ಆರ್ಯನ್ ಖಾನ್ ಬಳಿ 1 ಲಕ್ಷ 33 ಸಾವಿರ ರೂಪಾಯಿ ಮೌಲ್ಯದ ಮಾದಕ ವಸ್ತುಗಳು ಪತ್ತೆ

ನೈತಿಕ ಮೌಲ್ಯ ಹಾಗೂ ಧರ್ಮಶಿಕ್ಷಣದ ಅಭಾವದಿಂದ ಯುವ ಪೀಳಿಗೆಯು ಶಾರೂಖ ಖಾನರಂತಹ ಚಿತ್ರನಟರನ್ನು ಆದರ್ಶರೆಂದು ತಿಳಿಯುತ್ತಾರೆ. ಈಗ ಶಾರೂಖರವರ ಮಗನ ಮೇಲಿರುವ ಗಂಭೀರ ಆರೋಪದಿಂದಲಾದರೂ ಯುವಕರು ತಮಗೆ ಯಾರು ಆದರ್ಶವಾಗಿರಬೇಕು, ಎಂಬ ಬಗ್ಗೆ ಅಂತರ್ಮುಖರಾಗಿ ಯೋಚಿಸುವುದು ಅಗತ್ಯ !- ಸಂಪಾದಕರು 

ಆರ್ಯನ್ ಖಾನ್

ಮುಂಬೈ – ಕೇಂದ್ರೀಯ ಮಾದಕ ದ್ರವ್ಯ ನಿಯಂತ್ರಣ ದಳವು ‘ಕಾರ್ಡೇಲಿಯಾ ಕ್ರೂಸ್’ ಹೆಸರಿನ ಹಡಗಿನಲ್ಲಿ ನಡೆಸಿದ ದಾಳಿಯಲ್ಲಿ ಬಂಧಿಸಲಾದ ಆರ್ಯನ್ ಖಾನನ ಬಳಿ 13 ಗ್ರಾಮ್ ಕೋಕೇನ, 5 ಗ್ರಾಮ್ ಎಮ್‍ಡಿ, 21 ಗ್ರಾಮ್ ಚರಸ್ ಹಾಗೂ ಎಮ್‍ಡಿಎಮ್‍ಎಚ್‍ನ 22 ಮಾತ್ರೆಗಳು ಸಿಕ್ಕಿದೆ. ಇವೆಲ್ಲದರ ಮೌಲ್ಯ 1 ಲಕ್ಷ 33 ಸಾವಿರ ರೂಪಾಯಿಗಳಿಷ್ಟಿದೆ ಎಂಬ ಮಾಹಿತಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ನೀಡಿದರು.

ಈ ದಾಳಿಯಲ್ಲಿ ಕೋಕೇನ್, ಚರಸ್, ಹಶೀಶ, ಎಮ್‍ಡಿ, ಎಮ್‍ಡಿಎಮ್‍ಎ ಇತ್ಯಾದಿ ಮಾದಕ ವಸ್ತುಗಳು ಸಿಕ್ಕಿವೆ. ಸ್ಯಾನಿಟರಿ ಪ್ಯಾಡ್, ಹ್ಯಾಂಡಬ್ಯಾಗ್, ಶರ್ಟ್‍ನ ತೋಳುಗಳ ಮಾಧ್ಯಮದಿಂದ ಈ ಮಾದಕ ವಸ್ತುಗಳನ್ನು ‘ಕ್ರೂಸ್’ಗೆ ಕೊಂಡೊಯ್ಯಲಾಯಿತು. ಆರ್ಯನ್ ಖಾನ್ 4 ವರ್ಷಗಳಿಂದ ಮಾದಕ ವಸ್ತುಗಳನ್ನು ಸೇವಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅವನು ಕಣ್ಣಿಗೆ ಹಾಕಿಕೊಳ್ಳುವ `ಲೆನ್ಸ್’ನ ಡಬ್ಬಿಯಿಂದ ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದನು. ಆರ್ಯನ್‍ನ ಸಂಚಾರವಾಣಿಯಲ್ಲಿ ಅಮಲು ಪದಾರ್ಥಗಳನ್ನು ಪೂರೈಸುವುದರ ಸಂದೇಶ ಕೂಡ ಸಿಕ್ಕಿರುವ ಮಾಹಿತಿಯನ್ನು ಮಾದಕ ದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ನೀಡಲಾಗಿದೆ. ಆರ್ಯನನ ಬಂಧನದ ಬಳಿಕ ಹಿಂದಿ ಚಲನಚಿತ್ರದ ಕೆಲವು ಕಲಾವಿದರು ಅವನ ವಿಷಯದಲ್ಲಿ ಸಹಾನುಭೂತಿಯನ್ನು ತೋರಿಸಿದ್ದಾರೆ.