ದೆಹಲಿಯಲ್ಲಿ ನಿರ್ಬಂಧವಿದ್ದಾಗ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ್ದರಿಂದ ಪ್ರಚಂಡ ಮಾಲಿನ್ಯ !

ಉಸಿರಾಡಲೂ ಕಷ್ಟಪಡುತ್ತಿರುವ ಜನತೆ !

* ಆ ಸಮಯದಲ್ಲಿ ಪೊಲೀಸರು ಏನು ಮಾಡುತ್ತಿರುತ್ತಾರೆ ? ಅವರೇನಾದರೂ ಕುರುಡರು ಹಾಗೂ ಕಿವುಡರಾಗಿದ್ದರೇನು ? ಒಂದು ವೇಳೆ ಪಟಾಕಿಯ ಮೇಲೆ ನಿರ್ಬಂಧ ಹೇರಿಯೂ ಅದನ್ನು ಸಿಡಿಸಲಾಗುತ್ತದೆ ಎಂದರೆ ಆ ನಿರ್ಬಂಧವು ಕೇವಲ ತಮಾಷೆಯಾಗಿತ್ತು ಎಂದು ಹೇಳಬೇಕಾಗುತ್ತದೆ !- ಸಂಪಾದಕರು 

* ಜನರಿಗೆ ಪಟಾಕಿಗಳಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಹಾನಿಗಳ ಮಹತ್ವವನ್ನು ತಿಳಿಸಿಕೊಡಲು ಆಡಳಿತಾರೂಢರು ವಿಫಲಗೊಂಡಿದ್ದಾರೆ, ಎಂಬುದೇ ಇದರಿಂದ ಸ್ಪಷ್ಟವಾಗುತ್ತದೆ !- ಸಂಪಾದಕರು 

* ಒಂದು ವೇಳೆ ಪಟಾಕಿ ಸಿಡಿಸಲು ನಿರ್ಬಂಧ ಹೇರಲಾಗಿತ್ತು ಎಂದಾದರೆ, ಆಗ ದೆಹಲಿಯಲ್ಲಿ ಪಟಾಕಿ ಮಾರಾಟ ಮಾಡುವವರ ಮೇಲೆ ನಿರ್ಬಂಧ ಹೇರಲಾಗಿರಲಿಲ್ಲವೇನು ? ಒಂದು ವೇಳೆ ಸರ್ವಸಾಮಾನ್ಯ ಜನತೆಗೆ ಪಟಾಕಿ ಲಭ್ಯವಾಗದಿದ್ದರೆ ಅವರು ಅದನ್ನು ಸಿಡಿಸುವ ಸಮಯವೇ ಬರುತ್ತಿರಲಿಲ್ಲ, ಎಂಬುದು ಆಡಳಿತಾರೂಢರಿಗೆ ಏಕೆ ಅರ್ಥವಾಗುವುದಿಲ್ಲ?- ಸಂಪಾದಕರು 

ಪ್ರತಿನಿಧಿಕ ಛಾಯಾಚಿತ್ರ

ನವ ದೆಹಲಿ – ರಾಜಧಾನಿ ದೆಹಲಿಯಲ್ಲಿ ನವಂಬರ ೪ ರಂದು ರಾತ್ರಿ ದೀಪಾವಳಿಯ ನಿಮಿತ್ತ ಪಟಾಕಿಗಳನ್ನು ಸಿಡಿಸಿದ್ದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಮಾಲಿನ್ಯವು ಹೆಚ್ಚಾಗಿ ಜನರಿಗೆ ಉಸಿರಾಡಲು ಕೂಡ ಕಷ್ಟವಾಗುತ್ತಿದೆ. ದೀಪಾವಳಿಯಲ್ಲಿ ಮಾಲಿನ್ಯವುಂಟು ಮಾಡುವ ಪಟಾಕಿಗಳ ಮೇಲೆ ನಿರ್ಬಂಧ ಹೇರಲಾಗಿತ್ತು; ಆದರೂ ಕೂಡ ದೆಹಲಿಯಲ್ಲಿ ಅನೇಕ ಸ್ಥಳಗಳಲ್ಲಿ ಮಾಲಿನ್ಯವುಂಟು ಮಾಡುವಂತಹ ಪಟಾಕಿಗಳನ್ನು ಸಿಡಿಸಲಾಯಿತು. ಆದ್ದರಿಂದ ಹವಾಮಾನದ ಗುಣಮಟ್ಟ ಇನ್ನೂ ಕೆಳಗುಂದಿದ್ದು ಅದು ಕೆಳಮಟ್ಟಕ್ಕೆ ಕುಸಿಯಿತು; ಮುಂಬರುವ ಕೆಲವು ದಿನಗಳಲ್ಲಿ ಅದು ಇನ್ನೂ ಕುಸಿಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪಟಾಕಿಗಳ ಹೊಗೆಯಿಂದ ನವಂಬರ ೫ ರಂದು ಬೆಳಿಗ್ಗೆ ಮಂಜಿನಂತಹ ಸ್ಥಿತಿ ನಿಮಾರ್ಣವಾಗಿತ್ತು. ಎದುರಿಗಿನ ೨೦೦ ಮೀಟರ ಅಂತರದಲ್ಲಿರುವ ಭಾಗವೂ ಕೂಡ ಅಸ್ಪಷ್ಟವಾಗಿ ಕಾಣಿಸುತ್ತಿತ್ತು.

. ದೆಹಲಿಯಲ್ಲಿನ ಜನಪಥ ಭಾಗದಲ್ಲಿ ‘ವಾಯು ಗುಣಮಟ್ಟ ಸೂಚ್ಯಾಂಕ’ (ಎ.ಕ್ಯೂ.ಆಯ.) ‘ಅಪಾಯಕರ ಶ್ರೇಣಿಗೆ ತಲುಪಿದೆ. ಸಂಪೂರ್ಣ ದೆಹಲಿಯಲ್ಲಿನ ‘ವಾಯು ಗುಣಮಟ್ಟ ನಿರ್ದೇಶಾಂಕ’ವು ೪೪೬ರ ಜೊತೆಗೆ ‘ಗಂಭೀರ ಶ್ರೇಣಿಗೆ’ ತಲುಪಿತು. ಅದೇ ಸಮಯದಲ್ಲಿ ನೊಯಡಾ ಮತ್ತು ಗಾಝಿಯಾಬಾದನಲ್ಲಿನ ಪರಿಸ್ಥಿತಿ ಅತ್ಯಂತ ಬಿಕ್ಕಟ್ಟಾಗಿತ್ತು. ನಗರದಲ್ಲಿರುವ ಹಲವರು ಗಂಟಲು ತುರಿಕೆ ಮತ್ತು ಕಣ್ಣಿನಲ್ಲಿ ನೀರು ಬರುತ್ತಿದೆ ಎಂದು ದೂರು ಸಲ್ಲಿಸಿದರು.

. ಕೇಂದ್ರ ಸರಕಾರದ ಅಂದಾಜಿಗನುಸಾರ ನವಂಬರ ೭ ಬೆಳಗ್ಗೆಯ ತನಕ ವಾಯುವಿನ ಗುಣಮಟ್ಟದಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿಲ್ಲ.