
ದಾವಣಗೆರೆ – ನಾನು ‘ಸನಾತನ ಪ್ರಭಾತ’ ಪತ್ರಿಕೆಯ ಚಂದಾದಾರನಾಗಿದ್ದೇನೆ. ಪತ್ರಿಕೆಯಲ್ಲಿ ಕೂಡ ತುಂಬಾ ಒಳ್ಳೆಯ ವಿಷಯಗಳು ಇರುತ್ತದೆ. ಈ ಜ್ಞಾನವು ಪ್ರತಿಯೊಬ್ಬರಿಗೂ ತಲುಪಬೇಕು. ನೀವು ಮಾಡುತ್ತಿರುವ ಕಾರ್ಯ ಅದ್ಭುತವಾಗಿದೆ. ನೀವು ಇದನ್ನು ಮುಂದುವರಿಸಿ, ಎಂದು ದಾವಣಗೆರೆಯ ದತ್ತ ಸೇವಾಶ್ರಮದ ಶ್ರೀಕೃಷ್ಣನಂದ ಗುರೂಜಿ ಇವರು ಸನಾತನದ ಸಾಧಕರಿಗೆ ಆಶೀರ್ವಾದವನ್ನು ನೀಡಿದರು. ಸನಾತನ ಸಂಸ್ಥೆಯ ವತಿಯಿಂದ ಗ್ರಂಥ ಪ್ರಸಾರದ ದೃಷ್ಟಿಯಿಂದ ನಡೆಯುತ್ತಿರುವ ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ದ ನಿಮಿತ್ತ ಸಾಧಕರು ಅವರನ್ನು ಭೇಟಿಯಾಗಿದ್ದರು. ಶ್ರೀಕೃಷ್ಣನಂದ ಗುರುಜಿ ಇವರನ್ನು ಸನಾತನದ ಗ್ರಂಥಗಳ ಮಾಹಿತಿ ನೀಡಿದ ನಂತರ ಅವರಿಗೆ ಗ್ರಂಥಗಳು ತುಂಬಾ ಇಷ್ಟವಾದವು. ಸನಾತನದ ಚೈತನ್ಯಮಯ ಗ್ರಂಥಗಳ ಲಾಭವು ಸಮಾಜದಲ್ಲಿನ ಹೆಚ್ಚೆಚ್ಚು ಜನರಿಗೆ ಸಿಗಬೇಕು, ಅದಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಭಾರತಾದ್ಯಂತ ‘ಜ್ಞಾನಶಕ್ತಿ ಪ್ರಸಾರ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ.
ಕ್ಷಣಚಿತ್ರಗಳು
1. ಗುರೂಜಿಯವರು ಸಾಧಕರಿಂದ ಶ್ರೀ ದತ್ತಗುರು, ಶ್ರೀ ಕಾಳಿ ದೇವಿ ಮತ್ತು ಆಂಜನೇಯ ಸ್ವಾಮಿ ಈ ದೇವತೆಗಳ ಮೂರ್ತಿಗಳಿಗೆ ಆರತಿ ಮಾಡಿಸಿಕೊಂಡರು. ತೀರ್ಥ ಪ್ರಸಾದ ಕೊಟ್ಟ ನಂತರ ‘ಸಾಧಕರ ಸಾಧನೆ ಮತ್ತು ‘ಜ್ಞಾನ ಶಕ್ತಿ ಪ್ರಸಾರ ಅಭಿಯಾನ’ ಸೇವೆಯು ಉತ್ತಮ ರೀತಿಯಲ್ಲಿ ನಡೆಯಲಿ’, ಎಂದು ಪ್ರಾರ್ಥನೆ ಮಾಡಿಸಿಕೊಂಡರು.
2. ಗುರುಗಳು ಅವರನ್ನು ಭೇಟಿಯಾಗಲು ಹೋಗಿದ್ದ ಸಾಧಕರನ್ನು ದತ್ತಗುರುಗಳ ಎದುರು ಸತ್ಕಾರ ಮಾಡಿದರು.
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC