ಸಿಪಾಯಿಜಾಲಾ (ತ್ರಿಪುರಾ) – ಇಲ್ಲಿಯ ‘ಒ.ಏನ್.ಜಿ.ಸಿ. ಗ್ಯಾಸ್ ಕಲೆಕ್ಷನ್ ಸ್ಟೇಷನ್’ ಹತ್ತಿರ ಇರುವ ‘ತ್ರಿಪುರಾ ಸ್ಟೇಟ್ ರೈಫಲ್ಸ್’ನ ನೆಲೆಯಲ್ಲಿ ‘ರೈಫಲ್ಸ್’ನ ೫ ನೇ ಬಟಾಲಿಯನ್ ರೈಫಲ್ ಮ್ಯಾನ್ ಸುಕಾಂತ ದಾಸ ಇವರು ವರಿಷ್ಠ ಸಹಕಾರಿ ಸುಭೆದಾರ್ ಮಾರ್ಕಾ ಸಿಂಗ್ ಜಮತಿಯಾ ಮತ್ತು ನಾಯಬ ಮತ್ತು ಸುಭೇದಾರ್ ಕಿರಣ್ ಜಮತಿಯಾ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ತದನಂತರ ದಾಸ ಇವರು ಮಧುಪುರ ಪೊಲೀಸ್ ಠಾಣೆಯಲ್ಲಿ ಆತ್ಮಸಮರ್ಪಣೆ ಮಾಡಿದ್ದಾರೆ. ಸುಕಾಂತ ದಾಸ ಅವರು ರಜೆಗಾಗಿ ಅರ್ಜಿ ನೀಡಿದ್ದರು. ಅವರಿಗೆ ರಜೆ ನೀಡಲಾಗಿತ್ತು; ಆದರೂ ಅವರಿಗೆ ಹೋಗಲು ಬಿಡುತ್ತಿರಲಿಲ್ಲ. ಅದಕ್ಕಾಗಿ ಅವರ ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ನಡೆದು ಈ ಕೃತ್ಯ ನಡೆದಿದೆ.

ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ವಾಯುಪಡೆಯ ಅಧಿಕಾರಿಯ ಪತ್ನಿಯ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳಿಗೆ 5 ದಿನಗಳ ಪೊಲೀಸ್ ಕಸ್ಟಡಿ!
‘ಭಾಜಪ ಹರಡಿದ ವಿಷದಿಂದ ದೇಶದ ಬಹುಸಂಖ್ಯಾತ ಸಮಾಜ ವಿಷಪೂರಿತವಾಗಿದೆ!'(ಅಂತೆ)
ಪಂಜಾಬ್ ಸಿಎಂ ಭಗವಂತ್ ಮಾನ್ ‘ಗುರು ದ್ರೋಹಿ’ ಎಂದು ಘೋಷಿಸಿದ ಅಕಾಲ ತಖ್ತ್
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೋಂದಣಿ ಕುರಿತಾದ ರಾಜ್ಯದ ಗೃಹ ಸಚಿವರ ಹೇಳಿಕೆಯ ಮೇಲೆ ಪ.ಪೂ. ಸರಸಂಘಚಾಲಕ್ ಡಾ. ಮೋಹನಜಿ ಭಾಗವತ್ ಅವರ ಹೇಳಿಕೆ
‘ನೀಟ್’ ಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ಗೆ ನಿಷೇಧ