ಗೋವಾದಲ್ಲಿ ಗೋವನ್ ವಾರ್ತಾ ಪತ್ರಿಕೆಯ ದೀಪಾವಳಿ ಸಂಚಿಕೆಯ ಮುಖಪುಟದಲ್ಲಿ ಹಣೆಯಲ್ಲಿ ಕುಂಕುಮ ಇಲ್ಲದ ಮತ್ತು ಪಾಶ್ಚಾತ್ಯರಂತೆ ಬಟ್ಟೆ ಧರಿಸಿರುವ ಮಹಿಳೆಯ ಛಾಯಾಚಿತ್ರವನ್ನು ಪ್ರಕಟಿಸಿದ ಪ್ರಕರಣ
ಸಾಖಳಿ (ಗೋವಾ) – ದೇವರು, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಕಾರ್ಯನಿರತವಾಗಿರುವ ಸಾಂಖಳಿಯ ಸಂಸ್ಕೃತಿಪ್ರೇಮಿ ಮತ್ತು ಧರ್ಮಪ್ರೇಮಿ ನಾಗರಿಕರು ನವೆಂಬರ್ ೩ ರ ಸಂಜೆ ಇಲ್ಲಿಯ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ ಜಮಾಯಿಸಿ ‘ಗೋವನ್ ವಾರ್ತಾ’ ಈ ದಿನಪತ್ರಿಕೆಯು ಪ್ರಕಟಿಸಿದ ಹಿಂದೂ ಸಂಸ್ಕೃತಿಗೆ ಹೊಂದಿಕೆಯಾಗದ ದೀಪಾವಳಿ ಸಂಚಿಕೆಯ ಮುಖಪುಟವನ್ನು ವಿರೋಧಿಸಿ ದೀಪಾವಳಿ ಸಂಚಿಕೆಯನ್ನು ಸಾರ್ವಜನಿಕವಾಗಿ ಬೆಂಕಿಗಾಹುತಿ ಮಾಡಿ ಪ್ರತಿಭಟಿಸಿದರು.
ದೀಪಾವಳಿ ಹಿಂದೂಗಳ ಮಹತ್ವದ ಹಬ್ಬವಾಗಿದೆ ! ಈ ನಿಮಿತ್ತ ಅನೇಕ ದಿನಪತ್ರಿಕೆಗಳು ದೀಪಾವಳಿ ಸಂಚಿಕೆಗಳನ್ನು ಪ್ರಕಟಿಸುತ್ತವೆ. ಈ ಸಂಚಿಕೆಯ ಮುಖಪುಟದಲ್ಲಿ ಸಾತ್ತ್ವಿಕ, ಸಭ್ಯ ಮತ್ತು ಹಿಂದೂ ಸಂಸ್ಕೃತಿಗೆ ಉದ್ದೇಶಿಸಿರುವ ಸುವಾಸಿನಿಯ ಚಿತ್ರವನ್ನು ಮುದ್ರಿಸಲಾಗಿದೆ. ಈ ವರ್ಷ ‘ಗೋವನ್ ವಾರ್ತಾ’ದ ದಿನಪತ್ರಿಕೆಯು ಪ್ರಕಟಿಸಿದ್ದ ದೀಪಾವಳಿ ಸಂಚಿಕೆಯ ಮುಖಪುಟದಲ್ಲಿ ಹಣೆಯ ಮೇಲೆ ಕುಂಕುಮ ಇಲ್ಲದ, ಕೂದಲು ಬಿಟ್ಟಿರುವ, ಪಾಶ್ಚಿಮಾತ್ಯ ಉಡುಗೆ ತೊಟ್ಟಿದ ಮತ್ತು ಸ್ವಲ್ಪ ಪ್ರಮಾಣದಲ್ಲಿ ಅಂಗ ಪ್ರದರ್ಶನ ಮಾಡುವ ಓರ್ವ ಮಹಿಳೆಯ (ಮಾಡೆಲ್) ಛಾಯಾಚಿತ್ರ ಪ್ರಕಟಿಸಿದೆ. ಹಿಂದೂ ಧರ್ಮೀಯರ ಹಬ್ಬ ಮತ್ತು ಉತ್ಸವದ ಪಾವಿತ್ರ್ಯತೆ ಕಾಪಾಡುವುದು ಮಾಧ್ಯಮಗಳ ಕರ್ತವ್ಯವಾಗಿದೆ. ಇದರಿಂದಾಗಿ ಸಾಂಖಳಿಯ ಸಂಸ್ಕೃತಿಪ್ರೇಮಿ ಮತ್ತು ಧರ್ಮಪ್ರೇಮಿ ನಾಗರಿಕರು ಈ ಸಂಚಿಕೆಯನ್ನು ಬೆಂಕಿಗಾಹುತಿ ಮಾಡಿ ಪ್ರತಿಭಟನೆ ನಡೆಸಿದರು. ಅದೇ ರೀತಿ ‘ನಾಗರಿಕರು ಈ ಸಂಚಿಕೆಯನ್ನು ಖರೀದಿಸಬೇಡಿ’, ಎಂದು ಮನವಿ ಮಾಡಿದರು. ಭವಿಷ್ಯದಲ್ಲಿ ಹಿಂದೂ ಧರ್ಮ, ಹಬ್ಬ, ಉತ್ಸವಗಳು, ಹಿಂದೂ ದೇವತೆಗಳ ವಿಡಂಬನೆ ಮಾಡುವ ಮತ್ತು ಅವಮಾನಿಸುವವರ ವಿರುದ್ಧ ನಾವು ಸಕ್ರಿಯರಾಗಿರುತ್ತೇವೆ, ಎಂದು ಈ ಸಮಯದಲ್ಲಿ ಹೇಳಲಾಯಿತು.
‘ಗೋವನ ವಾರ್ತಾ’ ಸಂಸ್ಥೆಯು ಈ ಬಗ್ಗೆ ಗಮನಹರಿಸಿ ಮುಂದೆ ಈ ರೀತಿ ತಪ್ಪುಗಳನ್ನು ಸರಿಪಡಿಸಬೇಕು’, ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಲಾಯಿತು.