ಧಾರ್ಮಿಕ ದತ್ತಿ ಟ್ರಸ್ಟಗಳೂ ಇನ್ನು ಮುಂದೆ ಶೇ. 18 ರಷ್ಟು ವಸ್ತು ಮತ್ತು ಸೇವಾ ತೆರಿಗೆ ಭರಿಸಬೇಕಾಗುವುದು !

ನವ ದೆಹಲಿ – ‘ಅಥಾರಿಟಿ ಫಾರ್ ಅಡ್ವಾನ್ಸ್ ರೂಲಿಂಗ್’ನ (ಎ.ಎ.ಆರ್.ನ) ಮಹಾರಾಷ್ಟ್ರದ ವಿಭಾಗೀಯಪೀಠವು ನೀಡಿದ ನಿರ್ಧಾಯದಿಂದ ಇನ್ನು ಮುಂದೆ ಧಾರ್ಮಿಕದತ್ತಿ ಟ್ರಸ್ಟಗಳೂ ವಸ್ತು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ತುಂಬಿಸಬೇಕಾಗುತ್ತದೆ. `ಧಾರ್ಮಿಕದತ್ತಿ ಟ್ರಸ್ಟಿಗಳಿಗೆ ಸಿಗುವ ಅನುದಾನ ಮತ್ತು ಧರ್ಮದಾಯ ಇಲ್ಲದಿರುವ ದೇಣಿಗೆಯ ಮೇಲೆ ಶೇ. 18 ರಷ್ಟು ವಸ್ತು ಮತ್ತು ಸೇವಾ ತೆರಿಗೆ ತುಂಬಿಸಬೇಕಾಗುತ್ತದೆ’, ಎಂದು ನಿರ್ಣಯದಲ್ಲಿ ಹೇಳಲಾಗಿದೆ. ದೇಣಿಗೆಯ ಬಗ್ಗೆ ಎ.ಎ.ಆರ್., ದೇಣಿಗೆಯ ಉದ್ದೇಶ ಏನಾದರೂ ಧರ್ಮದಾಯವಾಗಿದ್ದರೆ, ಯಾವುದೇ ವ್ಯಾವಸಾಯದ ಲಾಭ ಪಡೆಯದಿದ್ದಲ್ಲಿ ಮತ್ತು ಜಾಹೀರಾತು ಮಾಡದಿದ್ದರೆ, ಅವುಗಳ ಮೇಲೆ ಜಿ.ಎಸ್.ಟಿ. ಅನ್ವಯಿಸುವುದಿಲ್ಲ. ಬೇರೆ ಎಲ್ಲಾ ದೇಣಿಗೆಗಳ ಮೇಲೆ ಶೇ. 18 ಜಿ.ಎಸ್.ಟಿ ಅನ್ವಯಿಸುವುದು ಎಂದು ಹೇಳಿದೆ.