ಗುರುಗ್ರಾಮದಲ್ಲಿ (ಹರಿಯಾಣಾ) ಸಾರ್ವಜನಿಕ ಸ್ಥಳಗಳಲ್ಲಿ ನಡೆಸುವ ನಮಾಜು ಪಠಣಕ್ಕೆ ಹಿಂದೂಗಳಿಂದ ಪುನಃ ವಿರೋಧ

20 ಜನರು ಪೊಲೀಸರ ವಶಕ್ಕೆ

ಹರಿಯಾಣಾದಲ್ಲಿ ಭಾಜಪ ಸರಕಾರ ಇರುವಾಗ ಹಿಂದೂ ಮತ್ತು ಅವರ ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜುಪಠಣಕ್ಕೆ ನಿರಂತರವಾಗಿ ವಿರೋಧಿಸಬೇಕಾಗುತ್ತದೆ ಹಾಗೂ ಪೊಲೀಸರು ಮತ್ತು ಆಡಳಿತದವರು ಅದರಲ್ಲಿ ಹಸ್ತಕ್ಷೇಪ ಮಾಡಿ ಅದನ್ನು ನಿಲ್ಲಿಸುವುದಿಲ್ಲ, ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !- ಸಂಪಾದಕರು 

ಗುರುಗ್ರಾಮ (ಹರಿಯಾಣಾ) – ಇಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತಿರುವ ನಮಾಜು ಪಠಣಕ್ಕೆ ಹಿಂದೂಗಳು ಡಿಸೆಂಬರ್ 3 ರಂದು ಪುನಃ ವಿರೋಧ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಪೊಲೀಸರು 20 ಜನರನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ವಾರಗಳಿಂದ ಇಲ್ಲಿಯ ಸೆಕ್ಟರ್ 37 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವ ನಮಾಜು ಪಠಣಕ್ಕೆ ನಿರಂತರವಾಗಿ ವಿರೋಧ ವ್ಯಕ್ತವಾಗುತ್ತಿದೆ. ಗುರುಗ್ರಾಮ ನಗರದಲ್ಲಿ ಪೊಲೀಸರಿಂದ ಮುಸಲ್ಮಾನರಿಗೆ 20 ಸ್ಥಳಗಳಲ್ಲಿ ನಮಾಜುಪಠಣಕ್ಕೆ ಅನುಮತಿ ನೀಡಿದ್ದೂ ಅದಕ್ಕೆ ಹಿಂದೂಗಳು ಮತ್ತು ಅವರ ಸಂಘಟನೆಗಳು ವಿರೋಧಿಸುತ್ತಿದ್ದಾರೆ. ಕಳೆದ ವಾರದಲ್ಲಿ ಸೆಕ್ಟರ್ 37 ರಲ್ಲಿ ಹಿಂದೂಗಳು ನಮಾಜು ಪಠಣ ಮಾಡುವ ಸ್ಥಳಗಳಲ್ಲಿ ಯಾಗ ಮಾಡಿದ್ದರು. ಆದ್ದರಿಂದ ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಒಂದು ಮೂಲೆಯಲ್ಲಿ ನಮಾಜು ಪಠಣ ಮಾಡಲಾಗಿತ್ತು. ಆಗ `ಜೈ ಶ್ರೀ ರಾಮ್’ನ ಘೋಷಣೆ ಕೂಗಲಾಗಿತ್ತು. ಪ್ರತಿ ಶುಕ್ರವಾರ ಎಂದರೆ ನಮಾಜಿನ ದಿನದಂದು ಆ ಸ್ಥಳಗಳಲ್ಲಿ ಪೊಲೀಸರ ಕಾವಲು ಇಡಲಾಗುತ್ತದೆ.