ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ವಿಶ್ವ ಹಿಂದೂ ಪರಿಷತ್ತಿನ ಆಂದೋಲನದಲ್ಲಿ ಹಿಂಸಾಚಾರ !

ತ್ರಿಪುರಾದಲ್ಲಿ ಗುಂಪುಗಳಿಂದ ಮಸೀದಿಗಳು, ಮನೆಗಳು ಮತ್ತು ಅಂಗಡಿಗಳ ಧ್ವಂಸ ಮತ್ತು ಬೆಂಕಿಗಾಹುತಿ

ಅಗರ್ತಲಾ (ತ್ರಿಪುರಾ) – ಉತ್ತರ ತ್ರಿಪುರಾ ಜಿಲ್ಲೆಯ ಚಮಟಿಲ್ಲಾ ಪ್ರದೇಶದ ರೋವಾ ಬಜಾರ್‍ನಲ್ಲಿ ವಿಶ್ವ ಹಿಂದೂ ಪರಿಷತ್ತಿನಿಂದ ಆಯೋಜಿಸಿದ್ದ ಆಂದೋಲನದಲ್ಲಿ ಜನಸಮೂಹದಿಂದ ಒಂದು ಮಸೀದಿ ಮತ್ತು ಮುಸಲ್ಮಾನರ ಮೂರು ಮನೆಗಳನ್ನು ಧ್ವಂಸಗೊಳಿಸಲಾಗಿದೆ ಮತ್ತು ಎರಡು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಭದ್ರತಾ ಪಡೆಗಳು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದಾಳಿಯ ವಿರುದ್ಧ ಈ ಆಂದೋಲನವನ್ನು ಮಾಡಲಾಗಿತ್ತು.

ಈ ಬಗ್ಗೆ ಭಾಜಪದ ವಕ್ತಾರ ನಬೆಂದೂ ಭಟ್ಟಾಚಾರ್ಯ ಇವರು ಮಾತನಾಡುತ್ತಾ, ‘ನನಗೆ ಈ ಬಗ್ಗೆ ಏನೂ ಗೊತ್ತಿಲ್ಲ ಒಂದು ವೇಳೆ ಇಂತಹ ಘಟನೆ ನಡೆದಿದ್ದರೆ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು.’ ಎಂದು ಹೇಳಿದರು. ಮತ್ತೊಂದೆಡೆ ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷವು ಘಟನೆಯನ್ನು ಖಂಡಿಸುತ್ತಾ ಸಂತ್ರಸ್ತರಿಗೆ ಸೂಕ್ತವಾದ ನಷ್ಟಪರಿಹಾರ ನೀಡುವಂತೆ ಒತ್ತಾಯಿಸಿದೆ. (ಕೇರಳದಲ್ಲಿ ಮತ್ತು ದೇಶದ ಇತರೆಡೆಗಳಲ್ಲಿ ಮತಾಂಧರಿಂದ ದಾಳಿಗಳು ನಡೆಯುತ್ತದೆಯೋ, ಆಗ ಸಿಪಿಐ (ಎಂ) ಈ ರೀತಿ ಒತ್ತಾಯಿಸುತ್ತದೆಯೇ ? ಅಥವಾ ‘ಮಾನವಾಧಿಕಾರದ ಹಕ್ಕುಗಳು ಕೇವಲ ಮತಾಂಧರಿಗೆ ಮಾತ್ರ ಇರುತ್ತವೆ ಮತ್ತು ಹಿಂದೂಗಳಿಗಿರುವುದಿಲ್ಲ’ ಎಂದು ಮಾಕಪಗೆ ಅನಿಸುತ್ತಿದೆಯೇ ? `ಬಾಂಗ್ಲಾದೇಶದಲ್ಲಿನ ಹಿಂದೂಗಳ ರಕ್ಷಣೆಗಾಗಿ ಸಿಪಿಐ (ಎಂ) ಒಂದೂ ಸಲವೂ ಆಂದೋಲನವನ್ನು ಏಕೆ ನಡೆಸಲಿಲ್ಲ ಹಾಗೂ ಮತಾಂಧರನ್ನು ಏಕೆ ಖಂಡಿಸಲಿಲ್ಲ ?’, ಇದಕ್ಕೆ ಅವರು ಉತ್ತರಿಸಬೇಕು ! – ಸಂಪಾದಕರು)