ಮೇರಠದಲ್ಲಿನ ಭಾಜಪ ಮಹಿಳಾ ಮೋರ್ಚಾದ ಮಹಿಳಾ ನಾಯಕಿಯ ಮೇಲೆ ಮತಾಂಧರಿಂದ ಸಾಮೂಹಿಕ ಬಲಾತ್ಕಾರ

ಮೇರಠನಲ್ಲಿ ಉದ್ವಿಘ್ನ ವಾತಾವರಣ

ಇಂತಹ ಮತಾಂಧರನ್ನು ಗಲ್ಲಿಗೇರಿಸಬೇಕು ! ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಇಂತಹ ಘಟನೆ ನಡೆಯಬಾರದು ಎಂದು ಹಿಂಜUಗಳಿಗೆ ಅನಿಸುತ್ತದೆ !

ಮೇರಠ(ಉತ್ತರಪ್ರದೇಶ) – ಇಲ್ಲಿಯ ಹಾಪೂಡ ಮಾರ್ಗದಲ್ಲಿನ ಕಾಶಿರಾಮ ಸಂಕುಲದಲ್ಲಿ ಭಾಜಪ ಮಹಿಳಾ ಮೋರ್ಚಾದ ಮಹಿಳಾ ನಾಯಕಿಗೆ ತಂಪು ಪಾನಿಯದಲ್ಲಿ ಮೂರ್ಛೆ ಹೋಗುವ ಔಷಧಿ ಬೆರೆಸಿ ಆಕೆಯನ್ನು ಪ್ರಜ್ಞೆ ತಪ್ಪಿಸಿ, ಆಕೆಯ ಮೇಲೆ ಮೂವರು ಮತಾಂಧರು ರಾತ್ರಿ ಸಾಮೂಹಿಕ ಬಲಾತ್ಕಾರ ನಡೆಸಿರುವ ಘಟನೆಯ ನಂತರ ಇಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಈ ಮಹಿಳೆಯು ಮರುದಿನ ಬೆಳಗ್ಗೆ ಒಂದು ಉದ್ಯಾನದಲ್ಲಿ ಪ್ರಜ್ಞೆತಪ್ಪಿದ ಸ್ಥಿತಿಯಲ್ಲಿ ಕಂಡು ಬಂದಳು. ಆಕೆಯನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿದೆ. ಈ ಮಹಿಳೆಗೆ ಮತಾಂಧ ಯುವತಿಯು ಆಕೆಯ ಮನೆಗೆ ಕರೆಸಿದ್ದಳು. ಅಲ್ಲಿ ಆಕೆಗೆ ತಂಪು ಪಾನಿಯ ನೀಡಲಾಗಿತ್ತು. ಈ ಯುವತಿಯು ಆಕೆಯ ಪ್ರಿಯಕರ ಅಬ್ದುಲ್ಲಾ ಮತ್ತು ಅವನ ಇಬ್ಬರು ಸ್ನೇಹಿತರನ್ನು ಕರೆಸಿದ್ದಳು. ಅವರೇ ಈ ಮಹಿಳೆಯ ಮೇಲೆ ಸಾಮೂಹಿಕ ಬಲಾತ್ಕಾರ ನಡೆಸಿದ್ದಾರೆ. ಪೊಲೀಸರು ಈ ಘಟನೆಯ ವಿಚಾರಣೆ ನಡೆಸುತ್ತಿದ್ದಾರೆ.