ತ್ರಿಪುರಾದಲ್ಲಿ ನಮ್ಮ ಮುಸಲ್ಮಾನ ಸಹೋದರರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಗುತ್ತಿದೆ ! – ರಾಹುಲ್ ಗಾಂಧಿಯವರ ಕಳವಳ

ಕಳೆದ ಕೆಲವು ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗಿದ್ದ ಅಮಾನವೀಯ ಹಲ್ಲೆಯ ಬಗ್ಗೆ ‘ನಾನು ದತ್ತಾತ್ರೆಯ ಗೋತ್ರದವನಾಗಿದ್ದು ಜನಿವಾರ ಧರಿಸಿದ ಹಿಂದೂ ಆಗಿದ್ದೇನೆ’ ಎಂದು ಹೇಳುವ ರಾಹುಲ್ ಗಾಂಧಿಗೆ ಏಕೆ ಕನಿಕರ ಮೂಡಲಿಲ್ಲ? ‘ತನ್ನದೇ ಹಿಂದೂ ಸಹೋದರರನ್ನು ಬೆಂಬಲಿಸಿ ಒಂದೇ ಒಂದು ಮಾತನ್ನೂ ಏಕೆ ಆಡಲಿಲ್ಲ ?’, ಎಂಬುದಕ್ಕೆ ಅವರು ಮತ್ತು ಅವರ ಹಿಂದೂದ್ವೇಷಿ ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು ! – ಸಂಪಾದಕರು

ರಾಹುಲ್ ಗಾಂಧಿ

ನವ ದೆಹಲಿ : ತ್ರಿಪುರಾದಲ್ಲಿ ನಮ್ಮ ಮುಸಲ್ಮಾನ ಬಾಂಧವರೊಂದಿಗೆ ಅಮಾನವೀಯ ನಡೆದುಕೊಳ್ಳಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ದ್ವೇಷ ಮತ್ತು ಹಿಂಸಾಚಾರ ಹರಡುವವರು ನಿಜವಾದ ಹಿಂದೂಗಳಲ್ಲ, ಢೋಂಗಿಯಾಗಿದ್ದಾರೆ. ಸರಕಾರ ಎಷ್ಟು ದಿನಗಳ ಕಾಲ ಕಿವುಡ ಮತ್ತು ಮೂಗನಂತೆ ನಟಿಸುತ್ತದೆ ?’, ಎಂದು ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ರಾಹುಲ ಗಾಂಧಿ ಇವರು ತ್ರಿಪುರಾ ರಾಜ್ಯದಲ್ಲಿ ನಡೆದ ಹಿಂಸಾಚಾರದ ಪ್ರಕರಣದಲ್ಲಿ ಭಾಜಪ ಸರಕಾರವನ್ನು ಟೀಕಿಸಿದ್ದಾರೆ. ತ್ರಿಪುರಾದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಯ ವಿರುದ್ಧ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಮುಸಲ್ಮಾನರ ಮೇಲೆ ಹಲ್ಲೆ ನಡೆಸಿದ ಘಟನೆಗಳ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ.