ಮಾಜಿ ವಿಧಾನಸಭಾ ಅಧ್ಯಕ್ಷ ಮತ್ತು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ ಕುಮಾರ ಹೇಳಿಕೆ !
* ಇಸ್ಲಾಮಿನ ಪ್ರಚಾರವು ಖಡ್ಗದ ಬಲದಲ್ಲಿ ಆಗಿದೆ ಮತ್ತು ಭಾರತದಲ್ಲಿ ಅವರನ್ನು ಮಹಾರಾಣಾ ಪ್ರತಾಪ, ಛತ್ರಪತಿ ಶಿವಾಜಿ ಮಹಾರಾಜರಂತಹ ಹಿಂದೂ ರಾಜರು ವಿರೋಧಿಸಿ ಸೋಲಿಸಿದರು. ಇದರಿಂದಾಗಿಯೇ ಭಾರತದಲ್ಲಿ ಇಂದು ಹಿಂದೂಗಳು ಉಳಿದಿದ್ದಾರೆ. ಇಲ್ಲದಿದ್ದರೆ ರಮೇಶ ಕುಮಾರರವರ ಪೂರ್ವಜರೂ ಹಿಂದೂಗಳಾಗಿ ಉಳಿಯುತ್ತಿರಲಿಲ್ಲ ! * ಭಾರತದಲ್ಲಿ ಇಸ್ಲಾಮ್ ಬರುವುದಕ್ಕಿಂತಲೂ ಮೊದಲು ಒಬ್ಬಾನೊಬ್ಬ ಮುಸಲ್ಮಾನನಿರಲಿಲ್ಲ. ಇಂದು ದೇಶದಲ್ಲಿ ೨೦ ಕೋಟಿಗಿಂತಲೂ ಹೆಚ್ಚು ಮುಸಲ್ಮಾನರಿದ್ದಾರೆ. ಇವರು ಯಾವುದರ ಬಲದಲ್ಲಿ ಮುಸಲ್ಮಾನರಾಗಿದ್ದಾರೆ ಎಂಬುದನ್ನು ರಮೇಶ ಕುಮಾರರವರು ಹೇಳಬೇಕು ! * ಕ್ರೈಸ್ತ ಧರ್ಮಪ್ರಚಾರಕರು ಭಾರತಕ್ಕೆ ಬರುವ ಮೊದಲು ಒಬ್ಬಾನೊಬ್ಬ ಕ್ರೈಸ್ತನಿರಲಿಲ್ಲ ಮತ್ತು ಈಗ ಈಶಾನ್ಯ ಭಾರತವು ಕ್ರೈಸ್ತರು ಬಹುಸಂಖ್ಯಾತರಿದ್ದಾರೆ, ಇದು ಹೇಗಾಯಿತು ? ಎಂಬುದನ್ನು ರಮೇಶ ಕುಮಾರರವರು ಹೇಳಬೇಕು! |
ಬೆಂಗಳೂರು – ‘ಭಾರತದಲ್ಲಿ ಇಸ್ಲಾಮ್ ಖಡ್ಗದ ಬಲದಲ್ಲಿ ಪಸರಿಸಿದ್ದರೆ ಇಂದು ದೇಶದಲ್ಲಿ ಒಬ್ಬ ಹಿಂದೂವೂ ಉಳಿಯುತ್ತಿರಲಿಲ್ಲ. ಏಕೆಂದರೆ ಮುಸಲ್ಮಾನರು ಭಾರತದಲ್ಲಿ ೮೦೦ ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ’ ಎಂದು ಕರ್ನಾಟಕ ವಿಧಾನಸಭೆಯ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಶಾಸಕ ಕೆ.ಆರ್ ರಮೇಶ ಕುಮಾರರವರು ಹೇಳಿದ್ದಾರೆ. ಅವರು ಮಾಜಿ ಮುಖ್ಯ ಚುನಾವಣಾ ಆಯುಕ್ತ ಡಾ. ಎಸ್.ವೈ. ಕುರೇಶಿಯವರ ’ದಿ ಪಾಪ್ಯುಲೇಶನ್ ಮಿಥ್’ (ಜನಸಂಖ್ಯೆ ಸಂದರ್ಭದಲ್ಲಿನ ದಂತಕಥೆ) ಎಂಬ ಪುಸ್ತಕದ ಪ್ರಕಾಶನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ‘ಕೋಮು ಶಕ್ತಿಗಳು ದೇಶದ ಸಂವಿಧಾನವನ್ನು ದುರ್ಬಲಗೊಳಿಸುತ್ತಿವೆ’ ಎಂದು ಅವರು ಈ ಸಮಯದಲ್ಲಿ ಆರೋಪಿಸಿದ್ದಾರೆ.
೧. ರಮೇಶ ಕುಮಾರರವರು ಮುಂದುವರಿದು ‘ಇಸ್ಲಾಮ್ ಖಡ್ಗದ ಬಲದಲ್ಲಿ ಪಸರಿಸಿದೆ ಎಂದು ಸುಳ್ಳು ಪ್ರಚಾರ ಮಾಡಲಾಗುತ್ತದೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರವಿಲ್ಲ. (ಇದಕ್ಕೆ ಐತಿಹಾಸಿಕ ಆಧಾರವಿಲ್ಲ ಎಂಬುದನ್ನು ರಮೇಶ ಕುಮಾರರವರು ಯಾವ ಆಧಾರದಿಂದ ಹೇಳುತ್ತಿದ್ದಾರೆ ಎಂಬುದನ್ನು ಮೊದಲಿಗೆ ಸ್ಪಷ್ಟಪಡಿಸಬೇಕು ! ಭಾರತದಲ್ಲಿ ಆ ಸಮಯದಲ್ಲಿ ಯಾವುದೇ ಹಿಂದೂ ಸ್ವೇಚ್ಛೆಯಿಂದ ಮುಸಲ್ಮಾನ ಧರ್ಮವನ್ನು ಸ್ವೀಕರಿಸಿದ ಇತಿಹಾಸ ಎಲ್ಲಿಯೂ ಇಲ್ಲ. ಇದನ್ನು ರಮೇಶ ಕುಮಾರರವರು ಒಪ್ಪುತ್ತಿಲ್ಲವೇ ಅಥವಾ ಕಾಂಗ್ರೆಸ್ಸಿನವರಿಗೆ ಮುಸಲ್ಮಾನರ ಮತಕ್ಕಾಗಿ ಇತಿಹಾಸವನ್ನು ಸುಳ್ಳು ಎಂದು ಸಾಬೀತುಪಡಿಸಬೇಕಿದೆಯೇ ? – ಸಂಪಾದಕರು) ಈ ಮುಸಲ್ಮಾನ ಆಡಳಿತಗಾರರ ಇತಿಹಾಸ ಮತ್ತು ಅವರು ದೇಶದಲ್ಲಿ ವಿಕಾಸಕ್ಕಾಗಿ ನೀಡಿದ ಕೊಡುಗೆಯನ್ನು ವಿಕೃತಗೊಳಿಸುವ ಪ್ರಯತ್ನವಾಗುತ್ತಿದೆ. (ಮುಸಲ್ಮಾನ ಆಡಳಿತಗಾರರು ದೇಶದಲ್ಲಿ ಏನು ವಿಕಾಸ ಮಾಡಿದ್ದಾರೆ ಎಂಬುದನ್ನು ರಮೇಶ ಕುಮಾರ ಇವರು ಪುರಾವೆ ಸಮೇತ ತೋರಿಸಬೇಕು ! – ಸಂಪಾದಕರು) ಮುಸಲ್ಮಾನರು ಈ ದೇಶಕ್ಕಾಗಿ ಏನೆಲ್ಲ ಯೋಗದಾನ ನೀಡಿದ್ದಾರೆ ಅದನ್ನು ಜನರ ತಲೆಯಿಂದ ತೆಗೆದು ಹಾಕಲು ಪ್ರಯತ್ನಿಸಲಾಗುತ್ತಿದೆ. (ಯಾವ ದೇಶಭಕ್ತ ಮುಸಲ್ಮಾನರು ಭಾರತಕ್ಕಾಗಿ ಕೊಡುಗೆ ನೀಡಿದ್ದಾರೆ, ಉದಾ. ಎ.ಪಿ.ಜೆ. ಅಬ್ದುಲ್ ಕಲಾಂರವರನ್ನು ಯಾರೂ ಮರೆಯುವುದಿಲ್ಲ. ಆದರೆ ಯಾರು ಏನನ್ನು ಮಾಡಿಲ್ಲ ಮತ್ತು ಯಾರ ಗುಣಗಾನವಾಗುತ್ತಿದೆ, ಅದರ ವಸ್ತುಸ್ಥಿತಿಯನ್ನು ದೇಶಕ್ಕೆ ಹೇಳಲೇಬೇಕಿದೆ ! – ಸಂಪಾದಕರು) ಐತಿಹಾಸಿಕ ಸಂಗತಿಗಳನ್ನು ತಪ್ಪು ರೀತಿಯಲ್ಲಿ ಮಂಡಿಸಲಾಗುತ್ತಿದೆ. ಇದರಿಂದಲೇ ‘ಮುಸಲ್ಮಾನರು ಬಲವಂತವಾಗಿ ಇಸ್ಲಾಮಿನ ಪ್ರಚಾರ ಮಾಡಿದ್ದಾರೆ’ ಎಂದು ಹೇಳಲಾಗುತ್ತದೆ’ ಎಂದರು. (ಉತ್ತರಪ್ರದೇಶದಲ್ಲಿ, ಹಾಗೆಯೇ ದೇಶದಲ್ಲಿನ ಇತರ ರಾಜ್ಯಗಳಲ್ಲಿಯೂ ಮತಾಂಧರಿಂದ ಸಾವಿರಾರು ಹಿಂದೂಗಳನ್ನು ಬಲವಂತವಾಗಿ ಮತಾಂತರವಾಗಿರುವುದು ಬಹಿರಂಗವಾಗುತ್ತಿರುವಾಗ ರಮೇಶ ಕುಮಾರರವರು ಮಾತ್ರ ಮೌನ ವಹಿಸುತ್ತಿದ್ದಾರೆ ಎಂಬುದನ್ನು ಗಮನದಲ್ಲಿಡಿ ! – ಸಂಪಾದಕರು)
೨. ಈ ಸಮಯದಲ್ಲಿ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಡಾ. ಎಚ್.ಸಿ. ಮಹದೇವಪ್ಪರವರು ರಮೇಶ ಕುಮಾರರವರ ಧಾಟಿಯಲ್ಲಿಯೇ ’ಮುಸಲ್ಮಾನ ಆಡಳಿತಗಾರರು ಬಲವಂತವಾಗಿ ಮತಾಂತರ ಮಾಡಿರುವ ಯಾವುದೇ ಐತಿಹಾಸಿಕ ಆಧಾರವಿಲ್ಲ’ ಎಂಬ ಹೇಳಿಕೆ ನೀಡಿದ್ದಾರೆ. ಅವರು ‘ಮುಸಲ್ಮಾನರು ದೇಶದ ಮೇಲೆ ೮೦೦ ವರ್ಷಗಳ ವರೆಗೆ ಮತ್ತು ಆಂಗ್ಲರು ೨೦೦ ವರ್ಷಗಳ ವರೆಗೆ ಆಡಳಿತ ನಡೆಸಿದ್ದಾರೆ; ಆದರೆ ಅವರು ಈ ಸಮಯದಲ್ಲಿ ಭಾರತವನ್ನು ‘ಇಸ್ಲಾಮಿ’ ಅಥವಾ ‘ಕ್ರೈಸ್ತ’ ದೇಶವೆಂದು ಘೋಷಿಸಲು ಪ್ರಯತ್ನಿಸಲಿಲ್ಲ. (ಹಿಂದೂಗಳ ಶಕ್ತಿಯಿಂದಾಗಿ ಅವರಿಗೆ ಹೀಗೆ ಮಾಡುವ ಧೈರ್ಯವಾಗಲಿಲ್ಲ, ಇಲ್ಲದಿದ್ದರೆ ಅವರು ಹೀಗೆ ಮಾಡುತ್ತಿದ್ದರು ! ಕಾಂಗ್ರೆಸ್ಸಿನ ಆಡಳಿತದಲ್ಲಿ ಮಾತ್ರ ಈಶಾನ್ಯ ಭಾರತದಲ್ಲಿನ ಅನೇಕ ರಾಜ್ಯಗಳಲ್ಲಿ ಇಂದು ಕ್ರೈಸ್ತರು ಬಹುಸಂಖ್ಯಾತರಿದ್ದಾರೆ ಮತ್ತು ಪ್ರತ್ಯೇಕ ರಾಷ್ಟ್ರದ ಬೇಡಿಕೆ ನೀಡುತ್ತಿದ್ದಾರೆ, ಈ ಬಗ್ಗೆ ಮಹದೇವಪ್ಪನವರು ಏಕೆ ಮಾತನಾಡುವುದಿಲ್ಲ ? – ಸಂಪಾದಕರು) ದೇಶದಲ್ಲಿ ಮತಾಂಧ ಶಕ್ತಿಗಳ ಅಧಿಕಾರ ಬಂದ ನಂತರ ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಇಂತಹ ಶಕ್ತಿಗಳನ್ನು ಪ್ರಭಾವಿಯಾಗಿ ಉತ್ತರಿಸಿ ಅವರ ಉದ್ದೇಶವನ್ನು ವಿಫಲಗೊಳಿಸಬೇಕಿದೆ’ಎಂದು ಹೇಳಿದರು.