ನವದೆಹಲಿ – ಕಳೆದ 75 ವರ್ಷಗಳಲ್ಲಿ ದೇಶವು ನಿರೀಕ್ಷೆಯಂತೆ ಪ್ರಗತಿ ಕಂಡಿಲ್ಲ; ಏಕೆಂದರೆ ಪ್ರಗತಿಗಾಗಿ ನಾವು ಆರಿಸಿದ್ದ ಮಾರ್ಗ ಯೋಗ್ಯವಾಗಿರಲಿಲ್ಲ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಡಾ. ಮೋಹನ ಭಾಗವತರು ಇಲ್ಲಿ ಆಯೋಜಿಸಿದ್ದ ಒಂದು ಕಾರ್ಯಕ್ರಮದಲ್ಲಿ ಹೇಳಿದರು.
Mohan Bhagwat rues lack of progress in 75 yrs; avers ‘Be like Lord Ram’ amid sloganeering https://t.co/mpHaBOz6wJ
— Republic (@republic) November 22, 2021
ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸಿ ಹೀಗೆಂದರು,
1. ಭಾರತದ ಜನರು ಈ ಭೂಮಿಯನ್ನು ಪ್ರಾಚೀನಕಾಲದಿಂದಲೂ `ಮಾತೃಭೂಮಿ’ ಎಂದು ಪರಿಗಣಿಸಿದ್ದಾರೆ. ನಾವು ಇದೇ ನಿಲುವನ್ನು ಶಾಶ್ವತವಾಗಿ ಇಟ್ಟುಕೊಂಡರೆ ಮತ್ತು ಸಹೋದರ ಸಹೋದರಿಯರು ಎಂದು ಒಟ್ಟಾಗಿ ಕೆಲಸ ಮಾಡಿದರೆ, ಭಾರತದ ಪ್ರಗತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ.
2. ಕೇವಲ ಚುನಾವಣೆಯಲ್ಲಿ ಟಿಕೇಟು ಸಿಗಬೇಕೆಂದು ಮಾಡುವ ಸಮಾಜಸೇವೆಯು ಸೇವೆ ಅಲ್ಲ. ನಿಸ್ವಾರ್ಥವಾಗಿ ಸೇವೆ ಮಾಡುವುದು, ಇದು ನಿಜವಾದ ಸೇವೆಯಾಗಿದೆ. ಆದ್ದರಿಂದ ಕೇವಲ ರಾಜಕೀಯ ಉದ್ದೇಶದಿಂದ ಸೇವೆ ಮಾಡಬಾರದು.
3. ಜನರು ಕೇವಲ `ಜೈ ಶ್ರೀರಾಮ’ ಎಂದು ಹೇಳುವುದಲ್ಲ ಜೊತೆಗೆ ಪ್ರಭು ಶ್ರೀರಾಮನ ಹಾಗೆ ಆಗಲು ಪ್ರಯತ್ನಿಸಬೇಕು.
ನಮಗೆ ಯಾರನ್ನೂ ಮತಾಂತರ ಮಾಡಲಿಕ್ಕಿಲ್ಲ, ಆದರೆ ಜನರಿಗೆ ಹೇಗೆ ಬದುಕಬೇಕು ?’ ಎಂದು ಕಲಿಸಲಿಕ್ಕಿದೆ. ಈ ಕಾರ್ಯಕ್ರಮದ ಒಂದು ದಿನ ಮುಂಚೆ ನಡೆದಿರುವ ಬೇರೊಂದು ಕಾರ್ಯಕ್ರಮದಲ್ಲಿ ಸರಸಂಘಚಾಲಕರು, ನಮಗೆ ಯಾರನ್ನೂ ಮತಾಂತರಿಸಲಿಕ್ಕಿಲ್ಲ, ಆದರೆ ಜನರಿಗೆ `ಹೇಗೆ ಬದುಕಬೇಕು ?’ ಎಂದು ಕಲಿಸುವುದಿದೆ ! ನಾವು ಭಾರತ ಭೂಮಿಯಲ್ಲಿ ಜನಿಸಿದ್ದೇವೆ ಮತ್ತು `ನಮ್ಮ ಧರ್ಮದಿಂದ ಯಾವುದೇ ಉಪಾಸನೆ ಪದ್ಧತಿಯನ್ನು ಬದಲಾಯಿಸದೇ ಒಳ್ಳೆಯ ಮನುಷ್ಯನನ್ನು ನಿರ್ಮಿಸಬಹುದು’, ಎಂಬ ಶಿಕ್ಷಣವನ್ನು ನಮಗೆ ಇಡೀ ಪ್ರಪಂಚಕ್ಕೆ ನೀಡಬೇಕಾಗಿದೆ. ಭಾರತವನ್ನು ವಿಶ್ವಗುರು ಮಾಡಲಿಕ್ಕಿದ್ದಲ್ಲಿ ಎಲ್ಲರನ್ನು ಜೊತೆಗೂಡಿಸಿ ಸಮನ್ವಯದಿಂದ ಮುಂದೆ ಹೋಗುವ ಅವಶ್ಯಕತೆಯಿದೆ.