* ಜಾರ್ಖಂಡ ರಾಜ್ಯವು ಭಾರತದಲ್ಲಿದೆಯೋ ಪಾಕಿಸ್ತಾನದಲ್ಲಿಯೋ ? ನಮಾಜು ಪಠಿಸಲು ರಜೆ ನೀಡುವ ಶಾಲೆಯ ವ್ಯವಸ್ಥಾಪನೆಯ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ! – ಸಂಪಾದಕರು * ಶಾಲೆಯಲ್ಲಿ ಭಗವದ್ಗೀತೆಯನ್ನು ಕಲಿಸುವುದು, ಸರಸ್ವತಿ ಪೂಜೆ ಮಾಡುವುದೆಂದರೆ ‘ಶಿಕ್ಷಣದ ಕೇಸರಿಕರಣ’ವಾಗಿದೆ ಎಂದು ಹೇಳುವ ನಿಧರ್ಮಿವಾದಿಗಳು ಮತ್ತು ಪ್ರಗತಿಪರರಿಗೆ ನಮಾಜು ಪಠಿಸಲು ಶಾಲೆಗೆ ರಜೆ ನೀಡಿದರೆ ಆಗಬಹುದೇ ? – ಸಂಪಾದಕರು * ಹಿಂದೂದ್ವೇಷಿ ಮತ್ತು ಅಲ್ಪಸಂಖ್ಯಾತರ ಓಲೈಕೆಯನ್ನು ಮಾಡುವ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರವಿರುವ ರಾಜ್ಯದಲ್ಲಿ ಇನ್ನೇನು ನಿರೀಕ್ಷಿಸಬಹುದು ? – ಸಂಪಾದಕರು |
ಜಾಮತಾಡಾ (ಜಾರ್ಖಂಡ) – ಜಿಲ್ಲೆಯಲ್ಲಿ ಅಕ್ಟೋಬರ್ 1 ರಂದು ಅಂದರೆ ಶುಕ್ರವಾರದಂದು ಯಾವುದೇ ಸರಕಾರಿ ಅನುಮತಿಯನ್ನು ಪಡೆಯದೆ ಬಿರಾಜಪುರ ಶಾಲೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ನಮಾಜು ಪಠಿಸಲು ರಜೆ ನೀಡಲಾಯಿತು. ಇದರಿಂದ ಅಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿಗಳಾದ ಅಭಯ ಶಂಕರ ಇವರು ಶಾಲೆಯ ವ್ಯವಸ್ಥಾಪನಾ ಸಮಿತಿಗೆ ನೋಟಿಸ್ ಕಳುಹಿಸಿದ್ದಾರೆ. ಇಲ್ಲಿಯವರೆಗೆ ಯಾರ ಮೇಲೆಯೂ ಕಾರ್ಯಾಚರಣೆಯನ್ನು ಮಾಡಲಾಗಿಲ್ಲ.
झारखंड के जामताड़ा में नमाज़ पढ़ने के लिए स्कूल बंद कराने के प्रकरण ने तूल पकड़ लिया है। भाजपा ने इस मामले में तीखी प्रतिक्रिया दी है।@STVRahul की रिपोर्ट https://t.co/sFSRrlnbqA
— ऑपइंडिया (@OpIndia_in) October 4, 2021
ಜಾಮತಾಡ ಜಿಲ್ಲೆಯಲ್ಲಿನ ನಾಲಾ ಚುನಾವಣಾ ಕ್ಷೇತ್ರದಿಂದ ಗೆದ್ದು ಬಂದಿರುವ ಆಡಳಿತಾರೂಢ ಜಾರ್ಖಂಡ ಮುಕ್ತಿ ಮೋರ್ಚಾದ ರವೀಂದ್ರನಾಥ ಮಹತೊ ಇವರು ಜಾರ್ಖಂಡ ವಿಧಾನಸಭೆಯ ಅಧ್ಯಕ್ಷರಾಗಿದ್ದಾರೆ. ಅವರ ಆದೇಶದಿಂದಲೇ ಜಾರ್ಖಂಡ ವಿಧಾನಸಭೆಯಲ್ಲಿ ನಮಾಜು ಪಠಿಸಲು ಪ್ರತ್ಯೇಕ ಕೋಣೆಯನ್ನು ನೀಡುವ ಬಗ್ಗೆ ಪ್ರಸ್ತಾಪಿಸಿಲಾಯಿತು. (ಇಂತಹವರಿಂದ ಕೂಡಿರುವ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ರಾಜ್ಯದ ಇಸ್ಲಾಮೀಕರಣವಾದರೆ ಅದರಲ್ಲಿ ಆಶ್ಚರ್ಯವೇನಿದೆ ? – ಸಂಪಾದಕರು) ಇದನ್ನು ಭಾಜಪದ ಶಾಸಕರು ತೀವ್ರವಾಗಿ ವಿರೋಧಿಸಿದರು. ಆದುದರಿಂದ ಈ ಪ್ರಸ್ತಾಪವು ಜಾರಿಗೆ ಬಂದಿಲ್ಲ.
ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿದ್ದಾರೆ. ವಿಶೇಷವೆಂದರೆ ಜಾಮತಾಡ ಜಿಲ್ಲೆಯಲ್ಲಿ ಸುಮಾರು 6 ಪ್ರಾರ್ಥಮಿಕ ಮತ್ತು ಮಾಧ್ಯಮಿಕ ಉರ್ದು ಶಾಲೆಗಳಿವೆ ಮತ್ತು ಈ ಶಾಲೆಗಳಿಗೆ ರವಿವಾರದ ಬದಲು ನಮಾಜು ಪಠಣ ಮಾಡುವ ದಿನವಾದ ಶುಕ್ರವಾರದಂದು ರಜೆ ನೀಡಲಾಗುತ್ತದೆ. ಈ ಬಗ್ಗೆ ಭಾಜಪದ ಜಾರ್ಖಂಡನ ಅಧ್ಯಕ್ಷರಾದ ದೀಪಕ ಪ್ರಕಾಶರವರು ಪ್ರತಿಕ್ರಿಯಿಸುತ್ತಾ ‘ಇಂತಹ ಘಟನೆಗಳು ಕೇವಲ 1-2 ಜಿಲ್ಲೆಗಳಿಗೆ ಸೀಮಿತವಾಗಿರದೇ ಇಡೀ ಜಾರ್ಖಂಡಿನಲ್ಲಿ ಇದೇ ಸ್ಥಿತಿ ಇದೆ” ಎಂದು ಹೇಳಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಅನುಪ ರಾಯ ಇವರು ಪ್ರತಿಕ್ರಿಯಿಸುತ್ತಾ `ಶಾಲೆಯ ವ್ಯವಸ್ಥಾಪನ ಸಮಿತಿಯ ಜನರ ತಾಲಿಬಾನಿ ಆದೇಶದ ಮೇಲೆ ವಿಶ್ವಾಸವಿದೆ’ಎಂದು ಹೇಳಿದ್ದಾರೆ.