ದೆಹಲಿಯು ಜಗತ್ತಿನಲ್ಲಿ ಅತ್ಯಧಿಕ ಮಾಲಿನ್ಯಕ್ಕೊಳಗಾದ ನಗರ

ಭಾರತದ ರಾಜಧಾನಿಯೇ ಮಾಲಿನ್ಯಗೊಂಡಿದ್ದರೆ ಇತರ ನಗರಗಳ ಸ್ಥಿತಿ ಹೇಗಿರಬಹುದು ಎಂಬುದರ ಕಲ್ಪನೆ ಮಾಡಬಹುದು ! ಈ ಸ್ಥಿತಿಗೆ ಇಲ್ಲಿಯವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳು ಜವಾಬ್ದಾರರಾಗಿದ್ದಾರೆ !- ಸಂಪಾದಕರು

ನವ ದೆಹಲಿ – ಸ್ವಿಜಲ್ರ್ಯಾಂಡಿನ ‘ಎಕ್ಯೂಐ ಎಯರ್’ನ ಹವಾಮಾನ ಸಮೂಹವು ನವ ದೆಹಲಿಯನ್ನು ಜಗತ್ತಿನಲ್ಲಿ ‘ಅತ್ಯಧಿಕ ಮಾಲಿನ್ಯಯುಕ್ತ ನಗರ’ ಎಂದು ಹೇಳಿದೆ. ದೆಹಲಿಯಲ್ಲಿನ ಹವೆಯ ಗುಣಮಟ್ಟವು (ಎಕ್ಯೂಐ) 13 ನವೆಂಬರದಂದು 556 ರಷ್ಟು ನೋಂದಣಿಯಾಗಿತ್ತು, ಇದು ಗಂಭೀರ ಮಟ್ಟದಲ್ಲಿ ಬರುತ್ತದೆ. ಜಗತ್ತಿನಲ್ಲಿನ 10 ಮಾಲಿನ್ಯ ಪೂರಿತ ನಗರಗಳಲ್ಲಿ ದೆಹಲಿಯು ಮುಂಚೂಣಿಯಲ್ಲಿದೆ. ಮುಂಬೈ ಮತ್ತು ಕೋಲಕಾತಾ ನಗರಗಳೂ ಈ ಪಟ್ಟಿಯಲ್ಲಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಲಾಹೋರ ಮತ್ತು ಚೀನಾದ ಚೆಂದಗೂ ನಗರವೂ ಸೇರಿದೆ.

ಉತ್ತರ ಪ್ರದೇಶದಲ್ಲಿನ 5 ನಗರಗಳ ಹವೆಯ ಗುಣಮಟ್ಟದ ಸೂಚ್ಯಂಕವು 400ಕ್ಕೂ ಹೆಚ್ಚು !

ಉತ್ತರ ಪ್ರದೇಶದಲ್ಲಿನ ಬುಲಂದಶಹರ, ಹಾಪೂಡ, ನೋಯ್ಡಾ, ಮೇರಠ ಮತ್ತು ಗಾಜಿಯಾಬಾದ ಈ 5 ನಗರಗಳಲ್ಲಿ ಹವೆಯ ಗುಣಮಟ್ಟವು ಕುಸಿದಿದೆ. ನವೆಂಬರ್ 13 ರಂದು ಈ ನಗರಗಳಲ್ಲಿನ ಹವೆಯ ಗುಣಮಟ್ಟದ ಸೂಚ್ಯಂಕವು 400 ಕ್ಕೂ ಹೆಚ್ಚು ನೋಂದಣಿಯಾಗಿದೆ.