ಕ್ರೈಸ್ತ ಮಿಷನರಿಗಳು ಪಂಜಾಬ್‍ನ ಗಡಿಯಲ್ಲಿನ ದಲಿತ ಸಿಖ್ಕರನ್ನು ಬಲವಂತವಾಗಿ ಮತಾಂತರ ಮಾಡುತ್ತಿದ್ದಾರೆ! – ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ

ಮತಾಂತರ ವಿರುದ್ಧ ಮನೆಮನೆಗೆ ಹೋಗಿ ಪ್ರಚಾರ ಮಾಡುವರು

ಈಶಾನ್ಯ ಭಾರತವನ್ನು ಕ್ರೈಸ್ತಬಹುಸಂಖ್ಯಾತ ಮಾಡಿದನಂತರ ಈಗ ಪಶ್ಚಿಮ ಭಾರತವನ್ನು ಕ್ರೈಸ್ತ ಬಹುಸಂಖ್ಯಾತ ಮಾಡಲು ಕ್ರೈಸ್ತ ಮಿಷನರಿಗಳ ಈ ಪ್ರಯತ್ನವನ್ನು ತಡೆಯೊಡ್ಡಲು ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ಮತ್ತು ಕೇಂದ್ರದಲ್ಲಿನ ಭಾಜಪ ಸರಕಾರಗಳು ಪ್ರಯತ್ನ ಮಾಡಬೇಕು ! – ಸಂಪಾದಕರು 

(ಎಡದಲ್ಲಿ) ಜತ್ಥೆದಾರ ಜ್ಞಾನಿ ಹರಪ್ರಿತ ಸಿಂಹ

ಅಮೃತಸರ (ಪಂಜಾಬ) – ಕ್ರೈಸ್ತ ಮಿಷನರಿಗಳು ಕಳೆದ ಕೆಲವು ವರ್ಷಗಳಿಂದ ಪಂಜಾಬ್‍ನ ಗಡಿಭಾಗದಲ್ಲಿಯ ಸಿಖ್ಕರ ವಿಶೇಷವಾಗಿ ದಲಿತ ಸಿಖ್ಕರಿಗೆ ಆಮಿಷ ಒಡ್ಡಿ, ಬ್ರೈನ್‍ವಾಶ ಮಾಡಿ ಹಾಗೂ ಬಲವಂತವಾಗಿ ಅವರನ್ನು ಮತಾಂತರಿಸಲಾಗುತ್ತಿದೆ, ಈ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ‘ಅಕಾಲ ತಖ್ತ’ದ ಜತ್ಥೆದಾರ ಜ್ಞಾನಿ ಹರಪ್ರಿತ ಸಿಂಹ ಇವರು ಹೇಳಿದ್ದಾರೆ. (ಸಿಖ್ಕರ 5 ತಖ್ತೆಯ ಪೈಕಿ ಅಮೃತ್‍ಸರ ಇಲ್ಲಿಯ ‘ಅಕಾಲ ತಖ್ತ’ ಒಂದಾಗಿದೆ. ಸಿಖ್ಕರ ಪ್ರಮುಖ ವಕ್ತಾರರಾದ ‘ಜತ್ಥೆದಾರ’ ಎಂದು ಹೇಳಲಾಗುತ್ತದೆ.) ಜ್ಞಾನಿ ಹರಪ್ರೀತ್ ಸಿಂಹ ಇವರು ಒಬ್ಬ ದಲಿತ ಸಿಖ್ಕರಾಗಿದ್ದಾರೆ. ಸಿಖ್ಕರ ಹೆಚ್ಚುತ್ತಿರುವ ಮತಾಂತರದ ಹಿನ್ನಲೆಯಲ್ಲಿ ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿಯು ಈ ಅಭಿಯಾನವನ್ನು ನಡೆಸುವ ನಿರ್ಣಯ ತೆಗೆದುಕೊಂಡಿದೆ. ಇದರ ಅಡಿಯಲ್ಲಿ ಅಭಿಯಾನವನ್ನು ನಡೆಸಲು ಪ್ರಾರಂಭ ಮಾಡಿದ್ದಾರೆ ಮತ್ತು ಸಿಖ್ಕ ಧರ್ಮದ ಪ್ರಸಾರ ಮಾಡಲು ಮನೆಮನೆಗೆ ಧರ್ಮದ ಬಗ್ಗೆ ಮಾಹಿತಿ ನೀಡುವ ಸಾಹಿತ್ಯಗಳ ವಿತರಣೆ ಮಾಡಲಿದ್ದಾರೆ. ಇದಕ್ಕಾಗಿ 150 ಗುಂಪುಗಳನ್ನು ಸ್ಥಾಪನೆ ಮಾಡಿದೆ.