ಭಾರತ ಸರಕಾರ ಬಾಂಗ್ಲಾದೇಶಕ್ಕೆ ತಿಳುವಳಿಕೆ ನೀಡಬೇಕು ! – ರಾ.ಸ್ವ. ಸಂಘದ ಸಭೆಯಲ್ಲಿ ಠರಾವು

* ಹಿಂದೂಗಳ ಮೇಲೆ ದಾಳಿ ಮಾಡುವವರ ವಿರುದ್ಧ ಬಾಂಗ್ಲಾದೇಶದ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು ! -ಸಂಪಾದಕರು

* ಇದನ್ನು ಸರಕಾರಕ್ಕೆ ಏಕೆ ಹೇಳಬೇಕಾಗುತ್ತದೆ ? ಇಲ್ಲಿಯವರೆಗೆ ಸರಕಾರ ತಾನಾಗಿಯೇ ಪ್ರಯತ್ನಿಸಬೇಕಿತ್ತು, ಎಂದು ಹಿಂದೂಗಳಿಗೆ ಅನಿಸುತ್ತದೆ ! -ಸಂಪಾದಕರು

ನವದೆಹಲಿ : ಬಾಂಗ್ಲಾದೇಶದಲ್ಲಿ ನವರಾತ್ರಿಯಂದು ಶ್ರೀ ದುರ್ಗಾಪೂಜೆಯ ವೇಳೆ ಹಿಂದೂಗಳ ಮೇಲೆ ನಡೆದಿರುವ ದಾಳಿಗಳು ಪೂರ್ವಯೋಜಿತವಾಗಿದ್ದು, ಕೇಂದ್ರ ಸರಕಾರವು ಈ ನೆರೆಯ ದೇಶಕ್ಕೆ ತಿಳುವಳಿಕೆ ನೀಡಬೇಕು ಎಂದು ಧಾರವಾಡದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಅಖಿಲ ಭಾರತಿಯ ಕಾರ್ಯಕಾರಿ ಮಂಡಳಿ’ಯ ಮೂರು ದಿನಗಳ ಸಭೆಯಲ್ಲಿ ಠರಾವನ್ನು ಅಂಗೀಕರಿಸಿದೆ. ‘ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ಅತ್ಯಾಚಾರವಾಗುತ್ತಿರುವಾಗ ವಿಶ್ವಸಂಸ್ಥೆಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಹೇಗೆ ಮೌನವಾಗಿರಲು ಸಾಧ್ಯ ?’ ಎಂಬ ಪ್ರಶ್ನೆಯನ್ನೂ ಈ ಸಮಯದಲ್ಲಿ ಕೇಳಲಾಯಿತು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ಸರಸಂಘಚಾಲಕ ಡಾ. ಮೋಹನ ಭಾಗವತ, ಸಹಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಎಲ್ಲ ಸಹಕಾರ್ಯದರ್ಶಿಗಳು, ಅದೇ ರೀತಿ ಪ್ರಾಂತ ಸಂಘಚಾಲಕರು, ಕಾರ್ಯಕಾರಿ ಪ್ರಚಾರಕರು, ಅಖಿಲ ಭಾರತೀಯ ಕಾರ್ಯಕಾರಿ ಸದಸ್ಯರು, ಸಂಘ ಪರಿವಾರದ ಸಂಘಟನೆಗಳ ಸಚಿವರು ಹೀಗೆ ಒಟ್ಟು ಮುನ್ನೂರ ಐವತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

1. ಸಂಘವು ಈ ಸಭೆಯ ಕುರಿತು ಒಂದು ಮನವಿಯನ್ನು ಮುದ್ರಿಸಿದೆ. ಅದರಲ್ಲಿ ಹಿಂದೂಗಳ ಮೇಲಿನ ದಾಳಿಕೋರರ ವಿರುದ್ಧ ಬಾಂಗ್ಲಾದೇಶ ಸರಕಾರವು ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ದಾಳಿಗಳನ್ನು ನಿಲ್ಲಿಸಬೇಕು. ಇದು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯವನ್ನು ನಾಶ ಮಾಡುವ ಕುತಂತ್ರವಾಗಿದೆ. ಇದಕ್ಕಾಗಿ ನಕಲಿ ಸುದ್ದಿಗಳ ಆಧಾರದಲ್ಲಿ ಧಾರ್ಮಿಕ ಒಡಕು ಹೆಚ್ಚಿಸಲು ಉದ್ದೇಶಪೂರ್ವಕ ಪ್ರಯತ್ನವಾಗುತ್ತಿದೆ. ಇದು ಕಳವಳಕಾರಿ ವಿಷಯವಾಗಿದ್ದು, ಕೇಂದ್ರ ಸರಕಾರವು ಈ ಬಗ್ಗೆ ದ್ವಿಪಕ್ಷೀಯ ಚರ್ಚೆಯ ಎಲ್ಲಾ ಮಾರ್ಗಗಳನ್ನು ಆವಲಂಬಿಸಬೇಕು.

2. ಸಭೆಯಲ್ಲಿ ಅಂಗೀಕರಿಸಿದ ಠರಾವಿನ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಅರುಣ ಕುಮಾರ ಇವರು, ನಕಲಿ ಸುದ್ದಿಗಳ ಮೂಲಕ ಧಾರ್ಮಿಕ ಕಲಹ ಸೃಷ್ಟಿಸುವುದೇ ಈ ದಾಳಿಯ ಉದ್ದೇಶವಾಗಿದೆ. ಬಾಂಗ್ಲಾದೇಶ ಸರಕಾರದೊಂದಿಗೆ ಚರ್ಚಿಸಲು ಕೇಂದ್ರವು ತನ್ನ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ತೆರೆಯಬೇಕು ಮತ್ತು ಅಲ್ಲಿಯ ಸರಕಾರಕ್ಕೆ ಹಿಂದೂಗಳು ಮತ್ತು ಬೌದ್ಧರ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಹೇಳಬೇಕು ಎಂದು ಹೇಳಿದರು.