ಭಾರತದಲ್ಲಿಯೂ ವಿದ್ಯುತ್ ಬಿಕ್ಕಟ್ಟು ಎದುರಾಗುವ ಸಾಧ್ಯತೆ

ನವ ದೆಹಲಿ – ಚೀನಾದಂತೆಯೇ ಭಾರತದಲ್ಲಿಯೂ ವಿದ್ಯುತ್ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ. ದೇಶದಲ್ಲಿರುವ ಉಷ್ಣ ವಿದ್ಯುತ್ ಘಟನೆಗಳು ಇದ್ದಿಲು ಸಮಸ್ಯೆಯನ್ನು ಎದುರಿಸುತ್ತಿದೆ. ಅನೇಕ ವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ನಿಂತಿದ್ದು ಇನ್ನೂ ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆಯೂ ನಿಲ್ಲುವ ಮಾರ್ಗದಲ್ಲಿದೆ. ಭಾರತವು ಆಸ್ಟ್ರೇಲಿಯಾದಿಂದ ಇದ್ದಿಲನ್ನು ಆಮದು ಮಾಡಿಕೊಳ್ಳುತ್ತದೆ. ಪ್ರಸ್ತುತ ಚೀನಾದ ಬಂದರುಗಳಲ್ಲಿ ಭಾರತಕ್ಕೆ ಬರುವ ೨೦ ಲಕ್ಷ ಟನ್‌ಗಿಂತ ಹೆಚ್ಚು (೨೦೦ ಕೋಟಿ ಕಿಲೋಗಿಂತಲೂ ಹೆಚ್ಚು) ಉಷ್ಣ ಇದ್ದಿಲು ಅನೇಕ ತಿಂಗಳುಗಳಿಂದ ಬಿದ್ದಿದೆ. ಚೀನಾದ ಬಂದರುಗಳಲ್ಲಿ ಇದ್ದಿಲು ಹೇಗೆ ಇರುವುದರಿಂದ ಭಾರತದಲ್ಲಿ ವಿದ್ಯುತ್ ಸಂಕಷ್ಟ ಎದುರಾಗಬಹುದು. ಪ್ರಸ್ತುತ ಭಾರತಕ್ಕೆ ಆಸ್ಟ್ರೇಲಿಯಾವು ೧೨ ಇಂದ ೧೫ ಡಾಲರ್ ಪ್ರತಿ ಟನ್ ಬೆಲೆಗೆ ಇದ್ದಿಲನ್ನು ಮಾರಾಟ ಮಾಡುತ್ತಿದೆ. ಇದು ಜಗತ್ತಿನಲ್ಲೇ ಎಲ್ಲಕ್ಕಿಂತ ಕಡಿಮೆ ಬೆಲೆಯ ಇದ್ದಿಲಾಗಿದ್ದು ಅದರ ಗುಣಮಟ್ಟವು ಸಹ ಚೆನ್ನಾಗಿದೆ.