ದೇಶದ 72 ವಿದ್ಯುತ್ ಕೇಂದ್ರಗಳಲ್ಲಿ ಕಲ್ಲಿದ್ದಲಿನ ಕೊರತೆ
ನವ ದೆಹಲಿ – ಚೀನಾದಲ್ಲಿ ಪ್ರಸ್ತುತ ಉಷ್ಣ ಕಲ್ಲಿದ್ದಲಿನ ಕೊರತೆಯು ಅಭೂತಪೂರ್ವ ವಿದ್ಯುತ್ ಬಿಕ್ಕಟ್ಟನ್ನು ಸೃಷ್ಟಿಸಿದೆ. ಅದರ ನಂತರ ಈಗ ಭಾರತದಲ್ಲಿಯೂ ಈ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಕೇಂದ್ರದ ಇಂಧನ ಸಚಿವಾಲಯ ಮತ್ತು ಏಜನ್ಸಿಯ ಅಂಕಿ ಅಂಶಗಳ ಪ್ರಕಾರ ತಜ್ಞರು ಈ ಸಾಧ್ಯತೆಯನ್ನು ಹೇಳಿದ್ದಾರೆ. ಈ ಅಂಕಿಅಂಶಗಳ ಪ್ರಕಾರ ದೇಶದ ಒಟ್ಟು 135 ಉಷ್ಣ ವಿದ್ಯುತ್ ಉತ್ಪಾದನಾ ಕೇಂದ್ರಗಳ ಪೈಕಿ ಕೇವಲ 72 ಕೇಂದ್ರದಲ್ಲಿ 3 ದಿನಗಳಿಗಾಗುವಷ್ಟು ಕಲ್ಲಿದ್ದಲು ಉಳಿದುಕೊಂಡಿದೆ. 135 ಉಷ್ಣ ವಿದ್ಯುತ್ ಕೇಂದ್ರದಲ್ಲಿ ಒಟ್ಟು ಶೇ. 66.35 ವಿದ್ಯುತ್ ಅನ್ನು ಉತ್ಪಾದಿಸಲಾಗುತ್ತದೆ. ಒಂದು ವೇಳೆ 72 ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಲ್ಲಿದ್ದಲಿನ ಅಭಾವದಿಂದಾಗಿ ಮುಚ್ಚಿದರೆ, ಸಾಧಾರಣ ಶೇ. 33 ರಷ್ಟು ವಿದ್ಯುತ್ ಉತ್ಪಾದನೆ ಕಡಿಮೆಯಾಗುತ್ತದೆ.
ಭಾರತ ಆಸ್ಟ್ರೇಲಿಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯ ಚೀನಾದ ಬಂದರಿನಲ್ಲಿ ಭಾರತಕ್ಕೆ ಬರುವ 20 ಲಕ್ಷಕ್ಕೂ ಹೆಚ್ಚು ಟನ್‍ಗೂ ಹೆಚ್ಚು (200 ಕೋಟಿ ಕೇಜಿಗಳಿಗಿಂತಲೂ ಹೆಚ್ಚು) ಉಷ್ಣ ಕಲ್ಲಿದ್ದಲುಗಳು ಅನೇಕ ತಿಂಗಳುಗಳಿಂದ ಹಾಗೇ ಬಿದ್ದುಕೊಂಡಿವೆ. ಚೀನಾದ ಬಂದರಿನಲ್ಲಿ ಕಲ್ಲಿದ್ದಲು ಹಾಗೆ ಉಳಿದು ಕೊಂಡಿರುವುದರಿಂದ ಭಾರತದಲ್ಲಿ ವಿದ್ಯುತ್ತಿನ ಬಿಕ್ಕಟ್ಟು ಉಂಟಾಗಬಹುದು.