ತ್ರಿಪುರಾದಲ್ಲಿ ಮಸೀದಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯ ನಂತರ ಮತಾಂಧರಿಂದ ಮಹಾಕಾಳಿ ದೇವಸ್ಥಾನ ಧ್ವಂಸ !

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರಿಂದ ಅಭಾವಿಪನ ಕಾರ್ಯಕರ್ತರ ಮೇಲೆ ದಾಳಿ !

  • ಮಸೀದಿಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯ ಮೇರೆಗೆ ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಲಾಗುತ್ತದೆ, ಆದರೆ ದೇವಾಲಯಗಳ ಮೇಲೆ ದಾಳಿಯಾದ ಮೇಲೆಯೂ ಹಿಂದೂಗಳು ಕಾನೂನಿನ ಮಾರ್ಗದಿಂದ ವಿರೋಧಿಸುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಯ ವಿಷಯವಾಗಿದೆ !
  • ತ್ರಿಪುರಾದಲ್ಲಿ ಭಾಜಪದ ಸರಕಾರ ಇರುವಾಗ ಹಿಂದೂಗಳ ದೇವಾಲಯಗಳ ಮೇಲೆ ದಾಳಿಯಾಗುವುದು, ಹಿಂದೂಗಳಿಗೆ ಅಪೇಕ್ಷಿತವಿಲ್ಲ !
  • ‘ತ್ರಿಪುರಾದಲ್ಲಿ ನನ್ನ ಮುಸಲ್ಮಾನ ಸಹೋದರರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ’, ಎಂದು ಹೇಳುವ ರಾಹುಲ ಗಾಂಧಿ ಈಗ ಎಲ್ಲಿದ್ದಾರೆ ? ಈಗ ಅವರಿಗೆ ತಮ್ಮ ಹಿಂದೂ ಸಹೋದರರ ಮೇಲಿನ ಅತ್ಯಾಚಾರ ಕಾಣುತ್ತಿಲ್ಲವೇ ?

ಉನಾಕೋಟಿ (ತ್ರಿಪುರಾ) – ಇಲ್ಲಿ ಶುಕ್ರವಾರ, ಅಕ್ಟೋಬರ್ ೨೯ ರಂದು, ಮತಾಂಧರು ಕೈಲಾಶಹರ ಪ್ರದೇಶದ ಮಹಾಕಾಳಿ ದೇವಸ್ಥಾನದ ಮೇಲೆ ದಾಳಿ ಮಾಡಿ ವಿಗ್ರಹವನ್ನು ಧ್ವಂಸಗೊಳಿಸಿದರು ಮತ್ತು ದೇವಾಲಯವನ್ನು ಹಾನಿಗೊಳಿಸಿದರು. ‘ಸಮೂಹವೊಂದು ಮಸೀದಿಗೆ ಬೆಂಕಿ ಹಚ್ಚಿದೆ’, ಎಂಬ ವದಂತಿಯಿಂದ ಮತಾಂಧರು ಈ ಕೃತ್ಯ ಎಸಗಿದರು. ಮತ್ತೊಂದು ಘಟನೆಯಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿ ಶಿವಾಜಿ ಸೇನಗುಪ್ತಾ ಅವರ ಮೇಲೆ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ಎನ್.ಎಸ್.ಯು.ಐ., ಮತ್ತು ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಸಂಘಟನೆ ತೃಣಮೂಲ ಛಾತ್ರ ಪರಿಷತ್ತಿನ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಸೇನಗುಪ್ತಾ ಗಾಯಗೊಂಡಿದ್ದಾರೆ. ಶುಕ್ರವಾರ ರಾಜ್ಯದ ೧,೧೦೦ ಮಸೀದಿಗಳಿಂದ ಮುಸಲ್ಮಾನರು ಹಿಂದೂಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಆಡಳಿತವು ಈ ಪ್ರದೇಶದಲ್ಲಿ ಸೆಕ್ಷನ್ ೧೪೪ ರ ಅಡಿಯಲ್ಲಿ ಕರ್ಫ್ಯೂ ವಿಧಿಸಿದೆ. (ಕರ್ಫ್ಯೂ ಇರುವಾಗ ಇಂತಹ ಹಿಂಸಾಚಾರಕ್ಕೆ ಮತಾಂಧರು ಹೇಗೆ ಧೈರ್ಯ ಮಾಡುತ್ತಾರೆ ? ಈ ಸಮಯದಲ್ಲಿ ಪೊಲೀಸರು ಎಲ್ಲಿದ್ದರು ? ಕರ್ಫ್ಯೂ ಇದ್ದರೂ ಇಂತಹ ಘಟನೆ ನಡೆಯುತ್ತಿದ್ದರೆ, ಹಿಂದೂಗಳು ತೆರಿಗೆ ಪಾವತಿಸಿ ಪೊಲೀಸರನ್ನು ಯಾಕೆ ಸಾಕಬೇಕು ? – ಸಂಪಾದಕರು)

ಈ ಮೇಲಿನ ಚಿತ್ರವನ್ನು ಯಾರ ಭಾವನೆಗಳಿಗೆ ನೋವನ್ನುಂಟುಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು