ಹಿಂದೂ ರಾಷ್ಟ್ರದ ಬೇಡಿಕೆಗೋಸ್ಕರ ಜಲಸಮಾಧಿ ಪಡೆದುಕೊಳ್ಳುವ ಘೋಷಣೆಯನ್ನು ಹಿಂಪಡೆದ ಮಹಂತ ಪರಮಹಂಸ ದಾಸರು

ಈಗ 7 ನವಂಬರ 2023 ರಿಂದ ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಅಮರಣಾಂತ ಉಪವಾಸ ಮಾಡಲಿದ್ದಾರೆ !

2023 ರಲ್ಲಿ ಭಾರತದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿಕ್ಕಿರುವುದರಿಂದ ಆ ರೀತಿ ಉಪವಾಸ ಮಾಡುವ ಅಗತ್ಯವಿಲ್ಲ; ಆದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಂತ-ಮಹಂತರು ಆ ರೀತಿ ದೇಶದಾದ್ಯಂತ ಜಾಗೃತಿ ಮೂಡಿಸಿ ಹಿಂದೂಗಳನ್ನು ಸಂಘಟಿಸಬೇಕು ! ಸಂಪಾದಕರು 

ಮಹಂತ ಪರಮಹಂಸ ದಾಸ

ಅಯೋಧ್ಯಾ (ಉತ್ತರಪ್ರದೇಶ) – ಅಕ್ಟೋಬರ್ 1 ರವರೆಗೂ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸದೆ ಹೋದರೆ ಅಕ್ಟೋಬರ 2 ರಂದು ಜಲಸಮಾಧಿ ತೆಗೆದುಕೊಳ್ಳುವೆನು, ಎಂದು ಘೋಷಿಸಿದ ಅಲ್ಲಿನ ತಪಸ್ವಿ ಛಾವಣಿಯ ಮಹಂತ ದಾಸರವರು ಈಗ ನವಂಬರ 7 2023 ರಿಂದ ದೆಹಲಿಯ ರಾಮಲೀಲಾ ಮೈದಾನದಲ್ಲಿ ಅಮರಣಾಂತ ಉಪವಾಸ ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರಕಾರವು ಅಕ್ಟೋಬರ 1 ರ ಒಳಗೆ ‘ಹಿಂದೂ ರಾಷ್ಟ್ರ’ವೆಂದು ಘೋಷಿಸದೆ ಹೋದರೆ ಮಹಂತ ಪರಮಹಂಸ ದಾಸರವರು ಜಲಸಮಾಧಿ ತೆಗೆದುಕೊಳ್ಳುವರೇ? ಎಂಬುದನ್ನು ನೋಡಲು ತಪಸ್ವೀ ಛಾವಣಿಯ ಹೊರಗೆ ದೊಡ್ಡ ಗುಂಪು ಸೇರಿತ್ತು. ಅಲ್ಲಿ ಪೊಲೀಸರ ದೊಡ್ಡ ಬಿಗಿ ಭದ್ರತೆಯಿತ್ತು.

ಮಹಂತ ಪರಮಹಂಸ ದಾಸರವರು “ವಿವಿಧ ಹಿಂದುತ್ವನಿಷ್ಠ ಸಂಘಟನೆಗಳು ರಾಷ್ಟ್ರೀಯ ಅಧ್ಯಕ್ಷರು ಹಾಗೂ ಕೋಟಿಗಟ್ಟಲೆ ಹಿಂದೂಗಳ ಮನವಿಯಿಂದ ನಾನು ಜಲಸಮಾಧಿ ತೆಗೆದುಕೊಳ್ಳುವ ವಿಚಾರವನ್ನು ರದ್ದು ಪಡಿಸಿದ್ದೇನೆ. ನಾವೆಲ್ಲರೂ ಸೇರಿ ಪ್ರಯತ್ನಿಸೋಣ ಹಾಗೂ ಪ್ರಧಾನಮಂತ್ರಿ ಮೋದಿಯವರ ನೇತೃತ್ವದಡಿಯಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸೋಣ” ಎಂದು ನುಡಿದರು.