ಕಾಂಗ್ರೆಸ್‍ನಿಂದ ಕೇಂದ್ರದ ಭಾಜಪ ಸರಕಾರದ ಮೇಲೆ ಟೀಕೆ
ಇಂತಹ ನಿರ್ಧಾರವನ್ನು ಕೈಗೊಳ್ಳುವ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ ಭಾರತದ್ದಾಗಿದೆಯೋ ಅಥವಾ ಇಂಗ್ಲೆಂಡ್‍ನದ್ದೋ ?- ಸಂಪಾದಕರು
ಮುಂಬಯಿ : ‘ಸರದಾರ ಉಧಮ’ ಈ ಹಿಂದಿ ಚಲನಚಿತ್ರಕ್ಕೆ ‘ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ’ದ (ಭಾರತೀಯ ಚಲನಚಿತ್ರ ಒಕ್ಕೂಟ) ಪರೀಕ್ಷಕರು ಭಾರತದಿಂದ ‘ಆಸ್ಕರ್’ ಪ್ರಶಸ್ತಿಗೆ ಕಳುಹಿಸಲಾದ ನಾಮನಿರ್ದೇಶನದಿಂದ ಕೈಬಿಟ್ಟಿದೆ. ‘ಆಸ್ಕರ್’ ಇದು ಜಾಗತಿಕ ಮಟ್ಟದಲ್ಲಿ ಚಲನಚಿತ್ರ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ತಿಳಿಯಲಾಗುತ್ತದೆ. ಚಲನಚಿತ್ರದಲ್ಲಿ ಬ್ರಿಟಿಷರ ಬಗ್ಗೆ ದ್ವೇಷವನ್ನು ತೋರಿಸಲಾಗಿದೆ ಎಂಬ ಕಾರಣವನ್ನು ನೀಡಲಾಗಿದೆ. ‘ಸರ್ದಾರ್ ಉಧಮ್’ ಈ ಚಲನಚಿತ್ರ ಓಟಿಟಿ (`ಓವರ್ ದಿ ಟಾಪ್’) ನಲ್ಲಿ ಪ್ರದರ್ಶಿಸಲಾಗಿದೆ. ಈ ಚಲನಚಿತ್ರವು ಕ್ರಾಂತಿಕಾರಿ ಸರ್ದಾರ್ ಉಧಮ್ ಸಿಂಗ್ ಅವರ ಜೀವನವನ್ನು ಆಧರಿಸಿದೆ.
FFI jury member reacts to Sardar Udham-Oscars row: ‘This isn’t National Awards’ https://t.co/liOgQkK2n4
— Hindustan Times (@HindustanTimes) October 28, 2021
ಈ ಬಗ್ಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರರಾದ ಅತುಲ ಲೊಂಢೆ ಇವರು ಭಾಜಪ ಸರಕಾರವನ್ನು ಟೀಕಿಸಿದ್ದಾರೆ. ಲೋಂಢೆ ತಮ್ಮ ಮಾತನ್ನು ಮುಂದುವರಿಸುತ್ತಾ,
1. ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾದ ಪರೀಕ್ಷಕರ ಈ ಕೃತಿ 130 ಕೋಟಿ ಭಾರತೀಯರಿಗೆ ಮಾಡಿದ ಅವಮಾನವಾಗಿದೆ. ಈ ಪರೀಕ್ಷಕರು ಬ್ರಿಟಿಷರ ಬಗ್ಗೆ ಸಹಾನುಭೂತಿ ತೋರಿಸಿ ಉಧಮ್ ಸಿಂಗ್ ಅವರ ದೇಶಪ್ರೇಮ ಮತ್ತು ಅವರ ಅತ್ಯುನ್ನತ ತ್ಯಾಗವನ್ನು ಅವಮಾನಿಸಿದ್ದಾರೆ.
2. ಪರೀಕ್ಷಕರು ಈ ಚಲನಚಿತ್ರ ನಿರ್ಮಾಣ ಮೌಲ್ಯ ಅಥವಾ ಗುಣಮಟ್ಟದಲ್ಲಿ ಯಾವುದೇ ಕೊರತೆಯಿಲ್ಲ, ಆದರೆ ಕೇವಲ ‘ಬ್ರಿಟಿಷರ ಬಗ್ಗೆ ದ್ವೇಷ’ ಎಂದು ನೀಡಿದ ಕಾರಣ ಹಾಸ್ಯಾಸ್ಪದವಾಗಿದೆ. ಅನ್ಯಾಯಕಾರಿ ಬ್ರಿಟಿಷ್ ಆಡಳಿತವು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಿಗೆ ಚಿತ್ರಹಿಂಸೆ ನೀಡಿದ್ದರು. ದೇಶಪ್ರೇಮದ ಬಗ್ಗೆ ಸತತವಾಗಿ ಮಾತನಾಡುವ ಭಾಜಪದ ಕೇಂದ್ರ ಸರಕಾರ ಈ ವಿಷಯದ ಬಗ್ಗೆ ಏಕೆ ಮೌನವಾಗಿದೆ ? ದೇಶಪ್ರೇಮದ ಹಾಡಿಹೊಗಳುವ ಭಾಜಪ ಈ ಬಗ್ಗೆ ಮೌನವಾಗಿರುವುದು ಮನಸ್ಸಿಗೆ ನೋವುಂಟು ಮಾಡುವ ಹಾಗೂ ಅಷ್ಟೇ ಆಶ್ಚರ್ಯಕರವೆನಿಸುತ್ತದೆ.
3. ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಸರ್ವೋಚ್ಚ ಬಲಿದಾನ ಮಾಡುವವರ ಪೈಕಿ ಸರ್ದಾರ್ ಉಧಮ್‍ಸಿಂಗ್ ಒಬ್ಬರಾಗಿದ್ದಾರೆ. ಈ ಚಲನಚಿತ್ರದಿಂದ ದೇಶಾಭಿಮಾನ ಜಾಗೃತವಾಗುತ್ತಿರುವಾಗಲೇ ಬ್ರಿಟಿಷರಿಗೆ ಅವಮಾನದ ಕಾರಣವನ್ನು ಮುಂದಿಟ್ಟಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಹೇಳಿದರು.