ಸೈನ್ಯ ಬಂಡಾಯವೆದ್ದಿರುವುದರಿಂದ ಪ್ರಧಾನಿ ಹಾಮಡೋಕ ಸಹಿತ ಅನೇಕ ರಾಜಕೀಯ ನಾಯಕರ ಬಂಧನ !
ಖಾರ್ಟೂಮ (ಸುಡಾನ) – ಸೂಡಾನ್‍ನ ಪ್ರಧಾನಿ ಅಬದುಲ್ಲಾಹ ಹಾಮಾಡೋಕ ಇವರನ್ನು ಅಕ್ಟೋಬರ್ 25 ರಂದು ಸೈನ್ಯದ ಅಧಿಕಾರಿಗಳು ಬಂಧಿಸಿರುವ ವಾರ್ತೆ ಪ್ರಸಾರವಾಗಿದೆ. ಪ್ರಧಾನಿ ಸಹಿತ ಇತರ ರಾಜಕೀಯ ನಾಯಕರನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಅದರ ಜೊತೆಗೆ ಸೈನ್ಯದಿಂದ ಅಕ್ರಮವಾಗಿ ಸೂಡಾನ್‍ನ ಅಧಿಕಾರ ಬದಲಾವಣೆಯಾಗಿರುವ ಮಾಹಿತಿಯನ್ನು ಅಂತರರಾಷ್ಟ್ರೀಯ ಮಾಧ್ಯಮಗಳಿಂದ ಲಭಿಸಿದೆ. ಸೈನ್ಯಾಧಿಕಾರಿಗಳು ಏಕೆ ಬಂಡಾಯ ಎದ್ದಿದ್ದಾರೆ ? ಇದರ ಹಿಂದಿನ ಕಾರಣವೇನು ? ಈ ಕುರಿತ ಯಾವುದೇ ಮಾಹಿತಿ ಬೆಳಕಿಗೆ ಬಂದಿಲ್ಲ. ಈ ವಾರ್ತೆಯ ಬಗ್ಗೆ ಯಾವುದೇ ಸರಕಾರಿ ಅಥವಾ ಇತರ ಸಂಸ್ಥೆಗಳು ಸ್ಪಷ್ಟ ಮಾಹಿತಿ ಧೃಡಪಡಿಸಿಲ್ಲ.
Sudan’s military detains prime minister, Cabinet members in apparent couphttps://t.co/b7GZl7JIlj
— The Washington Post (@washingtonpost) October 25, 2021
‘ರಾಯಿಟರ್ಸ್’ ಈ ಅಂತರರಾಷ್ಟ್ರೀಯ ವೃತ್ತ ವಾಹಿನಿಗೆ ಸಿಕ್ಕಿರುವ ಮಾಹಿತಿಯನುಸಾರ ಸೈನ್ಯದಲ್ಲಿನ ಕೆಲವು ಅಧಿಕಾರಿಗಳು ಪ್ರಧಾನಿಯ ಸಲಹೆಗಾರರ ಮನೆಗೆ ಬಲವಂತವಾಗಿ ಪ್ರವೇಶಮಾಡಿ ಪ್ರಧಾನಿಯನ್ನು ವಶಕ್ಕೆ ಪಡೆದರು. ಸೈನ್ಯವು ಮಾಡಿರುವ ಈ ತಥಾಕಥಿತ ರಾಜಕೀಯ ಬೆಳವಣಿಗೆಯನ್ನು ಬೆಂಬಲಿಸಲು ಪ್ರಧಾನಿ ಹಾಮಡೋಕ ಇವರ ಮೇಲೆ ಒತ್ತಡ ಹೇರಲಾಗುತ್ತಿದೆ, ಎಂಬ ಸುದ್ದಿಯನ್ನೂ ಸಹ ಈ ವಾರ್ತಾವಾಹಿನಿಯು ಪ್ರಸಾರ ಮಾಡಿದೆ.