ಅಗರ್ತಲಾ (ತ್ರಿಪುರಾ) – ತ್ರಿಪುರಾ ರಾಜ್ಯದ ಸಿಪಹಿಜಾಲಾ ಜಿಲ್ಲೆಯ ಕಮಲಾನಗರ ಗ್ರಾಮದಲ್ಲಿ ಗುಂಪೊಂದು ಶಂಕಿತ ಗೋಕಳ್ಳನನ್ನು ಥಳಿಸಿದ್ದರಿಂದ ಆತ ಸಾವಿಗೀಡಾದನು. ಈ ಗೋಕಳ್ಳನು ಬಾಂಗ್ಲಾದೇಶದವನು ಎಂದು ಹೇಳಲಾಗುತ್ತದೆ. ಸಿಪಹಿಜಾಲಾ ಇದು ಬಾಂಗ್ಲಾದೇಶದ ಗಡಿಯಲ್ಲಿರುವ ಜಿಲ್ಲೆಯಾಗಿದೆ.
ನವೆಂಬರ್ 5 ರ ರಾತ್ರಿ, 3 ಗೋಕಳ್ಳಸಾಗಣಿಕೆದಾರರು ಬಾಂಗ್ಲಾದೇಶದ ಗಡಿ ದಾಟಿ ಭಾರತದಲ್ಲಿ ಬಂದರು. (ಇಷ್ಟು ಸುಲಭವಾಗಿ ಒಳನುಸುಳಲು ಸಾಧ್ಯವಾಗುತ್ತಿರುವುದು ಇದು ಆಂತರಿಕ ಭದ್ರತೆಗೂ ದೊಡ್ಡ ಅಪಾಯವಾಗಿದೆ. ಸರಕಾರ ಈ ಬಗ್ಗೆ ತಕ್ಷಣ ಉಪಾಯಯೋಜನೆ ತೆಗೆಯಬೇಕು ! – ಸಂಪಾದಕರು) ಈ ಮೂವರು ಇಲ್ಲಿಯ ಲಿಟನ ಪಾಲ್‍ನ ಮನೆಯ ಹೊರಗಿನ ಹಸುವನ್ನು ಕಳವು ಮಾಡುತ್ತಿದ್ದರು. ಈ ವೇಳೆ ಎಚ್ಚೆತ್ತುಕೊಂಡ ಜನ ಗೋಕಳ್ಳಸಾಗಾಟಗಾರರನ್ನು ಹಿಡಿಯಲು ಯತ್ನಿಸಿದರು. ಮೂವರಲ್ಲಿ ಇಬ್ಬರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಥಳಿಸಿದ್ದಾರೆ. ಇದರಲ್ಲಿ ಆತ ಸಾವಿಗೀಡಾಗಿದ್ದಾನೆ. ಪೊಲೀಸರು ಆತನಿಂದ ಬಾಂಗ್ಲಾದೇಶದ ಹಣ ಮತ್ತು ಸಂಚಾರವಾಣಿಗಳನ್ನು ವಶಪಡಿಸಿಕೊಂಡಿದ್ದಾರೆ.