ಸಮಸ್ಯೆ ಬಗೆಹರಿಸಲು ಮೊದಲು ಮಧ್ಯಸ್ಥಿಕೆಯ ಪ್ರಯತ್ನ ಮಾಡಬೇಕು ! – ನ್ಯಾಯಾಧೀಶ ಎಂ.ವಿ. ರಮಣಾ

ನ್ಯಾಯಾಧೀಶ ಎಂ.ವಿ. ರಮಣಾ

ಭಾಗ್ಯನಗರ (ತೆಲಂಗಾಣಾ) – ಮಧ್ಯಸ್ಥಿಕೆಯ ಮೂಲಕ ಯಾವುದೇ ಸಮಸ್ಯೆಯನ್ನು ಕಡಿಮೆ ಸಮಯದಲ್ಲಿ ಬಗೆಹರಿಸಬೇಕು. ನ್ಯಾಯಾಲಯಕ್ಕೆ ಹೋಗಿ ಅದಕ್ಕಾಗಿ ಅಲೆದಾಡುವ ಸಮಯ ತಪ್ಪಿಸಬೇಕು. ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಸಹಾಯ ಪಡೆಯಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ. ರಮಣಾ ಇವರು ಇಲ್ಲಿ ಒಂದು ಕಾರ್ಯಕ್ರಮದ ಸಮಯದಲ್ಲಿ ಹೇಳಿದರು. `ಎಲ್ಲಿ ಸಾಧ್ಯವಿದೆಯೋ ಅಲ್ಲಿ ಮಹಿಳೆಯರು ವಿವಾದ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕು’, ಎಂದೂ ಹೇಳಿದರು.

ಮುಖ್ಯ ನ್ಯಾಯಾಧೀಶ ರಮಣಾ ತಮ್ಮ ಮಾತನ್ನು ಮುಂದುವರೆಸುತ್ತಾ, ಮಹಾಭಾರತದ ಕಾಲದಲ್ಲಿ ಮಧ್ಯಸ್ಥಿಕೆಯ ಉಲ್ಲೇಖವಿದೆ. ಮಹಾಭಾರತದಲ್ಲಿ ಭಗವಾನ ಶ್ರೀಕೃಷ್ಣನು ಪಾಂಡವರ ಮತ್ತು ಕೌರವರ ಮಧ್ಯದಲ್ಲಿ ಮಧ್ಯಸ್ಥಿಕೆಯ ಪ್ರಯತ್ನ ಮಾಡಿದ್ದರು. ಆಸ್ತಿಯ ವಿಭಜನೆಯನ್ನು ಕುಟುಂಬದಲ್ಲಿನ ಸದಸ್ಯರು ಸೌಹಾರ್ದತೆಯಲ್ಲಿ ಬಗೆಹರಿಸಬೇಕು’ ಎಂದು ಹೇಳಿದರು.