ಜಯಪುರ (ರಾಜಸ್ಥಾನ) ಇಲ್ಲಿನ ಮಹಾವಿದ್ಯಾಲಯ ಪರಿಸರದಲ್ಲಿ ನಮಾಜು ಪಠಣಕ್ಕೆ ವಿರೋಧ !

ಅ.ಭಾ.ವಿ.ಪ. ಇಂದ ಹನುಮಾನ ಚಾಲೀಸಾದ ಪಠಣ

ರಾಜಸ್ಥಾನದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ಅಲ್ಲಿ ಮತಾಂಧರಿಂದ ಆ ರೀತಿ ಆಗುವುದು ಖಂಡಿತ !- ಸಂಪಾದಕರು

ಜಯಪೂರ (ರಾಜಸ್ಥಾನ) – ಇಲ್ಲಿನ ರಾಜಸ್ಥಾನ ಮಹಾವಿದ್ಯಾಲಯದಲ್ಲಿ ನವೆಂಬರ್ 12 ರಂದು ಕೆಲವು ಮುಸಲ್ಮಾನ ವಿದ್ಯಾರ್ಥಿಗಳು ನಮಾಜುಪಠಣ ಮಾಡಿದ್ದರು. ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಯಿತು. ಆಗ ಪೊಲೀಸರು ಆ ವಿದ್ಯಾರ್ಥಿಗಳನ್ನು ನಮಾಜುಪಠಿಸುವುದನ್ನು ತಡೆದಿದ್ದರು. ಆಗ ಕಾಂಗ್ರೆಸ್ ನೇತೃತ್ವದ ವಿದ್ಯಾರ್ಥಿ ಸಂಘಟನೆ ‘ಎನ್.ಎಸ್.ಯೂ.ಐ.’ನ ಕೆಲವು ವಿದ್ಯಾರ್ಥಿಗಳು ಪೊಲೀಸರೊಂದಿಗೆ ವಾಗ್ವಾದ ಮಾಡಿದರು. ಆ ವಿದ್ಯಾರ್ಥಿಗಳು ಮುಸಲ್ಮಾನ ವಿದ್ಯಾರ್ಥಿಗಳಿಗೆ ಮೈದಾನದಲ್ಲಿ ನಮಾಜು ಪಠಿಸಲು ಬಿಡಿ ಅಥವಾ ಅವರಿಗೆ ಅದಕ್ಕಾಗಿ ಸ್ವತಂತ್ರ ಸ್ಥಳ ನೀಡಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ ಅಖಿಲ ಭಾರತೀಯ ವಿದ್ಯಾರ್ಥೀ ಪರಿಷತ್ತು (ಅ.ಭಾ.ವಿ.ಪ.)ವು ಅದನ್ನು ವಿರೋಧಿಸಿ ಮಹಾವಿದ್ಯಾಲಯದಲ್ಲಿ ಹನುಮಾನ ಚಾಲೀಸಾವನ್ನು ಪಠಿಸಿತು. ಆದ್ದರಿಂದ ಈಗ ಮಹಾವಿದ್ಯಾಲಯದಲ್ಲಿ ಉದ್ವಿಗ್ನ ಸ್ಥಿತಿಯಿದೆ.

1. ಎನ್.ಎಸ್.ಯೂ.ಐ.ನ ಹೇಳಿಕೆಯೆಂದರೆ, ನಮಾಜುಪಠಿಸಲು ತಡೆಯುವ ಶಿಕ್ಷಕರು ಹಾಗೂ ಸುರಕ್ಷಾರಕ್ಷಕರು ಇವರೆಲ್ಲರಿಗೂ ಸ್ವಯಂಸೇವಕ ಸಂಘದೊಂದಿಗೆ ನಂಟಿದೆ. ಎನ್.ಎಸ್.ಯೂ.ಐ.ನ ಜಿಲ್ಲಾಧ್ಯಕ್ಷರಾದ ರಾಜೇಶ ಚೌಧರಿರವರು ಮಾತನಾಡುತ್ತಾ, `ಇಲ್ಲಿ ಪ್ರತಿಯೊಂದು ಧರ್ಮದ ವಿದ್ಯಾರ್ಥಿಯು ಕಲಿಯಲು ಬರುತ್ತಾನೆ; ಆದರೆ ಸಂಘದೊಂದಿಗೆ ಸಂಬಂಧವಿರುವ ಶಿಕ್ಷಕರು ನಿರ್ದಿಷ್ಟ ಧರ್ಮದ ವಿದ್ಯಾರ್ಥಿಗೆ ಮಾತ್ರ ತೊಂದರೆ ನೀಡಿದರು. ಇದು ನಮಗೆ ಒಪ್ಪಿಗೆಯಿಲ್ಲ. ಎಲ್ಲಿಯವರೆಗೂ ಕೋಮು ಸಾಮರಸ್ಯವನ್ನು ಕೆಡಿಸುವ ಶಿಕ್ಷಕರನ್ನು ಮತ್ತು ಸುರಕ್ಷಾರಕ್ಷಕರನ್ನು ಕೆಲಸದಿಂದ ತೆಗೆದುಹಾಕುವುದಿಲ್ಲವೋ, ಅಲ್ಲಿಯವರೆಗೂ ನಾವು ವಿರೋಧಿಸುತ್ತಿರುತ್ತೇವೆ, ಎಂದರು.

2. ಅ.ಭಾ.ವಿಪ.ದ ಪ್ರದೇಶಮಂತ್ರಿ ಹುಶಿಯಾರ ಮೀನಾರವರು ಈ ಬಗ್ಗೆ ಮಾತನಾಡುತ್ತಾ, `ಮಹಾವಿದ್ಯಾಲಯದ ಪರಿಸರದಲ್ಲಿ ಕೆಲವು ಸಮಾಜಕಂಟಕರು ಕೋಮು ಸಾಮರಸ್ಯವನ್ನು ಕೆಡಿಸಲು ಪ್ರಯತ್ನಿಸಿದರು. ಅಂತಹವರ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೆ ಅಭಾವಿಪದ ಇಡೀ ರಾಜ್ಯದಲ್ಲಿ ಆಂದೋಲನ ನಡೆಸುವುದು’ ಎಂದರು.