ಸುಮಾರು ಒಂದು ವರ್ಷದ ಹಿಂದೆ ಸುಶಾಂತಸಿಂಹ ಪ್ರಕರಣ ಚರ್ಚೆಯಲ್ಲಿರುವಾಗ, ‘ಬಾಲಿವುಡ್ ಮೇಲೆ ಏಕಿಷ್ಟು ಕೆಸರೆರಚುತ್ತಾರೆ ?’, ಎಂದು ಸಂಶಯವನ್ನು ವ್ಯಕ್ತಪಡಿಸಿ ಮಾಧ್ಯಮದವರು ಅದನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದರು. ಆ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಇರಲಿಲ್ಲ; ಆದರೆ ಇತರ ಖ್ಯಾತನಾಮರು ಮತ್ತು ನಟಿಯರು ಚರ್ಚೆಯಲ್ಲಿದ್ದರು. ಈಗ ಸ್ವತಃ ಶಾರುಖ್‍ನ ಮಗನನ್ನೇ ಮಾದಕ ದ್ರವ್ಯಗಳ ಪ್ರಕರಣದಲ್ಲಿ ಬಂಧಿಸಲಾಗಿದೆ. ಇದರಿಂದ ಇಂತಹ ವ್ಯಕ್ತಿಗಳನ್ನು ಎಲ್ಲಿಯವರೆಗೆ ಆದರ್ಶವೆಂದು ಪರಿಗಣಿಸಬೇಕು ಎಂದು ನಿರ್ಧರಿಸುವ ಸಮಯ ಬಂದಿದೆ.
೧. ತನ್ನ ಮಗನ ಮೇಲೆ ಕುಸಂಸ್ಕಾರವನ್ನು ಮಾಡಿರುವ ಶಾರುಖ್ ಜಾಹೀರಾತುಗಳ ಮಾಧ್ಯಮದಿಂದ ಸಂಸ್ಕಾರ ಮಾಡುವ ವಿಷಯದಲ್ಲಿ ಉಪದೇಶಿಸುವುದು
‘ಬೈಜುಸ್’ (BYJU’S) ಇದೊಂದು ಶೈಕ್ಷಣಿಕ ‘ಆಪ್’ ಆಗಿದೆ. ದೂರದರ್ಶನದಲ್ಲಿ ನಿರಂತರವಾಗಿ ಇದರ ಜಾಹೀರಾತು ಬರುತ್ತಿರುತ್ತದೆ. ಇದರಲ್ಲಿ ಶಾರುಖ್ ಖಾನನು ಪೋಷಕರಿಗೆ ಮಾರ್ಗದರ್ಶನ ಮಾಡುತ್ತಿರುವುದನ್ನು ತೋರಿಸಲಾಗಿದೆ. ಈ ಜಾಹೀರಾತಿನ ನಿರ್ಮಾಪಕರು ಅಥವಾ ಶಿಕ್ಷಣದ ವ್ಯವಹಾರ ಮಾಡುತ್ತಿರುವವರು ‘ಜಾಹೀರಾತಿನಲ್ಲಿ ನಾವು ಯಾರನ್ನು ಆದರ್ಶ (ಮಾಡೆಲ್) ಎಂದು ತೋರಿಸುತ್ತಿದ್ದೇವೆ’ ಎನ್ನುವ ವಿಚಾರವನ್ನು ಮಾಡಿದ್ದಾರೆಯೇ ? ಅಮಿತಾಭ ಬಚ್ಚನ ಅಥವಾ ಶಾರುಖ್ ಖಾನ್ ಇವರನ್ನು ಯಾವುದಾದರೂ ಸಾಬೂನು ಅಥವಾ ಇನ್ನಿತರ ವಸ್ತುಗಳ ಜಾಹೀರಾತಿನಲ್ಲಿ ‘ಮಾಡೆಲ್’ ಎಂದು ತೋರಿಸಿದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು; ಆದರೆ ಪೋಷಕರಿಗೆ ಸಂಸ್ಕಾರ ಮಾಡುವ ಜಾಹೀರಾತಿನಲ್ಲಿ ಯಾವಾಗ ನಾವು ಶಾರುಖ್ ಖಾನ್‍ನನ್ನು ಒಬ್ಬ ಆದರ್ಶ ವ್ಯಕ್ತಿಯೆಂದು ಎದುರಿಗೆ ಇಡುತ್ತೇವೆಯೋ, ಆಗ ಅದರ ವಿಚಾರ ಮಾಡಬೇಕಾಗುತ್ತದೆ. ಈ ಜಾಹೀರಾತಿನಲ್ಲಿ ಶಾರುಖ್ ಹೇಳುತ್ತಾರೆ, `ಪೋಷಕರು, ಅವರ ಮಕ್ಕಳಿಗೆ ಅತೀ ಸುಲಭದ, ಹತ್ತಿರದ ಮತ್ತು ಮೊದಲ ಶಿಕ್ಷಕರಾಗಿದ್ದಾರೆ’, ಇದು ಸರಿ ಇದೆ; ಆದರೆ ಶಾರುಖ್ ಖಾನ್‍ನ ಮಗನನ್ನು ಅಂದರೆ ಆರ್ಯನ್ ಖಾನ್‍ನನ್ನು ಒಂದು ‘ಕ್ರೂಝ್’ ಹಡಗಿನಲ್ಲಿ ಮಾದಕ ದ್ರವ್ಯಗಳನ್ನು ಹೊಂದಿರುವ ಕಾರಣದಿಂದ ಬಂಧಿಸಲಾಯಿತು. ತದನಂತರ ನಟಿ ಸಿಮಿ ಗರೆವಾಲ ಇವರು ಶಾರುಖ್ ಖಾನ್‍ನೊಂದಿಗೆ ನಡೆಸಿದ ಒಂದು ಹಳೆಯ ಸಂದರ್ಶನದ ಧ್ವನಿ ಚಿತ್ರಸುರುಳಿ ಚರ್ಚೆಗೆ ಬಂದಿತು. ಅದರಲ್ಲಿ ಶಾರುಖ್ ಖಾನ್ ಹೇಳುತ್ತಾರೆ, ‘ನನಗೇನು ಮಾಡಲು ಆಗಲಿಲ್ಲವೋ, ಅದನ್ನು ಅವನು ಮಾಡಬೇಕು, ಅವನು ಮಾದಕ ದ್ರವ್ಯಗಳನ್ನು ಸೇವಿಸಬೇಕು, ಯುವತಿಯರೊಂದಿಗೆ ‘ಡೇಟಿಂಗ್’ ಮಾಡಬೇಕು, ಸೆಕ್ಸ್ ಮಾಡಬೇಕು ಇತ್ಯಾದಿ.’
‘ಬೈಜುಸ್’ ಜಾಹೀರಾತಿನಲ್ಲಿ ‘ಪೋಷಕರು ಮಕ್ಕಳ ಮೊದಲ ಗುರುವಾಗಿದ್ದಾರೆ’, ಎಂದು ಹೇಳುವ ಶಾರುಖ್ ಖಾನ್ ತನ್ನ ಮಗನಿಗೆ ೨೦ ವರ್ಷಗಳ ಹಿಂದೆ ಯಾವ ಸಂಸ್ಕಾರ ನೀಡಿದ್ದಾನೆ ? ಎಂಬುದನ್ನು ಜಾಹೀರಾತು ನಿರ್ಮಾಪಕರು ಅಥವಾ ಅದನ್ನು ಕೋಟಿಗಟ್ಟಲೆ ಜನರಿಗೆ ತೋರಿಸುವವರು ವಿಚಾರ ಮಾಡಿದ್ದಾರೆಯೇ ? ಶಾರುಖ್ ಖಾನ್‍ನ ಮಗನನ್ನು ಬಂಧಿಸಿದ್ದರಿಂದ ಅದರತ್ತ ಗಮನ ಹೋಯಿತು. ಆದರೆ ಇತರ ಖ್ಯಾತನಾಮರ ಮಕ್ಕಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಬಹುತೇಕ ಖ್ಯಾತನಾಮರ ಮಕ್ಕಳು ಇದೇ ರೀತಿ ದಾರಿತಪ್ಪಿದವರಾಗಿದ್ದಾರೆ. ಹುಟ್ಟಿನಿಂದಲೇ ಇರುವ ಶ್ರೀಮಂತಿಕೆಯ ನಶೆಯು ಇವೆಲ್ಲ ವ್ಯಸನಗಳ ಕಡೆಗೆ ಎಳೆದೊಯ್ಯುತ್ತದೆ. ಹಾಗೆಯೇ ಮಕ್ಕಳನ್ನು ಅನಾವಶ್ಯಕ ಅತಿಯಾದ ಮುದ್ದು ಮಾಡುವುದರಿಂದಲೂ ದುಷ್ಪರಿಣಾಮವಾಗಿರುತ್ತದೆ.
೨. ಶಾರುಖ್ ಖಾನ್‍ಗೆ ಜನರಿಂದ ದೊರಕುವ ಹಣವೇ ಆರ್ಯನ್ ಖಾನ್‍ನ ವ್ಯಸನಕ್ಕೆ ಖರ್ಚಾಗುವುದು
ಯಾವ ಕ್ರೂಝ್ ಹಡಗಿನ ಮೇಲೆ ಈ ಔತಣ ಏರ್ಪಡಿಸಲಾಗಿತ್ತೋ, ಅದರಲ್ಲಿ ಪ್ರವೇಶಿಸಲು ೫ ಲಕ್ಷ ರೂಪಾಯಿ ಮೌಲ್ಯವನ್ನು ನಿಗದಿಪಡಿಸಲಾಗಿತ್ತು. ತನ್ನ ತಂದೆ ಗಳಿಸುವ ಹಣ ಎಲ್ಲಿಂದ ಬರುತ್ತದೆ, ಎನ್ನುವ ಅರಿವು ಆ ಮಗನಿಗೆ (ಆರ್ಯನ್ ಖಾನ್‍ಗೆ) ಇದೆಯೇ ? ದೇಶದಲ್ಲಿ ಕೋಟಿಗಟ್ಟಲೆ ಜನರು ಶಾರುಖ್ ಖಾನ್‍ನ ಚಲನಚಿತ್ರ ವೀಕ್ಷಿಸುತ್ತಿದ್ದಾರೆ ಅಥವಾ ಜಾಹೀರಾತಿನಲ್ಲಿ ೪ ವಾಕ್ಯ ಹೇಳಲು ಕೋಟಿಗಟ್ಟಲೆ ಹಣ ಸಿಗುತ್ತಿರಬಹುದು. ಇದರಿಂದಲೇ ಅವನ ಮಗನ ವೆಚ್ಚಕ್ಕೆ ಹಣ ಸಿಗುತ್ತಿರುತ್ತದೆ. ನಾವು ‘ಬೈಜುಸ್’ ಆಪ್ ಜಾಹೀರಾತು ನೋಡಿ, ಆ ‘ಆಪ್’ಗೆ ಹೋಗಿ ‘ಆನ್‍ಲೈನ್’ ಶಿಕ್ಷಣಕ್ಕಾಗಿ ಹಣವನ್ನು ತುಂಬುತ್ತೇವೆ. ಅದರಲ್ಲಿ ಸ್ವಲ್ಪ ಹಣ ಆ ಆರ್ಯನ್ ಖಾನ್‍ನ ವ್ಯಸನಕ್ಕೆ ಹೋಗುತ್ತದೆ.
೩. ಮಾಧ್ಯಮದವರು ಶಾರುಖ್ ಖಾನ್‍ನ ದ್ವಿಮುಖ ವರ್ತನೆಯನ್ನು ತೋರಿಸಿ ‘ನಾವು ಅವನಿಗಿಂತ ಶುದ್ಧ ಮತ್ತು ಚಾರಿತ್ರ್ಯಸಂಪನ್ನರಾಗಿದ್ದೇವೆ’, ಎನ್ನುವುದನ್ನು ತೋರಿಸಬೇಕು !
ಮಾಧ್ಯಮದಲ್ಲಿ ಕುಳಿತವರು ಆವೇಶದಲ್ಲಿ ಶಾರುಖ್ ಖಾನ್‍ನ ಮೇಲ್ಕಂಡ ಹಳೆಯ ಸಂದರ್ಶನವನ್ನು ತೋರಿಸುತ್ತಿದ್ದಾರೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಒಂದು ವೇಳೆ ನೀವು ಶಾರುಖ್ ಖಾನ್‍ನ ಹಳೆಯ ಅಭಿಪ್ರಾಯವನ್ನು ಎತ್ತಿ ತೋರಿಸುತ್ತಿದ್ದರೆ, ಅದೇ ರೀತಿ ‘ಬೈಜುಸ್’ನ ಜಾಹೀರಾತಿನಿಂದ ಅವನ ದ್ವಿಮುಖ ವ್ಯಕ್ತಿತ್ವವನ್ನು ಸಹ ತೋರಿಸಬೇಕು. `ಬೈಜುಸ್’ನ ಜಾಹೀರಾತನ್ನು ಎಲ್ಲ ದೂರದರ್ಶನದಲ್ಲಿ ತೋರಿಸಲಾಗುತ್ತದೆ. ಅದರಿಂದ ಈ ಸುದ್ದಿವಾಹಿನಿಗಳ ಗಲ್ಲಾ ಪೆಟ್ಟಿಗೆ ತುಂಬುತ್ತದೆ. ಅವರು ಈ ಜಾಹೀರಾತನ್ನು ನಿರಾಕರಿಸಿ ತಾವು ಶಾರುಖ್ ಖಾನ್‍ಗಿಂತ ಎಷ್ಟು ಪರಿಶುದ್ಧರು ಮತ್ತು ಚಾರಿತ್ರ್ಯವಂತರಾಗಿದ್ದೇವೆ ಎಂದು ತೋರಿಸಬಲ್ಲರೇ ? ಒಂದೆಡೆ ಶಾರುಖ್ ಖಾನ್ ತನ್ನ ಮನಸ್ಸಿನ ಸತ್ಯವನ್ನು ಮಾತನಾಡುತ್ತಾನೆ, ಅದೆಂದರೆ ಅವನ ಮಗ ವ್ಯಸನಗಳನ್ನು ಮಾಡಬೇಕು ಮತ್ತು ಮತ್ತೊಂದೆಡೆ ಅವನು ಶಿಕ್ಷಣದ `ಆಪ್’ ಗಾಗಿ ಸುಳ್ಳು ವಾಕ್ಯಗಳನ್ನು ಹೇಳುತ್ತಾನೆ. ಸುಳ್ಳು ವಾಕ್ಯಗಳನ್ನು ಮಾತನಾಡಲು ಅವನು ಕೋಟಿಗಟ್ಟಲೆ ಹಣವನ್ನು ಪಡೆಯುತ್ತಾನೆ. ಅವನು ಜಾಹೀರಾತಿನಲ್ಲಿ ಏನು ಮಾತನಾಡಿದ್ದಾನೆಯೋ, ಅದೇ ರೀತಿ ಪೋಷಕನಾಗಿ ತನ್ನ ಮಕ್ಕಳಿಗೆ ಏನು ಕಲಿಸಿದ್ದಾನೆ ? ಎನ್ನುವುದನ್ನೂ ಮಾಧ್ಯಮದವರು ತೋರಿಸಬೇಕು.
೪. ಒಮ್ಮುಖ ಪ್ರೇಮದಿಂದ ಯುವತಿಯರನ್ನು ಕೊಲ್ಲುವ ಪಾಠವನ್ನು ನಮ್ಮ ಸಮಾಜಕ್ಕೆ ಶಾರುಖ್ ಖಾನ್ ನೀಡುವುದು
ಶಾರುಖ್ ಖಾನ್‍ನು `ಬಾಜೀಗರ’, ‘ಡರ್’, ‘ಅಂಜಾಮ್’ ಈ ಮೂರೂ ಹಿಂದಿ ಚಲನಚಿತ್ರಗಳಿಂದ ಜನರ ದೃಷ್ಟಿಗೆ ಬಿದ್ದನು. ಆ ಕಾಲದಲ್ಲಿ ೨೦ ರಿಂದ ೨೫ ವರ್ಷ ವಯಸ್ಸಿನ ಯುವಕರೇ ಅವನನ್ನು ಮಹಾನಾಯಕನನ್ನಾಗಿ ಮಾಡಿದರು. ಈ ಚಲನಚಿತ್ರಗಳಲ್ಲಿ ಅವನು ಒಮ್ಮುಖದ ಪ್ರೇಮದಿಂದ ನಾಯಕಿಯರನ್ನು ಪೀಡಿಸಿ ಅವರಿಗೆ ಚಿತ್ರಹಿಂಸೆ ನೀಡುತ್ತಾನೆ ಮತ್ತು ಅವರನ್ನು ಕೊಲ್ಲುತ್ತಾನೆ. ಈ ಚಲನಚಿತ್ರಗಳಿಂದ ‘ಯಾವ ಯುವತಿ ತನಗೆ ಒಲಿಯುವುದಿಲ್ಲವೋ ಅವಳನ್ನು ಕೊಲ್ಲುವುದು, ಅವಳಿಗೆ ಟಾರ್ಚರ್ ನೀಡುವುದು ಮತ್ತು ಅವಳ ಮೇಲೆ ಹಲ್ಲೆ ಮಾಡುವುದು’, ಈ ಪಾಠವನ್ನು ಶಾರುಖ್ ಸಮಾಜಕ್ಕೆ ನೀಡಿದ್ದಾನೆ. ವರ್ಷ ೧೯೯೦ ರಲ್ಲಿ ಮಹಾರಾಷ್ಟ್ರದ ಉಲ್ಲಾಸನಗರದ ಹರೀಶ ಪಟೇಲನು ಒಮ್ಮುಖ ಪ್ರೇಮದ ಕಾರಣದಿಂದ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಿ ರಿಂಕೂ ಪಾಟೀಲಳನ್ನು ಸುಟ್ಟು ಕೊಂದು ಹಾಕಿದನು. ಅದರ ವೈಭವೀಕರಣವು ಶಾರುಖ್‍ನ ಈ ಮೂರೂ ಚಲನಚಿತ್ರಗಳ ಪಾತ್ರದಿಂದಲೇ ಆಗಿತ್ತು. ಒಮ್ಮುಖದ ಪ್ರೇಮದ ಕಾರಣದಿಂದ ಯುವತಿಯರ ಮುಖದ ಮೇಲೆ ಆಮ್ಲವನ್ನು ಎಸೆದಾಗ ಆತ ಅಪರಾಧಿಯಾಗಿರುವುದಿಲ್ಲ, ನಾವು ಅಪರಾಧಿಯಾಗಿರುತ್ತೇವೆ; ಏಕೆಂದರೆ ನಾವು (ಸಮಾಜವು) ಶಾರುಖ್‍ನನ್ನು ಖ್ಯಾತ ನಟನಾಗಿ ಮಾಡುತ್ತಿರುವಾಗಲೇ ‘ಒಮ್ಮುಖದ ಪ್ರೇಮದಿಂದ ಯುವತಿಯರನ್ನು ಪೀಡಿಸುವುದನ್ನೂ ವೈಭವೀಕರಣ’ ಮಾಡಿದ್ದೇವೆ. ಮೇಲಿನ ಮೂರು ಚಲನಚಿತ್ರಗಳು ಬಂದ ಬಳಿಕ ಸಮಾಜದಲ್ಲಿ ಯುವತಿಯರ ಮೇಲೆ ಒಮ್ಮುಖದ ಪ್ರೇಮದಿಂದಾಗುವ ಆಕ್ರಮಣದಲ್ಲಿ ಹೆಚ್ಚಳವಾಗಿದೆ. ಹೀಗಿರುವಾಗಲೂ ನಾವು (ಸಮಾಜ) ಶಾರುಖ್ ಖಾನ್‍ನನ್ನು ಮಹಾನಾಯಕನನ್ನಾಗಿ ಮಾಡಿದೆವು.
೫. ಸಮಾಜ ನೈತಿಕತೆಯ ಕನ್ನಡಿಯಲ್ಲಿ ಮುಖ ನೋಡಬೇಕು
ಅಪರಾಧದ ಬೀಜವನ್ನು ಬಿತ್ತುವ ಶಾರುಖ್‍ನ ಪಾತ್ರಗಳ ವೈಭವೀಕರಣವನ್ನು ನಾವೇ ಮಾಡಿದ್ದೇವೆ. ಇದರಿಂದ ನಾವೂ ಅಷ್ಟೇ ಅಪರಾಧಿಗಳಾಗಿದ್ದೇವೆ. ಇದರಿಂದ ಅವನು ಮತ್ತುಅವನ ಮಗನಿಗೆ ಬೆರಳು ತೋರಿಸುವ ನೈತಿಕ ಅಧಿಕಾರ ನಮಗೆ, ಸುದ್ದಿವಾಹಿನಿಗಳಿಗೆ, ಪತ್ರಕರ್ತರಿಗೆ ಮತ್ತು ಮಾಧ್ಯಮಗಳಿಗೆ ಇದೆಯೇ ? ಪ್ರತಿಯೊಬ್ಬರ ಮನಸ್ಸಿನಲ್ಲಿ ಒಬ್ಬ ಖಳನಾಯಕ ಅಡಗಿರುತ್ತಾನೆ. ಕಾನೂನು ಮತ್ತು ಸಮಾಜ ಏನು ಹೇಳುತ್ತದೆ ? ಎನ್ನುವ ಭಯದಿಂದ ಆ ಮೃಗ ಹೊಂಚು ಹಾಕಿಕುಳಿತಿರುತ್ತದೆ. ಯಾವಾಗ ಅದಕ್ಕೆ ಇಂತಹ ವೈಭವೀಕರಣ ಸಿಗುತ್ತದೆಯೋ, ಆಗ ಆ ಮೃಗ ಹೊರಗೆ ಬಂದು ಯುವತಿಯರ ಮೇಲೆ ಆಕ್ರಮಣ ನಡೆಸುತ್ತದೆ. ವ್ಯಾವಹಾರಿಕ ಜೀವನದಲ್ಲಿ ಎಷ್ಟೋ ಸಾವಿರಾರು ಯುವತಿಯರ ಜೀವನವೇ ಬಾಜಿಗರ, ಡರ್ ಮತ್ತು ಅಂಜಾಮ್ ಈ ಚಲನಚಿತ್ರಗಳ ಕಾರಣದಿಂದ ಮೂರಾಬಟ್ಟೆಯಾಗಿದೆ. ಶಾರುಖ್ ಖಾನ್‍ನ ಕೈಯಲ್ಲಿ ಇಷ್ಟೆಲ್ಲ ಹಣ ಬರಲು ಜಾಹೀರಾತುದಾರರು ಮತ್ತು ಚಲನಚಿತ್ರ ನಿರ್ಮಾಪಕರು ಜವಾಬ್ದಾರರಲ್ಲ, ಅದಕ್ಕೆ ನಾವು ಜವಾಬ್ದಾರರಾಗಿದ್ದೇವೆ. ಇಂತಹ ಚಲನಚಿತ್ರಗಳು ಪ್ರದರ್ಶನಗೊಳ್ಳದೇ ಇದ್ದಿದ್ದರೆ, ಇಷ್ಟು ಹಣ ಅವನಿಗೆ ಸಿಗುತ್ತಿರಲಿಲ್ಲ; ಆದ್ದರಿಂದ ನಾವು ನಮ್ಮ ನೈಜ ಸ್ವರೂಪವನ್ನು ಕನ್ನಡಿಯಲ್ಲಿ ನೋಡಬೇಕು. ಕನ್ನಡಿಯಲ್ಲಿ ನಮ್ಮ ಮುಖ ಕಾಣಿಸುತ್ತದೆ; ಆದರೆ ನಮ್ಮ ಅಂತರ್ಮನಸ್ಸು ಅದರಲ್ಲಿ ಕಾಣಿಸು ವುದಿಲ್ಲ. ಅದನ್ನು ನಾವು ನೈತಿಕತೆಯ ಕನ್ನಡಿಯಲ್ಲಿ ನೋಡಬೇಕಾಗುತ್ತದೆ. ನಾವು ನೀಡಿದ ಹಣ ಶಾರುಖ್‍ನ ಮಾಧ್ಯಮದಿಂದ ಅವನ ಮಗ ಆರ್ಯನ ವರೆಗೆ ತಲುಪಿದೆ. ನಾವು ಇಂತಹ ವಿಷಯಗಳಿಗೆ ಪ್ರೋತ್ಸಾಹ ನೀಡುವುದಿಲ್ಲ, ಎಂದು ಕಡಿಮೆ ಪಕ್ಷ ಇಷ್ಟಾದರೂ ನಾವು ಪ್ರಾಮಾಣಿಕರಾಗಿ ಮತ್ತು ಜಾಗೃತರಾಗಬಲ್ಲವೇ ?
– ಶ್ರೀ. ಭಾವೂ ತೊರಸೆಕರ, ಹಿರಿಯ ಪತ್ರಕರ್ತರು.