ಬಾಂಗ್ಲಾದೇಶದಲ್ಲಿ ಒಟ್ಟು 335 ದೇವಸ್ಥಾನಗಳ ಮೇಲೆ ದಾಳಿ, ಹಿಂದೂಗಳ 1 ಸಾವಿರದ 800 ಮನೆಗಳಿಗೆ ಬೆಂಕಿ ! – ‘ವರ್ಲ್ಡ್ ಹಿಂದೂ ಫೆಡರೆಶನ್’ನ ಬಾಂಗ್ಲಾದೇಶ ಶಾಖೆಯ ಮಾಹಿತಿ

ಭಾರತದಲ್ಲಿನ ಯಾವುದಾದರೊಂದು ಮಸೀದಿ ಅಥವಾ ಚರ್ಚ್ ಮೇಲೆ ಕಲ್ಲೆಸೆದಿರುವ ಗಾಳಿ ಸುದ್ದಿ ಹರಡಿದರೆ, ಸಂಪೂರ್ಣ ದೇಶ ಹೊತ್ತಿ ಉರಿಯುತ್ತಿತ್ತು ಮತ್ತು ಅಂತರರಾಷ್ಟ್ರೀಯ ಸಂಘಟನೆಗಳು ಭಾರತಕ್ಕೆ ಉಪದೇಶ ಮಾಡುತ್ತಿದ್ದವು! ಬಾಂಗ್ಲಾದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ದೇವಸ್ಥಾನಗಳ ಮೇಲೆ ಮತ್ತು ಹಿಂದೂಗಳ ಮೇಲೆ ದಾಳಿಯಾದರೂ ಹಿಂದೂಗಳು ಕುಂಭಕರ್ಣದಂತೆ ಮಲಗಿದ್ದಾರೆ ! ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ ! – ಸಂಪಾದಕರು

ಢಾಕಾ (ಬಾಂಗ್ಲಾದೇಶ) – ‘ವರ್ಲ್ಡ್ ಹಿಂದೂ ಫೆಡರೆಶನ್’ನ ಬಾಂಗ್ಲಾದೇಶದ ಶಾಖೆಯು ನೀಡಿದ ಮಾಹಿತಿಗನುಸಾರ 13 ರಿಂದ 17 ಅಕ್ಟೋಬರ್ ಈ 4 ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆದ ದಾಳಿಯಲ್ಲಿ 335 ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. ಅದೇ ರೀತಿ ಹಿಂದೂಗಳ 1 ಸಾವಿರದ 800 ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಹಿಂದೂಗಳ ಮೇಲಿನ ದಾಳಿ ಇನ್ನೂ ನಿಂತಿಲ್ಲ. ದೇಶದ ಕಾಮಿಲಾ, ಚಾಂದಪೂರ, ನೋವಾಖಾಲಿ, ಚಟಗಾವ, ಕಾಕ್ಸ್ ಬಾಜಾರ, ಫೆನಿ, ಚಪಾಯಿ, ನವಾಬಗಂಜ ಮತ್ತು ರಂಗಪುರದಲ್ಲಿ ಅತಿ ಹೆಚ್ಚು ದಾಳಿಗಳಾಗಿವೆ. ಇದರಲ್ಲಿ ಒಟ್ಟು 12 ಹಿಂದೂಗಳ ಹತ್ಯೆಯಾಗಿದೆ ಇದರಲ್ಲಿ 7 ಅರ್ಚಕರು ಸೇರಿದ್ದಾರೆ. ಅದೇ ರೀತಿ 23 ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಲಾಗುತ್ತಿದೆ.

ಈ ದಾಳಿಯಲ್ಲಿ ಹಾನಿಯಾಗಿರುವ ಹಿಂದೂಗಳಿಗೆ `ವರ್ಲ್ಡ್ ಹಿಂದೂ ಫೆಡರೆಶನ್’ ಸಹಾಯ ಮಾಡುತ್ತಿದೆ. ಯಾರಿಗಾದರೂ ಹಣಕಾಸಿನ ಸಹಾಯ ಮಾಡುವ ಇಚ್ಛೆಯಿದ್ದಲ್ಲಿ ಅವರು ಈ ಫೆಡರೆಶನ್‍ಗೆ ಆನ್‍ಲೈನ್ ಹಣವನ್ನು ಕಳುಹಿಸಬಹುದು, ಎಂದು ಸಹ ಫೆಡರೇಶನ್ ಮನವಿ ಮಾಡಿದೆ. ಈ ಬಗ್ಗೆ ಸಂಸ್ಥೆಯ ಜಾಲತಾಣದಲ್ಲಿ ಸಂಪರ್ಕಿಸಬಹುದು, ಎಂದು ಹೇಳಲಾಗಿದೆ. ಜಾಲತಾಣದ ವಿಳಾಸ : http://www.worldhindufederation.org/