117 ಸಲ ನಿಯಮಗಳನ್ನು ಉಲ್ಲಂಘಿಸುವ ತನಕ ಪೊಲೀಸರು ನಿದ್ರಿಸುತ್ತಿದ್ದರೆ ?- ಸಂಪಾದಕರು
ಭಾಗ್ಯನಗರ (ತೆಲಂಗಾಣಾ) – ಇಲ್ಲಿಯ ಸಂಚಾರಿ ಪೊಲೀಸರು ಫರೀದ ಖಾನ್ ಎಂಬ ವ್ಯಕ್ತಿಯನ್ನು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಲಾಯಿಸಿದ್ದರಿಂದ ಹಿಡಿದಿದ್ದರು. ಆತ 117 ಸಲ ನಿಯಮ ಉಲ್ಲಂಘಿಸಿದ್ದುದರಿಂದ ಆತನಿಗೆ ದಂಡ ವಿಧಿಸಲಾಗಿತ್ತು; ಆದರೆ ಇದರಲ್ಲಿ ಆತ ಒಂದು ಸಲವೂ ದಂಡ ತುಂಬಿಸಲಿಲ್ಲ ಎಂದು ತಿಳಿದುಬಂದಿದೆ. ಹೀಗೆ ಸರಾಸರಿ 30 ಸಾವಿರ ರೂಪಾಯಿ ದಂಡ ಆತನಿಂದ ವಸೂಲಿ ಮಾಡುವುದು ಬಾಕಿ ಉಳಿದಿದೆ. ಈ ಸಮಯದಲ್ಲಿ ಪೊಲೀಸರು ಅವನ ದ್ವಿಚಕ್ರ ವಾಹನ ಜಪ್ತಿ ಮಾಡಿ ಎಲ್ಲಾ ದಂಡ ತುಂಬಿಸಿ ವಾಹನ ತೆಗೆದುಕೊಂಡು ಹೋಗಲು ಹೇಳಿದ್ದಾರೆ. ಖಾನಗೆ ಈ ಕಾರಣಕ್ಕೆ ಒಂದು ನೋಟಿಸ್ ಕಳುಹಿಸಲಾಗಿದೆ. ಅದರಲ್ಲಿ, ‘ದಂಡ ತುಂಬಿಸಿ ಅಥವಾ ವಾಹನ ಜಪ್ತಿ ಮಾಡಲು ಆರೋಪ ಪತ್ರ ದಾಖಲಿಸಲಾಗುವುದು.’ ಎಂದು ಹೇಳಲಾಗಿದೆ. ಸಂಚಾರೀ ನಿಯಮಗಳಿಗನುಸಾರ ಯಾರಾದರೂ 10 ಕ್ಕಿಂತ ಹೆಚ್ಚು ಸಲದ ತುಂಬದಿದ್ದರೆ, ಅವರ ವಾಹನ ಜಪ್ತಿ ಮಾಡಲು ಪೊಲೀಸರಿಗೆ ಅಧಿಕಾರವಿದೆ.
The #Hyderabadtrafficpolice seized the two-wheeler of a man who was found with 117 pending #challans for the last seven years in connection with various traffic violations in the city.https://t.co/syHma9cZ4k
— Telangana Today (@TelanganaToday) November 17, 2021