ವಿಶೇಷ ಆನ್‌ಲೈನ್ ಸಂವಾದ ‘ಭಾರತದಲ್ಲಿ ನಾರ್ಕೋಟಿಕ್ ಜಿಹಾದ್ ?’
ಭಾರತದಲ್ಲಿ ಎರಡು ವಿಧದ ಜಿಹಾದ್‌ಗಳಿವೆ, ಒಂದು ‘ಹಾರ್ಡ್ ಜಿಹಾದ್’ ಇದ್ದು ಅದರಲ್ಲಿ ಬಾಂಬ್ ಸ್ಫೋಟಗಳು ಮತ್ತು ಭಯೋತ್ಪಾದಕ ಕೃತ್ಯಗಳು ಸೇರಿವೆ. ಇನ್ನೊಂದು ‘ಸಾಫ್ಟ್ ಜಿಹಾದ್’ ಆಗಿದೆ. ಇದರಲ್ಲಿ ‘ಹಲಾಲ್ ಅರ್ಥವ್ಯವಸ್ಥೆ’, ‘ಲ್ಯಾಂಡ್ ಜಿಹಾದ್’, ‘ಲವ್ ಜಿಹಾದ್’ ಮತ್ತು ‘ನಾರ್ಕೋಟಿಕ್ ಜಿಹಾದ್’ (ಮಾದಕ ವಸ್ತುಗಳ ಜಿಹಾದ್) ಸೇರಿವೆ. ರಕ್ತವನ್ನು ಚೆಲ್ಲದೇ ಮತ್ತು ಬಂದೂಕಿನ ಗುಂಡು ವ್ಯರ್ಥ ಮಾಡದೆ ಭಾರತವನ್ನು ದುರ್ಬಲಗೊಳಿಸಲು ‘ನಾರ್ಕೋಟಿಕ್ ಜಿಹಾದ್’ಅನ್ನು ಬಳಸಲಾಗುತ್ತಿದೆ. ಭಾರತದಲ್ಲಿ ಯುವ ಪೀಳಿಗೆಯನ್ನು ದುರ್ಬಲಗೊಳಿಸುವ ಮೂಲಕ ಭಾರತವನ್ನು ನಾಶ ಮಾಡಲು ಪಾಕಿಸ್ತಾನ ಸಂಚು ರೂಪಿಸುತ್ತಿದೆ. ಪಾಕಿಸ್ತಾನದ ಮಾದಕ ವಸ್ತುಗಳ ಮಾರಾಟಗಾರ ಆಗಿರುವ ರಮಜಾನ್‌ನನ್ನು ಹಿಡಿದ ನಂತರ ಆತ ಸಾರ್ವಜನಿಕವಾಗಿ ತಪ್ಪೊಪ್ಪಿಕೊಂಡಿದ್ದಾನೆ, ಎಂದು ಕರ್ನಾಟಕದ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಶ್ರೀ. ಪ್ರಶಾಂತ ಸಂಬರಗಿ ಹೇಳಿದರು. ಅವರು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ‘ಭಾರತದಲ್ಲಿ ನಾರ್ಕೋಟಿಕ್ ಜಿಹಾದ್ ?’ ಎಂಬ ವಿಶೇಷ ಆನ್‌ಲೈನ್ ಸಂವಾದದಲ್ಲಿ ಮಾತನಾಡುತ್ತಿದ್ದರು.
ಶ್ರೀ. ಪ್ರಶಾಂತ ಸಂಬರಗಿ ಅವರು ಮಾತನಾಡುತ್ತಾ, ಈಗ ಪಂಜಾಬ್ ನಂತರ ಕೇರಳವನ್ನು ‘ನಾರ್ಕೋಟಿಕ್ ಜಿಹಾದ್’ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಕೇರಳದಲ್ಲಿ ಹಿಂದೆ ೫೦೦ ರಷ್ಟು ಇದ್ದ ಮಾದಕ ವಸ್ತುಗಳ ಅಪರಾಧದ ಪ್ರಮಾಣ ೨೦೧೬ ರ ನಂತರ ೩,೫೦೦ ಕ್ಕೆ ಏರಿದೆ. ಅದಕ್ಕಾಗಿಯೇ ಕೇರಳದ ಫಾದರ್ ಜೋಸೆಫ್ ಕಲ್ಲಾರನಗಟ್ಟ ಇವರು ಕ್ರೈಸ್ತ ಯುವತಿಯರನ್ನು ಮಾದಕ ವಸ್ತುಗಳ ಮೂಲಕ ಗುರಿಯಾಗಿಸುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದರು. ಕೇವಲ ಹಿಂದಿ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಕನ್ನಡ, ತಮಿಳು, ತೆಲುಗು, ಇತ್ಯಾದಿಗಳಲ್ಲಿ ಕೂಡ ಚಲನಚಿತ್ರ ಪಾರ್ಟಿಗಳು ಮಾದಕ ವಸ್ತುಗಳು ಇಲ್ಲದೆ ನಡೆಯುವುದಿಲ್ಲ, ಇದು ರಾಷ್ಟ್ರೀಯ ಸಮೀಕರಣವಾಗಿದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಓರ್ವ ಅಲ್ಪಸಂಖ್ಯಾತ ಸಮುದಾಯದ ಶಾಸಕರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಾಲಿವುಡ್‌ನ ನಟರು ಭಾಗವಹಿಸಿದ್ದರು. ಅದರ ಆಯೋಜನೆಯನ್ನು ನಟ ಸುಶಾಂತ ರಾಜಪೂತ್ ಪ್ರಕರಣದಲ್ಲಿ ಒಬ್ಬನಾದ ‘ಇಮ್ತಿಯಾಜ್ ಖತ್ರಿ’ ಮಾಡಿದ್ದನು. ಒಟ್ಟಾರೆ ಸ್ಯಾಂಡಲ್‌ವುಡ್‌ನ ಮಾದಕ ವಸ್ತುಗಳ ಜೊತೆಗಿನ ಸಂಬಂಧ ಬಹಿರಂಗವಾಗಿದೆ. ೨೦೧೯ ರಲ್ಲಿ ‘ಮಾದಕ ವಸ್ತು ಮುಕ್ತ ಭಾರತ’ ಈ ಅಭಿಯಾನಕ್ಕಾಗಿ ನಾವು ‘ಆರ್ಟ್ ಆಫ್ ಲಿವಿಂಗ್’ನ ಪರವಾಗಿ ಚಿತ್ರರಂಗದ ಜನರ ಬೇಡಿಕೆಯಿಂದ ಒಂದು ಸಣ್ಣ ಸಂದರ್ಶನವನ್ನು ನಡೆಸಲು ನಿರ್ಧರಿಸಿದಾಗ, ಅದನ್ನು ಶೇ. ೭೦ ರಷ್ಟು ಜನರು ತಿರಸ್ಕರಿಸಿದರು; ಏಕೆಂದರೆ ಚಿತ್ರರಂಗದ ಹೆಚ್ಚಿನವರು ಇದರಲ್ಲಿ ತೊಡಗಿಕೊಂಡಿದ್ದಾರೆ. ಆದ್ದರಿಂದಲೇ ಆರ್ಯನ್ ಖಾನ್‌ಗೆ ಬೆಂಬಲ ನೀಡುತ್ತಿದ್ದಾರೆ ಎಂದು ಹೇಳಿದರು.
ಈ ಸಮಯದಲ್ಲಿ ಒಡಿಶಾದ ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರೀಕ್ಷಕ ಶ್ರೀ. ಅರುಣ ಕುಮಾರ ಉಪಾಧ್ಯಾಯ ಇವರು ಮಾತನಾಡುತ್ತಾ, ಮಾದಕ ವಸ್ತುಗಳ ವ್ಯವಸಾಯವು ಭಯೋತ್ಪಾದನೆ ಮತ್ತು ಅಪರಾಧ ಚಟುವಟಿಕೆಗಳಿಗೆ ಒಂದು ಪ್ರಮುಖ ಆದಾಯದ ಮೂಲವಾಗಿದೆ; ಆದರೆ ಎಲ್ಲಿಯ ವರೆಗೆ ಇದರ ಬಗ್ಗೆ ಸರಿಯಾದ ತನಿಖೆ ಮತ್ತು ತ್ವರಿತ ವಿಚಾರಣೆ ಆಗಿ ಶಿಕ್ಷೆಯಾಗುವುದಿಲ್ಲವೋ, ಅಲ್ಲಿಯ ವರೆಗೆ ಇದನ್ನು ತಡೆಗಟ್ಟುವುದು ಕಷ್ಟವಾಗಿದೆ. ಮಾದಕ ವಸ್ತುಗಳ ಅಪರಾಧದ ಬಗ್ಗೆ ಪೊಲೀಸ್, ಕಸ್ಟಮ್ಸ್ ಇಲಾಖೆ, ಮಾದಕ ವಸ್ತು ನಿಗ್ರಹ ದಳಗಳು ಇವೆಲ್ಲವು ಹಣ ಗಳಿಸುವ ಸಾಧನವಾಗಿದೆ ಎಂದು ತಿಳಿಯುತ್ತಾರೆ. ಆದ್ದರಿಂದ ನಟ ಸುಶಾಂತ್‌ಸಿಂಗ ರಾಜಪೂತ್ ಇವರ ೧೫ ಸಹೋದ್ಯೋಗಿಗಳ ಆತ್ಮಹತ್ಯೆಯಾಗಿದೆಯೋ ಹತ್ಯೆಯಾಗಿದೆಯೋ’ ಎಂಬ ಬಗ್ಗೆ ತನಿಖೆ ಮಾಡದೇ ಮಾದಕ ವಸ್ತುಗಳ ದಿಕ್ಕಿನಲ್ಲಿ ತನಿಖೆ ನಡೆಸಲಾಯಿತು ಎಂದು ಹೇಳಿದರು.
ಹಿಂದೂ ಜನಜಾಗೃತಿ ಸಮಿತಿಯ ದೆಹಲಿ ರಾಜ್ಯ ವಕ್ತಾರ ಶ್ರೀ. ನರೇಂದ್ರ ಸುರ್ವೆ ಇವರು ಮಾತನಾಡುತ್ತಾ, ಕೇವಲ ಚಿತ್ರರಂಗ ಮಾತ್ರವಲ್ಲ, ಸನ್‌ಬರ್ನ್ ಫೆಸ್ಟಿವಲ್‌ನಲ್ಲಿ ಗೋವಾದ ನೇಹಾ ಬಹುಗುಣ ಎಂಬ ಯುವತಿ ಮತ್ತು ಇತರ ಮೂವರು ಯುವಕರು ಕೂಡ ಮಾದಕ ವಸ್ತುಗಳ ಅತಿಯಾದ ಸೇವನೆಯಿಂದ ಸಾವನ್ನಪ್ಪಿದ್ದರು. ಒಟ್ಟಾರೆಯಾಗಿ ಭಾರತೀಯ ಯುವಕರು ವಿನಾಶದತ್ತ ಸಾಗುತ್ತಿದ್ದಾರೆ. ಭಾರತೀಯ ಯುವಕರನ್ನು ಮಾದಕ ವಸ್ತುಗಳಿಂದ ರಕ್ಷಿಸಲು ಭಾರತದಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.