ಬಾಬರನು 500 ವರ್ಷಗಳ ಹಿಂದೆ ಶ್ರೀರಾಮಮಂದಿರವನ್ನು ಕೆಡವಿ ಅಲ್ಲಿ ಬಾಬ್ರಿಯನ್ನು ಕಟ್ಟಿದನು, 400 ವರ್ಷಗಳ ಹಿಂದೆ ಔರಂಗಜೇಬನು ಶ್ರೀ ಕಾಶಿ ವಿಶ್ವನಾಥನ ದೇವಾಲಯವನ್ನು ಕೆಡವಿ ಅಲ್ಲಿ ಜ್ಞಾನವಾಪಿ ಮಸೀದಿಯನ್ನು ಕಟ್ಟಿದನು, ಅದೇ ರೀತಿ ಮಥುರಾದಲ್ಲಿ ಶ್ರೀಕೃಷ್ಣ ದೇವಾಲಯವನ್ನು ಕೆಡವಿ ಅಲ್ಲಿ ಈದ್ಗಾ ಮಸೀದಿಯನ್ನು ಕಟ್ಟುದನು, ಅದಕ್ಕಾಗಿ ಅವರ ವಂಶಜರನ್ನು ಯಾರು ಶಿಕ್ಷಿಸುತ್ತಾರೆ ? ಇದನ್ನು ಓವೈಸಿ ಹೇಳುತ್ತಾರೆಯೇ ?- ಸಂಪಾದಕರು
ಮುಂಬಯಿ – `ಧರ್ಮನಿರಪೇಕ್ಷ’ ಪದವು ಮುಸ್ಲಿಮರಿಗೆ ಹೆಚ್ಚಿನ ಅಪಾಯ ತಂದಿದೆ. ಮಸೀದಿಯನ್ನು ಕೆಡವಿದ ನಂತರ ಮುಸ್ಲಿಮರ ರಕ್ತದೊಕುಳಿ ನಡೆಸಲಾಯಿತು, ಮುಸ್ಲಿಂ ಯುವಕರ ಮೇಲೆ `ಟಾಡಾ’ ಹೇರಲಾಯಿತು. ಇದು ಯಾವ ರೀತಿಯ ಧರ್ಮನಿರಪೇಕ್ಷ ? ಬಾಬರಿ ಮಸೀದಿ ಧ್ವಂಸ ಮಾಡಿದವರನ್ನು ಧರ್ಮನಿರಪೇಕ್ಷವು ಶಿಕ್ಷಿಸಿದೆಯೇ ? ಎಂದು ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಎಂ.ಐ.ಎಂ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ಅಸದುದ್ದೀನ್ ಓವೈಸಿ ಪ್ರಶ್ನಿಸಿದರು. ಡಿಸೆಂಬರ 11 ರಂದು ಚಾಂದಿವಲಿಯಲ್ಲಿ ನಡೆದ ಎಂ.ಐ.ಎಂ.ನ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ವೇದಿಕೆಯಲ್ಲಿ ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್, ಮಾಜಿ ಶಾಸಕ ವಾರಿಸ್ ಪಠಾಣ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.
भारत के मुसलमानों से पूछता हूं, धर्मनिरपेक्षता से क्या मिला, मस्जिद गिराने वालों को सजा हुई: ओवैसी #asaduddinowaisi https://t.co/dnpExWSmDo
— Oneindia Hindi (@oneindiaHindi) December 12, 2021
ಎಂ.ಐ.ಎಂ.ನ ಮುಂಬಯಿನಲ್ಲಿನ ಸಭೆಯಲ್ಲಿ ಕೊರೋನಾ ನಿಯಮಗಳ ಧೂಳಿಪಟ, ಪೊಲೀಸರ ವಿರೋಧವನ್ನು ಮೆಟ್ಟಿ ನಡೆಸಿದ ಸಭೆ !
ಕೊರೋನಾ ನಿಯಮಗಳು ಜನಸಾಮಾನ್ಯರಿಗೆ ಮಾತ್ರವೇ? ಪೊಲೀಸ್ ಮತ್ತು ಆಡಳಿತವು ಎಂ.ಐ.ಎಂ.ನ ಜನರ ವಿರುದ್ಧ ಏಕೆ ಕ್ರಮ ಕೈಗೊಳ್ಳುವುದಿಲ್ಲ ?- ಸಂಪಾದಕರು
ಮುಂಬಯಿನಲ್ಲಿ ಸಭೆ ನಡೆಸಲು ಅನುಮತಿ ನೀಡದಿದ್ದಾಗ ಎಂ.ಐ.ಎಂ. ನವರು ಪೊಲೀಸರ ವಿರೋಧವನ್ನು ಮೆಟ್ಟಿನಿಂತು ಸಾರ್ವಜನಿಕ ಸಭೆ ಆಯೋಜಿಸಿತ್ತು. ಈ ಸಭೆಯಲ್ಲಿದ್ದ ಗಣ್ಯರು, ಅದೇ ರೀತಿ ಸಭೆಯಲಿದ್ದ ಕಾರ್ಯಕರ್ತರು ಮಾಸ್ಕ್ ಧರಿಸಿರಲಿಲ್ಲ. ಸಭೆ ನಡೆಯುವ ಸ್ಥಳದಲ್ಲಿ ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಇದರಿಂದ ಈ ಸಭೆಯಲ್ಲಿ ಕೊರೋನಾದ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡು ಬಂದಿತು. ಮುಸ್ಲಿಮರಿಗೆ ಶೈಕ್ಷಣಿಕ ಮೀಸಲಾತಿ ನೀಡಬೇಕು ಹಾಗೂ ವಕ್ಫ್ ಬೋರ್ಡ್ ಭೂಮಿಯ ಹಕ್ಕು ಉಳಿಸಿಕೊಳ್ಳಲು ಒತ್ತಾಯಿಸಿ ಸಭೆ ಆಯೋಜಿಸಲಾಗಿತ್ತು.