ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನಿನ ಮೂಲಕ ಮೊದಲ ಶಿಕ್ಷೆ !

ಮತಾಂಧ ಯುವಕನಿಗೆ ೧೦ ವರ್ಷ ಕಾರಾಗೃಹ ವಾಸ ಮತ್ತು ೩೦ ಸಾವಿರ ರೂಪಾಯಿ ದಂಡ

‘ಲವ್ ಜಿಹಾದ್’ ಒಂದು ಕಪಟವಾಗಿದೆ’, ಹೀಗೆಂದು ಬೊಬ್ಬೆ ಹಾಕುವ ಪ್ರಗತಿ (ಅಧೋಗತಿ)ಪರರು, ಜಾತ್ಯತೀತರು, ಸಾಮ್ಯವಾದಿಗಳು ಮತ್ತು ಉದಾರಮತವಾದಿಗಳು ಇವರಿಗೆಲ್ಲ ಈಗ ಏನಾದರೂ ಹೇಳುವುದಿದೆಯೇ ? ಈಗ ನ್ಯಾಯಾಲಯವೂ ‘ಕೇಸರಿಕರಣ’ವಾಗಿದೆ, ಎಂದು ಇವರು ಹೇಳಿದರೆ ಆಶ್ಚರ್ಯವಿಲ್ಲ !

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಿದ ನಂತರ ಈಗ ಕಾನೂನಿನ ಅಡಿಯಲ್ಲಿ ಒಬ್ಬ ದೋಷಿ ಮತಾಂಧನಿಗೆ ೧೦ ವರ್ಷ ಕಾರಾಗೃಹವಾಸ ಮತ್ತು ೩೦ ಸಾವಿರ ರೂಪಾಯಿ ದಂಡ, ಹೀಗೆ ಶಿಕ್ಷೆ ನೀಡಲಾಗಿದೆ. ೨೦೧೭ ರಲ್ಲಿ ಜಾವೇದ್ ಇವನು ಅವನ ಹೆಸರು ‘ಮುನ್ನಾ’ ಎಂದು ಹೇಳಿ ಓರ್ವ ಅಪ್ರಾಪ್ತ ಬಾಲಕಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿದ್ದ. ನಂತರ ಆಕೆಯ ಜೊತೆ ವಿವಾಹವಾಗಲು ಆಕೆಯನ್ನು ಕರೆದುಕೊಂಡು ಓಡಿಹೋಗಿದ್ದ. ಜಾವೇದ್ ಇವನು ನಂತರ ತನ್ನ ನಿಜವಾದ ಪರಿಚಯ ಕೊಟ್ಟ ನಂತರ ಆ ಹುಡುಗಿಯೊಂದಿಗೆ ಮುಸಲ್ಮಾನ ಪದ್ಧತಿಯಿಂದ ವಿವಾಹವಾಗಲು ಹೇಳಿದಾಗ ಆಕೆ ನಿರಾಕರಿಸಿದಳು.

ಪೊಲೀಸರು ಆ ಯುವಕನನ್ನು ಬಂಧಿಸಿದ ನಂತರ ಅವನ ಮೇಲೆ ಹುಡುಗಿಯ ಹೇಳಿಕೆಯ ಮೇರೆಗೆ ಬಲಾತ್ಕಾರದ ಅಪರಾಧವನ್ನು ದಾಖಲಿಸಲಾಗಿದೆ. ಈವರೆಗೆ ಉತ್ತರಪ್ರದೇಶ ಪೊಲೀಸರು ಲವ್ ಜಿಹಾದ್ ವಿರೋಧಿ ಕಾನೂನಿನ ಅಡಿಯಲ್ಲಿ ಒಟ್ಟು ೧೦೮ ಆರೋಪವನ್ನು ದಾಖಲಿಸಿದ್ದಾರೆ.