ಕಪುರಥಳಾ (ಪಂಜಾಬ) ಇಲ್ಲಿನ ‘ನಿಶಾನ ಸಾಹಿಬ’ ಅನ್ನು ವಿಡಂಬನೆ ಮಾಡಿದವನ ಮೇಲೆ ಹಲ್ಲೆ

ಪಂಜಾಬನಲ್ಲಿ ವಿಧಾನಸಭೆಯ ಚುನಾವಣೆಯಿರುವುದರಿಂದ ಉದ್ದೇಶಪೂರ್ವಕವಾಗಿ ಈ ರೀತಿಯ ಘಟನೆಗಳನ್ನು ಮಾಡಲಾಗುತ್ತಿದೆಯೇ ? ಎಂಬುದನ್ನು ಕೇಂದ್ರ ಸರಕಾರ ಕಂಡು ಹಿಡಿಯ ಬೇಕು !

ಕಪುರಥಳಾ (ಪಂಜಾಬ) – ಅಮೃತಸರದಲ್ಲಿರುವ ಸ್ವರ್ಣ ದೇವಾಲಯದಲ್ಲಿರುವ ಗುರು ಗ್ರಂಥ ಸಾಹಿಬ ಅನ್ನು(ಸಿಕ್ಖರ ಪವಿತ್ರ ಧಾರ್ಮಿಕ ಗ್ರಂಥದ) ಅವಮಾನಿಸಲು ಪ್ರಯತ್ನಿಸಿದವರು ಹಲ್ಲೆಯಿಂದ ಮೃತಪಟ್ಟ ಘಟನೆ ರಾಜ್ಯದ ಕಪುರಥಳಾದಲ್ಲಿಯೂ ನಡೆದಿದೆ. ಕಪುರಥಳಾ ಜಿಲ್ಲೆಯಲ್ಲಿ ನಿಜಾಮಪೂರ ಗ್ರಾಮದಲ್ಲಿ ಗುರುದ್ವಾರದಲ್ಲಿ ವ್ಯಕ್ತಿಯೊಬ್ಬನು ನಿಶಾಣ ಸಾಹಿಬ ಅನ್ನು (ಸಿಕ್ಖರ ಪವಿತ್ರ ಧ್ವಜ)ವನ್ನು ವಿಡಂಬನೆ ಮಾಡಿದನು. ಗ್ರಾಮಸ್ಥರು ವಿಡಂಬನೆ ಮಾಡಿದ ವ್ಯಕ್ತಿಯನ್ನು ಹಿಡಿದುಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರು. ಈ ಥಳಿತದ ನಂತರ ಆ ಯುವಕನು ಎಲ್ಲಿಗೆ ಹೋದನು ? ಎಂಬ ಬಗ್ಗೆ ಇನ್ನೂ ಯಾರಿಗೂ ಮಾಹಿತಿ ಸಿಗಲಿಲ್ಲ. ಪೊಲೀಸರು ಕೂಡ ಅವನನ್ನು ವಶಪಡಿಸಿಕೊಂಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿಲ್ಲ.

ಮುಂಜಾನೆ ೪ ಘಂಟೆಗೆ ಆ ಯುವಕನು ನಿಶಾಣ ಸಾಹಿಬನ ವಿಡಂಬನೆ ಮಾಡುತ್ತಿದ್ದನು. ಗ್ರಾಮಸ್ಥರು ತಲುಪಿದ ತಕ್ಷಣ ಆ ಯುವಕನು ಓಡಿ ಹೋಗಲು ಪ್ರಯತ್ನಿಸಿದನು. ಆತನನ್ನು ೨ ಗಂಟೆಗಳ ಪ್ರಯತ್ನದಲ್ಲಿ ಹಿಡಿಯಲಾಯಿತು ಹಾಗೂ ಅವನನ್ನು ಥಳಿಸಿದರು. ಗ್ರಾಮಸ್ಥರು ಥಳಿಸುತ್ತಿರುವುದರ ವಿಡಿಯೊ ಮಾಡಿದ್ದಾರೆ. ಗ್ರಾಮಸ್ಥರು, ಪಕ್ಕದಲ್ಲಿಯೇ ಪೊಲೀಸರ ಚೌಕಿ ಇದೆ; ಆದರೂ ಕೂಡ ನಾವು ಆ ಯುವಕನನ್ನು ಅವರಿಗೆ ಒಪ್ಪಿಸುವುದಿಲ್ಲ. ನಾವು ಅವನನ್ನು ವಶದಲ್ಲಿಟ್ಟುಕೊಂಡಿದ್ದು ಸಿಕ್ಖ ಸಂಘಟನೆಗಳನ್ನು ಕರೆದಿದ್ದೇವೆ. ಅವರೇ ಅವನ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ. ಆ ಯುವಕನು ದೆಹಲಿಯಿಂದ ಬಂದಿದ್ದಾನೆ. ಯುವಕನು, ತನಗೆ ಹಣ ನೀಡಿ ವಿಡಂಬನೆ ಮಾಡಲು ಕಳುಹಿಸಲಾಗಿತ್ತು. ಎಂದು ಹೇಳಿದನು. ಅದನ್ನು ಬಿಟ್ಟು ತನ್ನ ಬಗ್ಗೆ ಏನೂ ಕೂಡ ಹೇಳಲಿಲ್ಲ. ಅವನು ತನ್ನ ಹೆಸರನ್ನು ಕೂಡ ಹೇಳುತ್ತಿಲ್ಲ. ಅನಂತರ ಆ ಯುವಕನು ಅಲ್ಲಿಂದ ಓಡಿ ಹೋಗಿರುವುದು ತಿಳಿದು ಬಂದಿದೆ.