ಕ್ಷಮೆ ಕೋರಿದ್ದಾನೆ. (ದೂರು ದಾಖಲಿಸದ್ದಿದ್ದಿರೆ, ಹಬೀಬನು ಕ್ಷಮೆ ಕೇಳುತ್ತಿದ್ದಾನೆಯೇ ? – ಸಂಪಾದಕರು) ಆತ, ನನ್ನ ಕಾರ್ಯಾಗಾರದಲ್ಲಿ ಕೆಲವು ಶಬ್ದಗಳಿಂದ ಕೆಲವರಿಗೆ ನೋವಾಗಿದೆ. (ಹಬೀಬನ ಮಾತಿನಿಂದಲ್ಲ, ಆದರೆ ಅವನ ವಿಕೃತ ಕೃತಿಯಿಂದ ಜನರಿಗೆ ನೋವಾಗಿದೆ ! – ಸಂಪಾದಕರು ) ನಮ್ಮ ಕಾರ್ಯಾಗಾರ ವೃತ್ತಿಪರವಾಗಿದೆ. ಇಂತಹ ಕಾರ್ಯಾಗಾರ ಬಹಳ ಸಮಯ ನಡೆಯುತ್ತದೆ. ನಾನು ಕೇವಲ ಒಂದೇ ಹೇಳುತ್ತೇನೆ ಏನೆಂದರೆ, ಯಾರಿಗೆ ನೋವಾಗಿದರೆ ಕ್ಷಮಿಸಿರಿ, ಮನಸ್ಸಿನಿಂದ ಕ್ಷಮೆ ಕೇಳುತ್ತೇನೆ.
Jawed Habib apologises for spitting on woman’s hair https://t.co/iYujZq9Ksm pic.twitter.com/E85oEFNoyI
— The Times Of India (@timesofindia) January 7, 2022