`ವಂದೇ ಮಾತರಂ’ ಗೀತೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ !’ (ಅಂತೆ) – ಎಂ.ಐ.ಎಂ.

ಬಿಹಾರ ವಿಧಾನಸಭೆಯಲ್ಲಿ `ವಂದೇ ಮಾತರಂ’ ಹೇಳಲು ಎಂ.ಐ.ಎಂ.ನ ಶಾಸಕರಿಂದ ವಿರೋಧ !

* ಯಾರಿಗೆ ನಿಜವಾದ ಅರ್ಥದಲ್ಲಿ ಈ ದೇಶದ ಭೂಮಿಯ ಮೇಲೆ ಪ್ರೀತಿ ಇದೆಯೋ ಮತ್ತು ಅದನ್ನು ತನ್ನದೆಂದು ತಿಳಿದುಕೊಳ್ಳುತ್ತಾರೋ, ಅವರು ಎಂದಿಗೂ `ವಂದೇ ಮಾತರಂ’ಗೆ ವಿರೋಧಿಸುವುದಿಲ್ಲ; ಆದರೆ ಯಾರು ವಿರೋಧಿಸುತ್ತಿದ್ದಾರೆ, ಅವರು ಈ ಭೂಮಿಯ ಮೇಲೆ ಎಷ್ಟೇ ಪ್ರೀತಿಯನ್ನು ತೋರ್ಪಡಿಸಿದರೂ ಅದು ಬರಿ ಕಪಟವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು

* ದೇಶದ ಮತಾಂಧರು ಧರ್ಮದ ಹೆಸರನ್ನು ಮುಂದಿಟ್ಟುಕೊಂಡು `ವಂದೇ ಮಾತರಂ’ ಹೇಳಲು ಸುತ್ತಲೇ ಇದ್ದಾರೆ. ಅವರಿಗೆ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಎಂದೂ ವಿರೋಧಿಸುವುದಿಲ್ಲ ಅಥವಾ ಅವರಿಗೆ `ವಂದೇ ಮಾತರಂ’ ಹೇಳಲು ಹೇಳುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !- ಸಂಪಾದಕರು

ಬಿಹಾರ ವಿಧಾನಸಭೆ

ಪಾಟಲಿಪುತ್ರ (ಬಿಹಾರ) – ಬಿಹಾರದ ವಿಧಾನಸಭೆಯಲ್ಲಿ ಚಳಿಗಾಲದ ಅಧಿವೇಶನವು ಡಿಸೆಂಬರ್ 4 ರಂದು ಮುಕ್ತಾಯಗೊಂಡಿತು. ಆ ಸಮಯದಲ್ಲಿ `ವಂದೇ ಮಾತರಂ’ ಈ ರಾಷ್ಟ್ರೀಯ ಗೀತೆಯಿಂದ ಅಧಿವೇಶನದ ಮುಕ್ತಾಯ ಮಾಡುವಾಗ ಅಸದುದ್ದಿನ್ ಓವೈಸಿ ಇವರ ಎಂ.ಐ.ಎಂ. ಪಕ್ಷದ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. `ವಂದೇ ಮಾತರಂ’ ಗೀತೆ ನಮ್ಮ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ. ಸಂವಿಧಾನದಲ್ಲಿ ಹೀಗೆ ಎಲ್ಲೋ ಬರೆದಿಲ್ಲ. ಇದು ನಮ್ಮ ಪರಂಪರೆಗೆ ವಿರುದ್ಧವಾಗಿದೆ. ಈ ಮೊದಲು ಸದನದಲ್ಲಿ ಈ ಗೀತೆ ಎಂದೂ ಹಾಡಲಿಲ್ಲ. ಈಗ ಇದು ಒಂದು ಹೊಸ ಪರಂಪರೆ ಆರಂಭಿಸಿದ್ದಾರೆ. ಅದರ ಅವಶ್ಯಕತೆ ಏನೂ ಇರಲಿಲ್ಲ’, ಇಂತಹ ಶಬ್ದಗಳಲ್ಲಿ ಎಂ.ಐ.ಎಂ.ನ ಶಾಸಕ ಅಖ್ತರುಲ್ ಇಮಾನ್ ಇವರು `ವಂದೇ ಮಾತರಂ’ಗೆ ವಿರೋಧಿಸಿದರು.

ಇಮಾನ್ ತಮ್ಮ ಮಾತನ್ನು ಮುಂದುವರೆಸುತ್ತಾ, ದೇಶದ ಸಂವಿಧಾನದಲ್ಲಿ ಪ್ರೇಮ ಮತ್ತು ಸಹೋದರತೆಯ ಉಲ್ಲೇಖವಿದೆ. ಅದರಲ್ಲಿ ಎಲ್ಲಾ ಧರ್ಮಗಳು ಗೌರವಿಸುವಂತೆ ಉಲ್ಲೇಖವಿದೆ; ಆದ್ದರಿಂದ ನಾನು `ವಂದೇ ಮಾತರಂ’ ಹಾಡಿಲ್ಲ ಮತ್ತು ಎಂದಿಗೂ ಹಾಡುವುದಿಲ್ಲ; ಆದರೆ ಇದರಿಂದ ನಮ್ಮ ದೇಶಭಕ್ತಿಯ ಬಗ್ಗೆ ಯಾರು ಪ್ರಶ್ನೆ ಚಿಹ್ನೆಯನ್ನು ಎತ್ತಲು ಸಾಧ್ಯವಿಲ್ಲ. ನಮಗೆ ಈ ದೇಶದ ಮೇಲೆ ನಿಷ್ಠೆ ಇದ್ದು ಯಾರು ನಮ್ಮ ಮೇಲೆ `ವಂದೇ ಮಾತರಂ’ ಹಾಡಲು ಬಲವಂತ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಎಂ.ಐ.ಎಂ.ಗೆ ದೇಶವನ್ನು ತಾಲಿಬಾನ್ ಮಾಡುವುದಿದೆ ! – ಭಾಜಪ

ಎಂ.ಐ.ಎಂ.ನ ಶಾಸಕರ ಈ ನಿಲುವು ತಾಲಿಬಾನ್ ಪದ್ಧತಿಯಾಗಿದೆ. ಅವರಿಗೆ ಈ ದೇಶವನ್ನೂ `ತಾಲಿಬಾನ್’ ಮಾಡುವುದಿದೆ. ಜಿಹಾದಿ ಮತ್ತು ಜಾತ್ಯತೀತ ವ್ಯಕ್ತಿಗಳಿಂದ ಇದಕ್ಕಿಂತ ಹೆಚ್ಚೇನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರಿಗೆ ಈ ದೇಶದ ಮೇಲಾಗಲಿ ಅಥವಾ ಈ ದೇಶದ ಪರಂಪರೆಯ ಮೇಲಾಗಲಿ ಯಾವುದೇ ಪ್ರೇಮವಿಲ್ಲ, ಎಂದು ಭಾಜಪದ ಶಾಸಕ ಹರಿಭೂಷಣ ಠಾಕೂರ ಇವರು ಈಮಾನ್ ಇವರನ್ನೂ ಟೀಕಿಸಿದರು.