…ಹಾಗಾದರೆ ಹಿಂದೂ ಧರ್ಮದ ಬಗ್ಗೆ ತಪ್ಪಾದ ಹೇಳಿಕೆ ನೀಡುವ ರಾಹುಲ ಗಾಂಧಿಯವರನ್ನೂ ಬಂಧಿಸಬೇಕಾಗುತ್ತದೆ ! – ನ್ಯಾಯವಾದಿ ಗೌರವ ಗೋಯಲ್, ಸರ್ವೋಚ್ಚ ನ್ಯಾಯಾಲಯ

‘ಹಿಂದೂ ದೇವಿ-ದೇವತೆಗಳ ಅವಮಾನ ಅಭಿವ್ಯಕ್ತಿಯಾದರೆ; ಗಾಂಧೀಜಿ ಬಗ್ಗೆ ಮಾತನಾಡುವುದು ಏಕೆ ಅಪರಾಧ ?’ ಕುರಿತು ಸಂವಾದ

ಎರಡೂ ಕಡೆಯಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು, ಆದರೆ ನಮ್ಮ ದೇಶದಲ್ಲಿ ಹಾಗೆ ಆಗುತ್ತಿಲ್ಲ. ಹಿಂದೂ ದೇವಿದೇವತೆಗಳನ್ನು ಅವಮಾನಿಸುವವರಿಗೆ ಒಂದು ನ್ಯಾಯ ಮತ್ತು ಗಾಂಧೀಜಿಯವರ ವಿಚಾರಗಳನ್ನು ಒಪ್ಪದವರಿಗೆ ಇನ್ನೊಂದು ನ್ಯಾಯ ? ಈ ತಾರತಮ್ಯ ದೇಶದಲ್ಲಿ ನಡೆಯುವುದಿಲ್ಲ. ಕಾಲಿಚರಣ ಮಹಾರಾಜರು ನೀಡಿದ ಹೇಳಿಕೆ ತಪ್ಪು ಎಂದು ಹೇಳಿ ಅವರನ್ನು ಬಂಧಿಸುವುದು ಸರಿಯಿದ್ದರೆ, ರಾಹುಲ ಗಾಂಧಿ ಕೂಡ ಹಿಂದೂ ಧರ್ಮದ ಬಗ್ಗೆ ಅನೇಕ ಸಲ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ, ಅವರನ್ನೂ ಬಂಧಿಸಬೇಕು’, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಗೌರವ ಗೋಯಲ್ ಇವರು ಪ್ರತಿಪಾದಿಸಿದರು. ಅವರು ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ ‘ಹಿಂದೂ ದೇವಿ-ದೇವತೆಗಳ ಅವಮಾನ ಅಭಿವ್ಯಕ್ತಿಯಾದರೆ; ಗಾಂಧೀಜಿ ಬಗ್ಗೆ ಮಾತನಾಡುವುದು ಏಕೆ ಅಪರಾಧ ?’ ಈ ವಿಶೇಷ ‘ಆನ್‌ಲೈನ್ ಚರ್ಚಾಕೂಟದಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಇತಿಹಾಸ ತಜ್ಞ, ಲೇಖಕ-ನ್ಯಾಯವಾದಿ ಸತೀಶ ದೇಶಪಾಂಡೆ ಇವರು, ರಾಷ್ಟ್ರಕ್ಕಿಂತ ಯಾರೂ ದೊಡ್ಡವರಿರಲು ಸಾಧ್ಯವಿಲ್ಲ. ಸಂವಿಧಾನದ ಯಾವುದೇ ಕಲಂನಲ್ಲಿ ಇಂತಹ ಒಬ್ಬ ವ್ಯಕ್ತಿಯನ್ನು ‘ರಾಷ್ಟ್ರಪಿತ’ ಎಂದು ಕರೆಯಬೇಕು, ಎಂದು ಹೇಳಿಲ್ಲ. ಹಾಗೆಯೇ ಒಬ್ಬ ವ್ಯಕ್ತಿಯೆಂದು ‘ರಾಷ್ಟ್ರಪಿತಾ’ ಇರಬೇಕು, ಎನ್ನುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಗಾಂಧೀಜಿಯವರು ತಮ್ಮ ವಿವಾದಾತ್ಮಕ ಜೀವನದಲ್ಲಿ ಮೂಲತಃ ‘ಜನಪ್ರಿಯರಾಗಿರಲಿಲ್ಲ’. ಹಾಗಾಗಿ ಅವರ ಜೀವಿತಾವಧಿಯಲ್ಲಿ ಅವರು ಈಗಿನಿಗಿಂತ ಹೆಚ್ಚು ಟೀಕೆಗಳನ್ನು ಎದುರಿಸಬೇಕಾಯಿತು. ಗಾಂಧೀಜಿಯವರ ಬಗ್ಗೆ ಟೀಕಿಸುವ ಪುರ್ಣ ಹಕ್ಕು ನಮಗಿದೆ. ನ್ಯಾಯಾಲಯವು ಅಂತಹ ವಿನಾಯಿತಿಯನ್ನು ನೀಡಿದೆ. ಗಾಂಧಿಯವರ ಕಾರ್ಯದ ಮೌಲ್ಯಮಾಪನವಾಗಬೇಕು ಎಂದು ಹೇಳಿದರು.
‘ರಾಷ್ಟ್ರೀಯ ವಾರಕರಿ ಪರಿಷತ್ತಿ’ನ ವಕ್ತಾರ ಹ.ಬ.ಪ. ಅರುಣ ಮಹಾರಾಜ ಪಿಂಪಳೆಯವರು ಮಾತನಾಡುತ್ತಾ, ಇದುವರೆಗೆ ಛತ್ರಪತಿ ಶಿವಾಜಿ ಮಹಾರಾಜ, ನೇತಾಜಿ ಸುಭಾಷಚಂದ್ರ ಬೋಸ್ ಅವರಂತಹ ಅನೇಕ ರಾಷ್ಟ್ರಪುರುಷರನ್ನು ಈ ದೇಶದಲ್ಲಿ ಅವಮಾನಿಸಲಾಗಿದೆ; ಆದರೆ ಗಾಂಧಿಯನ್ನು ಟೀಕಿಸುವುದು ಮಾತ್ರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಈ ದೇಶದಲ್ಲಿ ರಾಷ್ಟ್ರಪ್ರೇಮಿ ನಾಗರಿಕರಿಗೆ, ಸಾಧು-ಸಂತರಿಗೆ ಒಂದು ಕಾನೂನು ಮತ್ತು ರಾಜಕೀಯ ನಾಯಕರಿಗೆ ಪ್ರತ್ಯೇಕ ಕಾನೂನು ಇದೆ. ಹಿಂದೂಗಳು ಸಾಧು-ಸಂತರ ಹಿಂದೆ ದೃಢವಾಗಿ ನಿಲ್ಲುವುದು ಅಗತ್ಯವಾಗಿದೆ ಎಂದು ಹೇಳಿದರು. ಛತ್ತೀಸಗಢದ ‘ಸುದರ್ಶನ’ ವಾರ್ತಾವಾಹಿನಿಯ ಬ್ಯೂರೊ ಮುಖ್ಯಸ್ಥ ಶ್ರೀ. ಯೋಗೇಶ ಮಿಶ್ರಾ ಇವರು ಮಾತಾನಡುತ್ತಾ, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಷಯದಲ್ಲಿ ಸಮಾನ ಮಾನದಂಡಗಳಿರಬೇಕು. ಕಾನೂನುತಜ್ಞರು ಕಾಲಿಚರಣ ಮಹಾರಾಜರ ಬಂಧನ ಹಾಗೂ ಅವರ ಮೇಲೆ ವಿಧಿಸಿರುವ ಕಲಂಗಳ ಬಗ್ಗೆ ಛತ್ತೀಸಗಢ ಸರಕಾರ ಮತ್ತು ಪೊಲೀಸ್-ಆಡಳಿತದ ಕ್ರಮಗಳ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ಹೇಳಿದರು. ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ನರೇಂದ್ರ ಸುರ್ವೆ ಅವರು ಮಾತನಾಡುತ್ತಾ, ಹಿಂದೂ ದೇವಿ-ದೇವತೆಗಳ ನಗ್ನ ಚಿತ್ರ ಬಿಡಿಸಿದ ಎಂ.ಎಫ್. ಹುಸೇನ್‌ಗೆ ಕಾಂಗ್ರೆಸ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಹಿಂದೂ ದೇವಿ-ದೇವತೆಗಳನ್ನು ಅವಮಾನಿಸುವ ಮುನ್ನಾವರ ಫಾಕುಕಿಯಂತಹ ಹಾಸ್ಯಗಾರರನ್ನು ಕಾಂಗ್ರೆಸ್ ಬೆಂಬಲಿಸುತ್ತದೆ. ಕಾಂಗ್ರೆಸ್ ಸತತವಾಗಿ ಸ್ವಾ. ಸಾವರಕರ ಅವರನ್ನು ಅವಮಾನಿಸುತ್ತದೆ; ಆದರೆ ಗಾಂಧಿ ಬಗ್ಗೆ ಯಾರಾದರೂ ಪ್ರಶ್ನೆ ಎತ್ತಿದರೆ ಕಾಂಗ್ರೆಸ್ಸಿಗೆ ಸಿಟ್ಟು ಬರುತ್ತದೆ. ಹಿಂದೂಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರು ತಪ್ಪು ವಿಷಯಗಳ ಬಗ್ಗೆ ಪ್ರಶ್ನೆಗಳನ್ನು ಮಂಡಿಸುತ್ತಾರೆ ಮತ್ತು ಉತ್ತರವನ್ನು ಸಂಬಂಧಪಟ್ಟವರಿಗೆ ನೀಡಬೇಕಾಗುತ್ತದೆ ಎಂದು ಹೇಳಿದರು !