ಮತಾಂಧರ ಕಲ್ಲತೂರಾಟದಲ್ಲಿ ಹಲವರಿಗೆ ಗಾಯ
|
ಮೂಕ ಪ್ರೇಕ್ಷಕರಾಗಿ ನಿಂತ ಪೋಲಿಸರು !ಮತಾಂಧರ ಗುಂಪು ಕೇಸರಿ ಧ್ವಜವನ್ನು ತೆಗೆದು ಹಾಕುತ್ತಿರುವಾಗ, ಹಾಗೂ ಆ ಪರಿಸರದಲ್ಲಿ ಕಲ್ಲುತೂರಾಟ ನಡೆಸುತ್ತಿರುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು, ಎಂದು ಜನರ ಆರೋಪಿಸಿದ್ದಾರೆ. (ಅಂತಹ ಪೊಲೀಸರು ಭಾರತದವರೇ ಅಥವಾ ಪಾಕನವರೇ ?- ಸಂಪಾದಕರು)’ |
ಕಬೀರಧಾಮ (ಛತ್ತೀಸಗಡ) : ಮತಾಂಧರು ಕವರ್ಧಾ ಎಂಬಲ್ಲಿರುವ ಕರ್ಮಾದೇವೀ ಚೌಕದಲ್ಲಿ ಹಿಂದೂಗಳ ಕೇಸರೀ ಧ್ವಜವನ್ನು ತೆಗೆದು ಹಾಕಿದರು. ಆದ್ದರಿಂದ ಆ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಆ ಸಮಯದಲ್ಲಿ ಮತಾಂಧರು ದೊಡ್ಡ ಪ್ರಮಾಣದಲ್ಲಿ ನಡೆಸಿದ ಕಲ್ಲುತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ನಗರದಲ್ಲಿ ಉದ್ವಿಗ್ನತೆ ಖಾಯಂ ಆಗಿರುವುದರಿಂದ ಶಾಸಕಾಂಗವು ನಗರದಲ್ಲಿರುವ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚುವಂತೆ ಹಾಗೂ ‘ಆನ್‌ಲಾಯಿನ್’ ಹಾಗೂ ‘ಆಫ್‌ಲಾಯಿನ್’ ಪರೀಕ್ಷೆಯನ್ನು ರದ್ದು ಪಡಿಸುವಂತೆ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಇನ್ನೂ ಕೂಡ ಯಾರನ್ನೂ ಬಂಧಿಸಿಲ್ಲ. ಎಚ್ಚರಿಕೆಯೆಂದು ಪರಿಸರದಲ್ಲಿ ಕಲಮು ೧೪೪ (೩ ಅಥವ ಹೆಚ್ಚು ಜನರು ಒಟ್ಟಾಗಿ ಬರಲು ನಿರ್ಬಂಧ) ಹೇರಲಾಗಿದ್ದು ದೊಡ್ಡ ಪ್ರಮಾಣದಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ.
A video from Chhattisgarh’s Kawardha district has surfaced online where allegedly a Muslim mob can be seen uprooting a saffron coloured flag and tearing it, leading to clashes and stone-peltinghttps://t.co/cSjHkVWZJW
— OpIndia.com (@OpIndia_com) October 5, 2021
ಪೊಲೀಸರು ಈ ಸಂದರ್ಭದಲ್ಲಿ ಮಾಹಿತಿ ನೀಡುವಾಗ ಅಕ್ಟೋಬರ್ ೩ರಂದು ಒಂದು ಶಾಂತಿ
ಸಭೆಯನ್ನು ಆಯೋಜಿಸಲಾಯಿತು. ಅದರಲ್ಲಿ ಮುಂದೆ ಧಾರ್ಮಿಕ ಹಬ್ಬಗಳಿರುವುದರಿಂದ ಶಾಂತಿ ಹಾಗೂ ಸದ್ಭಾವನೆಯನ್ನು ಕಾಪಾಡುವ ದೃಷ್ಟಿಯಿಂದ ಲೊಹಾರಾ ಚೌಕದಿಂದ ಧಾರ್ಮಿಕ ಧ್ವಜವನ್ನು ತೆಗೆದು ಹಾಕಲು ಹೇಳಲಗಿತ್ತು. ಅದಕ್ಕಾಗಿ ಸಭೆಯಲ್ಲಿ ಉಪಸ್ಥಿತರಾಗಿದ್ದ ಎರಡೂ ಮತದ ಜನರು ಸಮ್ಮತಿ ನೀಡಿದ್ದರು; ಆದರೆ ಘಟನಾಸ್ಥಳದಲ್ಲಿ ಕೆಲವು ಕಿಡಿಗೇಡಿಗಳು ತಲುಪಿ ಉಪದ್ರವ ಮಾಡಿದರು. ಸ್ಥಳೀಯ ಪತ್ರಕರ್ತರು ನೀಡಿರುವ ಮಾಹಿತಿಯಂತೆ ೫ ವರ್ಷಗಳ ಹಿಂದ ಆ ಸ್ಥಳದಲ್ಲಿದ್ದ ಭಾರತ ಮಾತೆಯ ಚಿತ್ರವನ್ನು ಧ್ವಂಸಗೊಳಿಸಲಾಗಿತ್ತು.