‘ಇದು ಭಾರತದಲ್ಲಿರುವ ಇಸ್ಲಾಂ ದ್ವೇಷಕ್ಕೆ ಇನ್ನೂ ಒತ್ತು ನೀಡಿದಂತಾಗುತ್ತದೆ !’ (ಅಂತೆ)

  • ‘ಸೂರ್ಯವಂಶಿ’ ಚಲನಚಿತ್ರದಲ್ಲಿ ಖಳನಾಯಕನಿಗೆ ಮುಸಲ್ಮಾನ ಹೆಸರಿಡಲಾದ ಬಗ್ಗೆ ಪಾಕಿಸ್ತಾನ ರಾಷ್ಟ್ರಪತಿಯಿಂದ ಆಕ್ಷೇಪ

  • ಚಲನಚಿತ್ರದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಭಯೋತ್ಪಾದಕರ ಮೇಲಾಧಾರಿತ ಕಥೆ !

ಪಾಕಿಸ್ತಾನದ ರಾಷ್ಟ್ರಪತಿಯ ಕೂಗಾಟ ! ಭಾರತದಲ್ಲಿ ಅಲ್ಪಸಂಖ್ಯಾತರು ಅಪರಾಧದಲ್ಲಿ ಮುಂಚೂಣಿಯಲ್ಲಿದ್ದಾರೆ, ಇದು ಯಾವಾಗಲೂ ಬೆಳಕಿಗೆ ಬರುತ್ತಿರುತ್ತದೆ. ಭಾರತದಲ್ಲಿ ಕಳೆದ ೩ ದಶಕಗಳಿಂದ ನಡೆಯುತ್ತಿರುವ ಭಯೋತ್ಪಾದನೆಯು ಇಸ್ಲಾಮಿಕ್ ಭಯೋತ್ಪಾದನೆಯಾಗಿದೆ, ಇದು ಬಹಿರಂಗವಾಗಿದೆ. ಇಂತಹ ಭಯೋತ್ಪಾದಕರ ಹೆಸರನ್ನು ಚಲನಚಿತ್ರದಲ್ಲಿ ತೋರಿಸಿದಾಗ ಪಾಕಿಸ್ತಾನದ ರಾಷ್ಟ್ರಪತಿಗೆ ಏಕೆ ತೊಂದರೆಯಾಗುತ್ತದೆ ?

ಮುಂಬಯಿ : ಇತ್ತೀಚೆಗಷ್ಟೇ ತೆರೆಕಂಡ ‘ಸೂರ್ಯವಂಶಿ’ ಹಿಂದಿ ಚಲನಚಿತ್ರದಲ್ಲಿ ಖಳನಾಯಕನಿಗೆ ಮುಸಲ್ಮಾನ ಹೆಸರು ಇಟ್ಟ ಬಗ್ಗೆ ಕೆಲವರಿಂದ ವಿಚಾರಿಸಲಾಗುತ್ತಿದೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಅಲ್ವಿ ಮತ್ತು ಪಾಕಿಸ್ತಾನಿ ನಟಿ ಮೆಹವಿಶ ಹಯಾತ್ ಕೂಡ ಈ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಪಾಕಿಸ್ತಾನದ ರಾಷ್ಟ್ರಪತಿ ಆರಿಫ್ ಇವರು, ಇದು ಭಾರತದ ‘ಇಸ್ಲಾಮೋಫೋಬಿಯಾ’ ಕ್ಕೆ(ಇಸ್ಲಾಂ ಬಗ್ಗೆ ದ್ವೇಷ) ಮತ್ತಷ್ಟು ಉತ್ತೇಜನ ನೀಡಲಿದೆ. ಈ ರೀತಿಯ ವಿಷಯವನ್ನು ಭಾರತೀಯ ಜನರು ಸರಿಯಾಗಿ ನಿಭಾಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.’ ಎಂದು ಹೇಳಿದರು. ಚಲನಚಿತ್ರದ ಕಥೆಯು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಭಯೋತ್ಪಾದಕರ ಮೇಲಾಧಾರಿತವಾಗಿದೆ.

ಪಾಕಿಸ್ತಾನಿ ನಟಿ ಮೆಹವಿಶ ಹಯಾತ ಇವರು ಟ್ವೀಟ್ ಮಾಡುತ್ತಾ, ‘ಸೂರ್ಯವಂಶಿ’ ಚಲನಚಿತ್ರವು ‘ಇಸ್ಲಾಮೋಫೋಬಿಯಾ’ವನ್ನು ಹೆಚ್ಚು ಮಾಡುತ್ತಿದೆ. ಇಂತಹ ವಿಷಯವು ಹಾಲಿವುಡ್‌ನಿಂದ ಪ್ರಾರಂಭವಾಗಿತ್ತು. ನಾವು ಚಲನಚಿತ್ರದಲ್ಲಿ ಮುಸಲ್ಮಾನ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಚಿತ್ರಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ನಾವು ಅದಕ್ಕೆ ನ್ಯಾಯ ನೀಡಬಹುದು ಎಂದು ಹೇಳಿದರು.

ಹಿಂದೂವನ್ನು ಖಳನಾಯಕವೆಂದು ತೋರಿಸಿದಾಗ ಏಕೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ? – ನಿರ್ದೇಶಕ ರೋಹಿತ ಶೆಟ್ಟಿ

ಇದಕ್ಕೂ ಮೊದಲು ಮುಸಲ್ಮಾನ ಖಳನಾಯಕನನ್ನು ತೋರಿಸುವ ಬಗ್ಗೆ ಉದ್ಭವಿಸಿದ ಪ್ರಶ್ನೆಗೆ ಉತ್ತರಿಸುತ್ತಾ ಚಲನಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಇವರು, ನನ್ನ ಚಲನಚಿತ್ರದಲ್ಲಿ ಖಳನಾಯಕ ಹಿಂದೂ ಆಗಿದ್ದರೆ, ಈ ಪ್ರಶ್ನೆ ಕೇಳುತ್ತಿದ್ದರೇ ? ನನ್ನ ೩ ಚಲನಚಿತ್ರಗಳಲ್ಲಿ ಹಿಂದೂ ಖಳನಾಯಕರಿದ್ದರು, ಆಗ ಯಾರೂ ಇಂತಹ ಪ್ರಶ್ನೆಗಳನ್ನು ಕೇಳಲಿಲ್ಲ. ಪಾಕಿಸ್ತಾನದಿಂದ ಭಯೋತ್ಪಾದಕರು ಭಾರತಕ್ಕೆ ಬರುತ್ತಿದ್ದರೆ ಅವರ ಹೆಸರನ್ನು ಚಲನಚಿತ್ರದಲ್ಲಿ ಏನೆಂದು ಇಡಬೇಕು ? ಅವರ ಧರ್ಮ ಯಾವುದು ? ಭಯೋತ್ಪಾದಕರು ಪಾಕಿಸ್ತಾನದಿಂದ ಬರುತ್ತಾರೆ ಮತ್ತು ಭಾರತೀಯ ಪೊಲೀಸ್ ಅಧಿಕಾರಿಗಳು ಹಿಡಿಯುತ್ತಾರೆ, ಎಂಬ ಅಂಶದ ಮೇಲಾಧಾರಿತವಾಗಿಯೇ ಚಲನಚಿತ್ರದ ಕಥೆಯಿದೆ ಎಂದು ಹೇಳಿದರು.