-
ಮಾದಕ ದ್ರವ್ಯಗಳ ಕಳ್ಳ ಸಾಗಾಣಿಕೆ ಮತ್ತು ಶಸ್ತ್ರಾಸ್ತ್ರ ಪೂರೈಕೆ ತಡೆಯುವ ಪ್ರಯತ್ನ
-
ಪಂಜಾಬ್ ಮುಖ್ಯಮಂತ್ರಿಗಳಿಂದ ವಿರೋಧ
ದೇಶದ್ರೋಹೀ ಚಟುವಟಿಕೆಗಳನ್ನು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಗಟ್ಟಲು ಕೈಗೊಳ್ಳಲಾಗುತ್ತಿರುವ ನಿರ್ಧಾರವನ್ನು ವಿರೋಧಿಸುವ ಕಾಂಗ್ರೆಸ್ ಮುಖ್ಯಮಂತ್ರಿ ರಾಷ್ಟ್ರದ್ರೋಹಿಯೇ ಆಗಿದ್ದಾರೆ ! ಇಂತಹವರಿಂದಲೇ ಪಾಕಿಸ್ತಾನಕ್ಕೆ ಇಲ್ಲಿಯವರೆಗೆ ಅನುಕೂಲವಾಗಿದೆ. ಇಂತಹ ನಿರ್ಧಾರವನ್ನು ವಿರೋಧಿಸುವವರ ವಿರುದ್ಧ ಅಪರಾಧವನ್ನು ದಾಖಲಿಸಿ ಅವರನ್ನು ಸೆರೆಮನೆಗಟ್ಟುವ ಕಾನೂನು ಮಾಡುವ ಅವಶ್ಯಕತೆ ಇದೆ !
ಚಂಡಿಗಡ – ಕೇಂದ್ರೀಯ ಗೃಹ ಸಚಿವಾಲಯವು ಪಂಜಾಬ್, ಅಸ್ಸಾಂ ಮತ್ತು ಬಂಗಾಲ ರಾಜ್ಯಗಳಲ್ಲಿ ಗಡಿ ಭದ್ರತಾ ದಳದ ಕಾರ್ಯಕ್ಷೇತ್ರವನ್ನು ೧೫ ಕಿಲೋಮೀಟರನಿಂದ ೫೦ ಕಿಲೋಮೀಟರ್‌ವರೆಗೆ ವಿಸ್ತರಿಸಿದೆ. ಈ ೫೦ ಕಿಲೋಮೀಟರ್ ಕ್ಷೇತ್ರದಲ್ಲಿ ಗಡಿ ಭದ್ರತಾ ದಳವು ಯಾವುದೇ ಆದೇಶವಿಲ್ಲದೆ ಶೋಧಕಾರ್ಯ, ಬಂಧನ ಮತ್ತು ಜಪ್ತಿ ಕಾರ್ಯ ಮಾಡಬಹುದು. ಇದಕ್ಕೆ ಪಂಜಾಬದ ಮುಖ್ಯಮಂತ್ರಿ ಚರಣಜಿತ್ ಸಿಂಹ ಚನ್ನಿ ಇವರು ಟ್ವೀಟ್ ಮಾಡುತ್ತಾ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ‘ಇದು ಸಂಘ ರಾಜ್ಯದ ಮೇಲೆ ನೇರವಾದ ದಾಳಿಯಾಗಿದೆ. ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು’, ಎಂದು ಮುಖ್ಯಮಂತ್ರಿ ಚನ್ನಿಯವರು ಕೆಂದ್ರಿಯ ಗೃಹ ಸಚಿವ ಅಮಿತ ಶಾಹ ಅವರಲ್ಲಿ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ ಸಿಂಹ ಇವರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ‘ಕಾಶ್ಮೀರದಲ್ಲಿ ನಮ್ಮ ಸೈನಿಕರ ಹತ್ಯೆಯಾಗುತ್ತಿದೆ. ಪಾಕಿಸ್ತಾನ ಪುರಸ್ಕೃತ ಉಗ್ರರಿಂದ ಪಂಜಾಬ್‌ನಲ್ಲಿ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳು ಮತ್ತು ಮಾದಕ ದ್ರವ್ಯಗಳನ್ನು ಕಳುಹಿಸುತ್ತಿರುವುದು ನಾವು ನೋಡುತ್ತಿದ್ದೇವೆ. ಗಡಿ ಭದ್ರತಾ ದಳದ ಹೆಚ್ಚಿರುವ ಉಪಸ್ಥಿತಿ ಮತ್ತು ಶಕ್ತಿ ನಮ್ಮನ್ನು ಇನ್ನಷ್ಟು ಶಕ್ತಿಶಾಲಿಗೊಳಿಸಲಿದೆ. ಕೇಂದ್ರಿಯ ಸಶಸ್ತ್ರ ದಳವನ್ನು ರಾಜಕಾರಣಕ್ಕೆ ಎಳೆಯಬಾರದು’, ಎಂದು ಅಮರಿಂದರ ಸಿಂಗ್‌ರು ಹೇಳಿದ್ದಾರೆ.
तीन राज्यों में बढ़ा #BSF का अधिकार क्षेत्र, #PunjabCM ने किया विरोध https://t.co/QWcys1pClS
— Times Now Navbharat (@TNNavbharat) October 14, 2021